ದೀರ್ಘ ಬ್ಯಾಟರಿ ಬಾಳಿಕೆಯುಳ್ಳ ಟಾಪ್ ಸ್ಮಾರ್ಟ್‌ಫೋನ್‌ಗಳು

Written By:

ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹಲವಾರು ಅವಶ್ಯಕತೆಗಳಿಗಾಗಿ ನಾವು ಬಳಸುತ್ತೇವೆ. ಗೇಮಿಂಗ್, ಫೋಟೋ ತೆಗೆಯಲು, ವೀಡಿಯೊ ಮಾಡಲು, ಸಿನಿಮಾಗಳನ್ನು ನೋಡಲು, ಹಾಡು ಕೇಳಲು ಹೀಗೆ ಹಲವಾರು ಅಗತ್ಯಗಳನ್ನು ಪೂರೈಸಿಕೊಳ್ಳಲು ಇಂದು ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ನಾವು ಮಾಡುತ್ತಿದ್ದೇವೆ. ಆದರೆ ಇದೆಲ್ಲಾ ಕಾರ್ಯಗಳನ್ನು ನಿರ್ವಹಿಸಲು ಸ್ಮಾರ್ಟ್‌ಫೋನ್‌ಗೆ ಬ್ಯಾಟರಿ ಅತ್ಯವಶ್ಯಕವಾಗಿದೆ.

ಓದಿರಿ: ಸೆಲ್ಫಿಗಾಗಿ ಹೇಳಿಮಾಡಿಸಿದ ಬಜೆಟ್ ಬೆಲೆಯ ಫೋನ್ಸ್

ನಿಮ್ಮ ತುರ್ತು ಕೆಲಸಗಳ ಸಂದರ್ಭದಲ್ಲಿ ಫೋನ್ ಬ್ಯಾಟರಿ ಕೈಕೊಟ್ಟಿತು ಎಂದಾದಲ್ಲಿ ಅದು ನಿರಾಸೆಯನ್ನೇ ಉಂಟುಮಾಡುತ್ತದೆ. ಹಾಗಿದ್ದರೆ ಬ್ಯಾಟರಿ ಸಮಸ್ಯೆಯನ್ನು ನಿವಾರಿಸಲು ಬ್ಯಾಕಪ್ ನೀಡುವ ಫೋನ್‌ಗಳನ್ನು ನೀವು ಖರೀದಿಸಬೇಕಾಗುತ್ತದೆ ಅಲ್ಲವೇ? ಅದಕ್ಕೆಂದೇ ಇಂದಿನ ಲೇಖನದಲ್ಲಿ ಉತ್ತಮ ಬ್ಯಾಟರಿ ಬ್ಯಾಕಪ್ ಉಳ್ಳ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ಇದು ಬಜೆಟ್‌ಗೆ ತಕ್ಕುದುದಾಗಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 8,999

ಬೆಲೆ ರೂ: 8,999

ಅಸೂಸ್ ಜೆನ್‌ಫೋನ್ ಮ್ಯಾಕ್ಸ್

ಇದರ ಬ್ಯಾಟರಿ 5,000mAh ಆಗಿದ್ದು ಸ್ನ್ಯಾಪ್‌ಡ್ರ್ಯಾಗನ್ 652 ನೊಂದಿಗೆ ಅತ್ಯಾಧುನಿಕ ಆಂಡ್ರಾಯ್ಡ್ ಮಾರ್ಶ್ ಮಲ್ಲೊ 6.0.1 ಓಎಸ್‌ನೊಂದಿಗೆ ಬಂದಿದೆ. ಫೋನ್ 5.5 ಇಂಚಿನ 720 ಪಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 2 ಜಿಬಿ RAM ಇದರಲ್ಲಿದೆ

