'ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್‌' ಖರೀದಿಗೆ ರೆಡಿ!!

By Suneel
|

ಕಳೆದ ಒಂದು ವರ್ಷದಲ್ಲಿ ಹರಿದಾಡುತ್ತಿದ್ದ ಮಾಹಿತಿ ಇದು. ಅಮೆರಿಕದ ಸ್ಯಾನ್‌ ಫ್ರ್ಯಾನ್ಸಿಸ್ಕೋ ಮೂಲದ 'ಮೊನೊಹ್ಮ್' ಕಂಪನಿ ಪಾಕೆಟ್‌ ಗಾತ್ರದ ಅನನ್ಯ ರೀತಿಯ ಸ್ಮಾರ್ಟ್‌ಫೋನ್‌ ಅನ್ನೂ ಶೀಘ್ರದಲ್ಲೇ ಮೊಬೈಲ್‌ ಮಾರುಕಟ್ಟೆಯಲ್ಲಿ ನೋಡುತ್ತೀರಿ ಎಂದು ಹೇಳಿತ್ತು. ಅದು ಸ್ಮಾರ್ಟ್‌ಫೋನ್‌ಗಳು ಕ್ರಿಯೇಟಿವಿಟಿ ಕಳೆದುಕೊಳ್ಳುವ ಕಾಲವು ಸಹ ಆಗಿತ್ತು.


ಆದರೆ ಈಗ ಎಲ್ಲರೂ ಸಹ 'ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್‌'(Flying saucer smartphone) ಅನ್ನು ಮುಂಚಿತವಾಗಿ ಬುಕ್‌ ಮಾಡಬಹುದಾಗಿದೆ. ಅಮೆರಿಕದ 'ಮೊನೊಹ್ಮ್‌' ಕಂಪನಿ ಅನನ್ಯ ರೀತಿಯಲ್ಲಿ ವಿನ್ಯಾಸ ಮಾಡಿರುವ 'ಫ್ಲೈಯಿಂಗ್ ಸಾಸರ್' ಸ್ಮಾರ್ಟ್‌ಫೋನ್‌ ಅನ್ನು ಮುಂಚಿತವಾಗಿ ಬುಕ್‌ ಮಾಡಬಹುದು ಎಂದು ಬುಧವಾರ (ಜೂನ್‌ 15) ರಂದು ಮಾಹಿತಿ ಪ್ರಕಟಣೆ ಮಾಡಿದೆ. " ರನ್‌ಸಿಬಲ್‌ ಸರ್ಕ್ಯೂಲಾರ್‌ ಫೋನ್‌ " ಬಗ್ಗೆ ವಿಶೇಷ ಮಾಹಿತಿ ತಿಳಿಯಲು ಮತ್ತು ಮುಂಗಡವಾಗಿ ಕಾಯ್ದಿರಿಸಲು ಮುಂದೆ ಓದಿರಿ.
ಫೋಟೋ ಕೃಪೆ:monohm

18 ತಿಂಗಳು ಹೃದಯವಿಲ್ಲದೇ ಬದುಕಿದ ಯುವಕ!!

ವೀಡಿಯೊ ಕೃಪೆ:vimeo.com

Runcible Preorder Announcement from The Clock Factory on Vimeo.

1

1

ಅಮೆರಿಕದ ಸ್ಯಾನ್‌ ಫ್ರ್ಯಾನ್ಸಿಕೊ ಮೂಲದ 'ಮೊನೊಹ್ಮ್‌' ಕಂಪನಿ ಅಭಿವೃದ್ದಿ ಪಡಿಸಿರುವ ವಿನೂತನ ವಿನ್ಯಾಸ ಹೊಂದಿರುವ ಹೊಸ ಸ್ಮಾರ್ಟ್‌ಫೋನ್‌ ನೋಡಲು ಏಲಿಯನ್‌ಗಳ 'ಫ್ಲೇಯಿಂಗ್ ಸಾಸರ್‌' ನಂತೆ ಇದೆ. ಆದರಿಂದ ಕಂಪನಿಯ 'ರನ್‌ಸಿಬಲ್‌ ಸರ್ಕ್ಯೂಲಾರ್‌ ಫೋನ್‌' ಅನ್ನು 'ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್‌" ಎಂದು ಕರೆಯಲಾಗಿದೆ. ಅಲ್ಲದೇ ಕೇವಲ ಪಾಕೆಟ್‌ ವಾಚ್‌ ಗಾತ್ರದ ಸ್ಮಾರ್ಟ್‌ಫೋನ್‌ ಇದ.

2

2

'ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್‌' ಬೆಲೆ $399 (26,828 ರೂ). ರನ್‌ಸಿಬಲ್‌ ಹೊರಕವಚವನ್ನು ಪೆಸಿಫಿಕ್‌ ಪ್ಲಾಸ್ಟಿಕ್‌ನಿಂದ ವ್ಯವಸ್ಥೆಗೊಳಿಸಲಾಗಿದೆ ಎಂದು ಕಂಪನಿ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

3

3

ಕಳೆದ ವರ್ಷ 'ಮೊಬೈಲ್‌ ವರ್ಲ್ಡ್‌ ಕಾಂಗ್ರೇಸ್'ನಲ್ಲಿ 'ಮೊನೊಹ್ಮ್‌' ಕಂಪನಿ ವಿಶೇಷ ಎಡಿಸನ್‌ನ 'ವುಡ್‌ ಗ್ರೈನ್' ಮಾದರಿಯ ಸ್ಮಾರ್ಟ್‌ಫೋನ್‌ ನೀಡುವುದಾಗಿ ಹೇಳಿತ್ತು. ಅದರ ಬೆಲೆ $499 ಇರಲಿದೆ ಎಂದು ಸಹ ಹೇಳಿತ್ತು. ಆದರೆ ಈಗ ಕಂಪನಿ ಹಿಂದೆ ಹೇಳಿದ ಬೆಲೆಗಿಂತ $100 ಕಡಿಮೆ ಬೆಲೆಯಲ್ಲಿ 'ಫ್ಲೈಯಿಂಗ್ ಸಾಸರ್' ಸ್ಮಾರ್ಟ್‌ಫೋನ್‌ ನೀಡುತ್ತಿದೆ.

4

4

ಏಲಿಯನ್‌ಗಳ ವಾಹನ ಫ್ಲೈಯಿಂಗ್ ಸಾಸರ್ನಂತೆ ಇರುವ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಸಿಮ್‌ ಕಾರ್ಡ್‌ ಬಳಸಬಹುದು ಎನ್ನಲಾಗಿದೆ. ಕ್ವಾಡ್‌ಕೋರ್‌ ಸ್ನಾಪ್‌ಡ್ರಾಗನ್‌ 410 ಪ್ರೊಸೆಸರ್ಸ್‌ ಹೊಂದಿದೆ.

5

5

ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್‌ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಕೊಂಚ ವ್ಯತ್ಯಾಸವಿದೆ. ಇಂಟರ್ನೆಟ್‌ ಮಾಹಿತಿ ಸರ್ಚ್‌ಗಾಗಿ ಹಿಂದೆ ಹೇಳಿದ್ದ 'ಫೈಯರ್‌ಫಾಕ್ಸ್‌ ಓಎಸ್‌(Mozilla)' ನೀಡುವ ಬದಲಾಗಿ 'ಮೊನೊಹ್ಮ್‌'ನ ಆಂಡ್ರಾಯ್ಡ್‌ ಆಧಾರಿತ 'BuniOS' ಸರ್ಚ್‌ ಇಂಜಿನ್‌ ನೀಡಲಿದೆ.

6

ರನ್‌ಸಿಬಲ್‌ನಲ್ಲಿ ಬ್ಲೂಟೂತ್‌ ಅನುಭವ ಪಡೆಯಬಹುದಾಗಿದ್ದು, ಕೆಲವು ಲಿಮಿಟ್‌ಗಳನ್ನು ಹೊಂದಿದೆ. ಹೆಚ್ಚು ಫೀಚರ್‌ ಸಿಗದಿರಬಹುದು. ಆದರೆ ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ಹೊಸ ರೀತಿಯ ಫನ್‌ ನೀಡುವಲ್ಲಿ ಸಂಶಯವಿಲ್ಲ. ಫೋನ್‌ ಡಿಲಿವರಿ ಸೆಪ್ಟೆಂಬರ್‌ನಿಂದ ಪ್ರಾರಂಭವಾಗಲಿದೆ, ಫೋನ್‌ ಡಿಲಿವರಿಯನ್ನು ಎಲ್ಲೆಲ್ಲಿ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಖಚಿತವಾಗಿ ನೀಡಿಲ್ಲ.
ರನ್‌ಸಿಬಲ್‌ ಸ್ಮಾರ್ಟ್‌ಫೋನ್‌ ಅನ್ನು ಮುಂಚಿತವಾಗಿ ಬುಕ್‌ ಮಾಡಲು ಕ್ಲಿಕ್‌ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

18 ತಿಂಗಳು ಹೃದಯವಿಲ್ಲದೇ ಬದುಕಿದ ಯುವಕ!!18 ತಿಂಗಳು ಹೃದಯವಿಲ್ಲದೇ ಬದುಕಿದ ಯುವಕ!!

'ಬಾಕ್ಸರ್‌ನ ಗರ್ಲ್‌ಫ್ರೆಂಡ್‌ ಮೇಲೆ ಸಿಗರೇಟ್‌ ಎಸೆದ ಹುಡುಗರು' ಆಮೇಲೆ? 'ಬಾಕ್ಸರ್‌ನ ಗರ್ಲ್‌ಫ್ರೆಂಡ್‌ ಮೇಲೆ ಸಿಗರೇಟ್‌ ಎಸೆದ ಹುಡುಗರು' ಆಮೇಲೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Remember that flying saucer smartphone, Now you can actually buy it. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X