Just In
Don't Miss
- News
ಕೇಂದ್ರ ಬಜೆಟ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಜೆಟ್ ಬಗ್ಗೆ ಭಾರೀ ಮೆಚ್ಚುಗೆ!
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Movies
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟರ್ಕಿಯ ಸಂಶೋಧಕನಿಂದ 'ಘೋಸ್ಟ್ ಫೋನ್' ಆವಿಷ್ಕಾರ!
ಇತ್ತೀಚೆಗೆ ತಾನೆ ಕನ್ನಡ ಗಿಜ್‌ಬಾಟ್‌ನಲ್ಲಿ ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್ ಸಂಶೋಧನೆ ಬಗ್ಗೆ ಮಾಹಿತಿ ತಿಳಿಸಿದ್ದೆವು. ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ವಿನೂತನ ಸ್ಮಾರ್ಟ್‌ಫೋನ್‌ಗಳ ಎಂಟ್ರಿ ಏನು ಹೊಸದೇನಲ್ಲ. ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್ ನಂತರ ಎಲ್ಲರಿಗೂ ಹೆಸರೇ ಬೆಚ್ಚ ಬೀಳಿಸುವ "ಘೋಸ್ಟ್ ಫೋನ್"(Ghost Phone) ಸಂಶೋಧನೆ ಗೊಂಡಿದೆ.
ಅಂದಹಾಗೆ 'ಘೋಸ್ಟ್ ಫೋನ್' ಎಂದ ತಕ್ಷಣ ಭೂತದ ಫೋನ್ ಅಂತ ತಿಳಿಯಬೇಡಿ. ಈ ಫೋನ್ ಪ್ರಪಂಚದ ಮೊಬೈಲ್ ಕ್ಷೇತ್ರದಲ್ಲೇ ವಿಸ್ಮಯವಾದ ಫೋನ್ ಎನ್ನಲಾಗಿದೆ.
'ಘೋಸ್ಟ್ ಫೋನ್'ನ ವಿಸ್ಮಯವಾದ ವಿಶೇಷ ಗುಣ ಅಂದ್ರೆ ನೀವು ಫೋನ್ ಬಳಸುತ್ತಿರುವಾಗ ನಿಮ್ಮ ಸ್ನೇಹಿತರು ಅಥವಾ ಇತರರು ನಿಮ್ಮ ಫೋನ್ ಇಣುಕಿ ನೋಡಿದರು ಸಹ ಅವರಿಗೆ ಏನು ಕಾಣುವುದಿಲ್ಲ. ಫೋನ್‌ನಲ್ಲಿನ ಚಾಟ್, ಮೆಸೇಜ್, ಇಮೇಲ್, ವಯಕ್ತಿಕ ಮಾಹಿತಿಗಳು ನಿಮ್ಮ ಕಣ್ಣಿಗೆ ಮಾತ್ರ ಕಾಣುವುದು. ಈ ಫೋನ್ ಬಗ್ಗೆ ಇತರೆ ಕುತೂಹಲಕಾರಿ ಮಾಹಿತಿ ತಿಳಿಯಲು ಲೇಖನದ ಸ್ಲೈಡರ್ ಓದಿರಿ.
'ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್' ಖರೀದಿಗೆ ರೆಡಿ!! ಚಿತ್ರ ಕೃಪೆ: caters news agency

ಟರ್ಕಿಯ ಸಂಶೋಧಕನಿಂದ 'ಘೋಸ್ಟ್ ಫೋನ್' ಆವಿಷ್ಕಾರ!
ನಿಮ್ಮ ಫೋನ್‌ನಲ್ಲಿನ ಮೆಸೇಜ್, ಚಾಟ್‌ಗಳು, ಇಮೇಲ್‌ಗಳನ್ನು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಓದುತ್ತಿದ್ದರೂ ಸಹ ಅದು ನಿಮ್ಮ ಕಣ್ಣಿಗೆ ಮಾತ್ರ ಕಾಣುತ್ತದೆ. ಅಂದರೆ ಇತರೆ ಸಾರ್ವಜನಿಕರು ಇಣುಕಿ ನಿಮ್ಮ ಫೋನ್ ನೋಡಿದರೂ ಸಹ ನಿಮ್ಮ ವಯಕ್ತಿಕ ಮಾಹಿತಿಗಳು ಅವರಿಗೆ ಕಾಣುವುದಿಲ್ಲ.

ಟರ್ಕಿಯ ಸಂಶೋಧಕನಿಂದ 'ಘೋಸ್ಟ್ ಫೋನ್' ಆವಿಷ್ಕಾರ!
ಟರ್ಕಿಯ ದಿಯರ್‌ಬಕಿರ್ ಪ್ರದೇಶದ 'ಸೆಲಾಲ್ ಗೊಗೆರ್' ಎಂಬ ಸಂಶೋಧಕ 'ಘೋಸ್ಟ್ ಫೋನ್' ಅಭಿವೃದ್ದಿಪಡಿಸಿದ್ದು, ಐಫೋನ್‌ನ ಮಾಹಿತಿಯನ್ನು ಬಚ್ಚಿಡಲು ವಿಶೇಷ ಸ್ಕ್ರೀನ್ ಮತ್ತು ಗ್ಲಾಸ್ ಅನ್ನು ಬಳಸಿಕೊಂಡು ವಿನೂತನ ಫೋನ್ ಅನ್ನು ಅಭಿವೃದ್ದಿಪಡಿಸಿದ್ದಾರೆ.

ಟರ್ಕಿಯ ಸಂಶೋಧಕನಿಂದ 'ಘೋಸ್ಟ್ ಫೋನ್' ಆವಿಷ್ಕಾರ!
ಟರ್ಕಿಯ ಸಂಶೋಧಕರಾದ 'ಸೆಲಾಲ್ ಗೊಗೆರ್' ಕೇವಲ 4 ತಿಂಗಳ ಅವಧಿಯಲ್ಲಿ ವಿನೂತನ 'ಘೋಸ್ಟ್ ಫೋನ್' ಅಭಿವೃದ್ದಿ ಪಡಿಸಿ ಫೋನ್‌ಗೆ 'C COGER I' ಎಂದು ಹೆಸರಿಡಲು ಯೋಜಿಸಿದ್ದರಂತೆ.

ಟರ್ಕಿಯ ಸಂಶೋಧಕನಿಂದ 'ಘೋಸ್ಟ್ ಫೋನ್' ಆವಿಷ್ಕಾರ!
"ನನಗೇನಾದರೂ ಹಣಕಾಸು ನೆರವು ದೊರೆತಲ್ಲಿ, ''ಘೋಸ್ಟ್ ಫೋನ್' ಬಗ್ಗೆ ಇತರೆ ಯೋಜನೆ ರೂಪಿಸುತ್ತಿದ್ದೇನೆ. ಬಳಕೆದಾರರು ಬೇಕಾದರೆ 'ಘೋಸ್ಟ್ ಫೋನ್'ನಲ್ಲಿನ ತಮಗೆ ಮಾತ್ರ ಪ್ರದರ್ಶನವಾಗುವ ಫೀಚರ್ ಅನ್ನು ಬೇಕಾದರೆ ಆನ್ ಮತ್ತು ಆಫ್ ಮಾಡಿಕೊಳ್ಳುವ ಬಟನ್ ಅನ್ನು ಇನ್‌ಸ್ಟಾಲ್ ಮಾಡುತ್ತೇನೆ", ಎಂದು ಹೇಳಿದ್ದಾರೆ.

ಟರ್ಕಿಯ ಸಂಶೋಧಕನಿಂದ 'ಘೋಸ್ಟ್ ಫೋನ್' ಆವಿಷ್ಕಾರ!
" 'ಘೋಸ್ಟ್ ಫೋನ್' ಬಳಸುವ ಒಂದು ಚಿಪ್ ಸ್ಕ್ರೀನ್ ಬಿಳಿಯಾಗಿ ಕಾಣಲು ಉಪಯೋಗವಾಗುತ್ತದೆ. ಎರಡನೇ ಚಿಪ್ ಜೋಡಿ ಗ್ಲಾಸ್‌ಗಳೊಂದಿಗೆ ಫೋನ್‌ಗೆ ಕನೆಕ್ಟ್ ಆಗಿ ಫೋನ್ ನೋಡುಗರಿಗೆ ಮಾತ್ರ ಸ್ಕ್ರೀನ್ ಪ್ರದರ್ಶನವಾಗಲು ಸಹಾಯಕವಾಗಿದೆ", ಎಂದು ಫೋನ್ ಸಂಶೋಧಕ ಹೇಳಿದ್ದಾರೆ.

ಟರ್ಕಿಯ ಸಂಶೋಧಕನಿಂದ 'ಘೋಸ್ಟ್ ಫೋನ್' ಆವಿಷ್ಕಾರ!
" ಕೆಲವರು ಫೋನ್‌ನಲ್ಲಿ ಹೆಚ್ಚು ವಯಕ್ತಿಕ ಮಾಹಿತಿಯನ್ನು ಹೊಂದಿರುತ್ತಾರೆ, ಇತರರು ನೋಡಿದರೆ ಬಹುಶಃ ಅಗೌರವ ಆಗಬಹುದು ಎಂಬ ಮನೋಭಾವವು ಇರುತ್ತದೆ. ಆದ್ದರಿಂದ ಈ ಸಂಶೋಧನೆ ಮುಗಿದ ನಂತರ ಹಲವರಿಗೆ ಹೇಳಿದರೆ ಅವರು ನಂಬಲಿಲ್ಲ. ಆದರೆ ನನ್ನ ಸಂಶೋಧನೆ ನೋಡಿದ ನಂತರ ಅವರು ಇದೊಂದು ರೀತಿಯ ಮ್ಯಾಜಿಕ್ ಎಂದು ಪ್ರಶಂಸಿಸಿದ ಮಾಹಿತಿಯನ್ನು" 'ಸೆಲಾಲ್ ಗೊಗೆರ್' ವ್ಯಕ್ತಪಡಿಸಿದ್ದಾರೆ.

ಟರ್ಕಿಯ ಸಂಶೋಧಕನಿಂದ 'ಘೋಸ್ಟ್ ಫೋನ್' ಆವಿಷ್ಕಾರ!
ಮಾಹಿತಿ ಪ್ರಕಾರ ಮೇಲೆ ತಿಳಿಸಿದ ಸಂಶೋಧನೆ ಹೊರತುಪಡಿಸಿ ಇತರೆ ಯಾವುದೇ ಮಾಹಿತಿಯು ಖಚಿತವಾಗಿಲ್ಲ. ಅಲ್ಲದೇ 'ಘೋಸ್ಟ್ ಫೋನ್" ಬೆಲೆ ಎಷ್ಟು, ಮಾರುಕಟ್ಟೆಗೆ ಯಾವಾಗ ಬರುತ್ತದೆ ಎಂಬ ಮಾಹಿತಿಯು ಖಚಿತವಾಗಿಲ್ಲ.

ಗಿಜ್‌ಬಾಟ್

ಗಿಜ್‌ಬಾಟ್
ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್.ಕಾಂ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470