ಬೆಲೆ ರೂ: 26,999

ಬೆಲೆ ರೂ: 26,999

ಜಿಯೋನಿ ಮ್ಯಾರಥಾನ್ ಎಮ5 ಪ್ಲಸ್

ಜಿಯೋನಿ ಇಲೈಫ್ ಎಸ್7, 5.5 ಎಮ್ಎಮ್ ಸ್ಲಿಮ್ ಫೋನ್ ಆಗಿದ್ದು, 5020 mAh ಬ್ಯಾಟರಿಯೊಂದಿಗೆ ಬಂದಿದೆ. ಮೀಡಿಯಾಟೆಕ್ ಪ್ರೊಸೆಸರ್ ಜೊತೆಗೆ 3ಜಿಬಿ RAM ಅನ್ನು ಫೋನ್ ಒಳಗೊಂಡಿದ್ದು 6 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಇದರಲ್ಲಿದೆ.

ಬೆಲೆ ರೂ: 15,499

ಬೆಲೆ ರೂ: 15,499

ಲಿನೊವೊ ವೈಬ್ ಪಿ1

ವೈಬ್ ಪಿ1 ಮಧ್ಯಮ ಕ್ರಮಾಂಕದ ಫೋನ್‌ಗಳಲ್ಲಿ ಹೆಚ್ಚು ಉತ್ತಮ ಎಂದೆನಿಸಿದ್ದು 4900 mAh ಬ್ಯಾಟರಿಯನ್ನು ಹೊಂದಿದೆ. ಕ್ವಾಲ್‌ಕಾಮ್ ಕ್ವಿಕ್ ಚಾರ್ಜರ್ ಅನ್ನು ಇದು ಪಡೆದುಕೊಂಡಿದ್ದು ಹೆಚ್ಚು ಸಮಯ ಇದನ್ನು ಚಾರ್ಜ್‌ನಲ್ಲಿರಿಸಬೇಕೆಂದೇನಿಲ್ಲ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 ಅನ್ನು ಇದು ಪಡೆದುಕೊಂಡಿದ್ದು, 2 ಜಿಬಿ RAM ಇದರಲ್ಲಿದೆ.

ಬೆಲೆ ರೂ: 13,999

ಬೆಲೆ ರೂ: 13,999

ಯು ಯೂನಿಕೋರ್ನ್

ಈ ಡಿವೈಸ್ 4000 mAh ಬ್ಯಾಟರಿಯನ್ನು ಒಳಗೊಂಡಿದ್ದು ಮಧ್ಯಮ ಕ್ರಮಾಂಕದ ಮಾರುಕಟ್ಟೆಯನ್ನು ಆಡಳಿತ ನಡೆಸುವಂತಹದ್ದು. ಮೀಡಿಯಾ ಟೆಕ್ ಪ್ರೊಸೆಸರ್ P10 ನೊಂದಿಗೆ ಇದು ಬಂದಿದ್ದು 4 ಜಿಬಿ RAM ಡಿವೈಸ್‌ನಲ್ಲಿದೆ. ಅನನ್ಯ ಸಾಫ್ಟ್‌ವೇರ್ ಫೀಚರ್‌ಗಳನ್ನು ಇದು ಒಳಗೊಂಡಿದೆ.

ಬೆಲೆ ರೂ: 9,999 ಮತ್ತು ರೂ 11,999

ಬೆಲೆ ರೂ: 9,999 ಮತ್ತು ರೂ 11,999

ಶ್ಯೋಮಿ ರೆಡ್ಮೀ ನೋಟ್ 3

5.5 ಇಂಚಿನ ಡಿಸ್‌ಪ್ಲೇಯನ್ನು ಡಿವೈಸ್ ಪಡೆದುಕೊಂಡಿದ್ದು, 2 ಅಥವಾ 3 RAM ಆಯ್ಕೆಯನ್ನು ಫೋನ್ ಒಳಗೊಂಡಿದೆ. ಎಮ್ಐ ಮ್ಯಾಕ್ಸ್‌ ಕೂಡ 4850 mAh ಬ್ಯಾಟರಿಯೊಂದಿಗೆ ಬರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Smartphone makers have taken to including huge batteries in phones. Here are some phones that will last you through the day.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot