ರೂ 251 ರ ಫ್ರೀಡಮ್ 251 ಸ್ಮಾರ್ಟ್‌ಫೋನ್: ಎಷ್ಟು ಸತ್ಯ? ಎಷ್ಟು ಮಿಥ್ಯ?

Written By:

ರಿಂಗಿಂಗ್ ಬೆಲ್ಸ್ ಕಂಪೆನಿಯು ಫ್ರೀಡಮ್ 251 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ಮೂಲಕ ಬಳಕೆದಾರರಿಗೆ ರೂ 251 ಕ್ಕೆ ಸ್ಮಾರ್ಟ್‌ಫೋನ್ ನೀಡುವ ಆಫರ್ ಅನ್ನು ಘೋಷಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಆದರೆ ಫೋನ್ ಬುಕ್ ಮಾಡಿದವರಿಗೆ ಫೋನ್ ಇನ್ನೂ ಲಭ್ಯವಾಗಿಲ್ಲ ಅಂತೆಯೇ ಕಂಪೆನಿಯು ಕೆಲವೊಂದು ವಿವಾದಗಳಿಗೆ ಒಳಗಾಗಿತ್ತು. ಇದೀಗ ಕಂಪೆನಿಯು ಡಿವೈಸ್ ಅನ್ನು ಜೂನ್ 30 ರಿಂದ ಬುಕ್ ಮಾಡಿದವರಿಗೆ ನೀಡಲಿದೆ ಎಂಬ ಸುದ್ದಿಯನ್ನು ಬಿತ್ತರಿಸಿದೆ.

ಇದೇ ಸಮಯದಲ್ಲಿ ರಿಂಗಿಂಗ್ ಬೆಲ್ಸ್ 251 ಸ್ಮಾರ್ಟ್‌ಫೋನ್ ಕುರಿತು ಇನ್ನಷ್ಟು ವಿವರವಾದ ಮಾಹಿತಿಗಳನ್ನು ಈ ಲೇಖನದ ಮೂಲಕ ನಾವು ನಿಮಗೆ ನೀಡುತ್ತಿದ್ದು ಫೋನ್‌ ಕುರಿತ ವಿವಿರ ಮಾಹಿತಿ ನಿಮಗಿಲ್ಲಿ ಲಭ್ಯವಾಗಲಿದೆ. 4 ಇಂಚಿನ WVGA ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಿದ್ದು 1.3GHZ ಕ್ವಾಡ್ ಕೋರ್ ಪ್ರೊಸೆಸರ್‌ನೊಂದಿಗೆ ಬಂದಿದೆ. 1 ಜಿಬಿ RAM ಡಿವೈಸ್‌ನಲ್ಲಿದ್ದು 8 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಫೋನ್ ಪಡೆದುಕೊಂಡಿದೆ.

ಡಿವೈಸ್ 3.2 ಎಮ್‌ಪಿ ಹಿಂಭಾಗ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಮುಂಭಾಗದಲ್ಲಿ ವಿಜಿಎ ಕ್ಯಾಮೆರಾ ಇದೆ. ಫೋನ್ 1,450 mAh ಬ್ಯಾಟರಿಯನ್ನು ಅಳವಡಿಸಿಕೊಂಡಿದ್ದು 3ಜಿ ಕನೆಕ್ಟಿವಿಟಿಗೆ ಬೆಂಬಲವನ್ನು ಒದಗಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ವಿತರಣೆ

ಫೋನ್ ವಿತರಣೆ

#1

ವರದಿಗಳ ಪ್ರಕಾರ, ರಿಂಗಿಂಗ್ ಬೆಲ್ಸ್ ಸ್ಥಾಪಕ ಮತ್ತು ಸಿಇಒ ಮೋಹಿತ್ ಗೋಯಲ್, ಜೂನ್ 30 ರಿಂದ ಎರಡು ಲಕ್ಷ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಫ್ರೀಡಮ್ 251 ಅನ್ನು ಖರೀದಿಸುವ ಆಸಕ್ತದಾರರಿಗೆ ರಿಜಿಸ್ಟ್ರೇಶನ್ ಅನ್ನು ಕಂಪೆನಿ ಆರಂಭಿಸಲಿದೆ.

251 ನ 25 ಲ್ಯಾಕ್ಸ್ ಯೂನಿಟ್‌ಗಳು ಈಗಲೇ ಬರುವುದಿಲ್ಲ

251 ನ 25 ಲ್ಯಾಕ್ಸ್ ಯೂನಿಟ್‌ಗಳು ಈಗಲೇ ಬರುವುದಿಲ್ಲ

#2

ಫ್ರೀಡಮ್ 251 ನ 25 ಲಕ್ಷ ಯೂನಿಟ್‌ಗಳನ್ನು ಕಂಪೆನಿ ಜೂನ್ 30 ಕ್ಕೆ ಮುನ್ನವೇ ಬಿಡುಗಡೆ ಮಾಡುವ ಇರಾದೆಯನ್ನು ಇಟ್ಟುಕೊಂಡಿಲ್ಲ. ಪಾವತಿ ಗೇಟ್‌ವೇ ಕ್ರ್ಯಾಶ್ ಆದ ಸಂದರ್ಭದ ಮೂರು ದಿನಗಳಿಗಿಂತ ಮುನ್ನ ಏಳು ಕೋಟಿಗಿಂತಲೂ ಹೆಚ್ಚಿನ ರಿಜಿಸ್ಟ್ರೇಶನ್ ಅನ್ನು ಕಂಪೆನಿ ಸ್ವೀಕರಿಸಿದೆ ಎಂಬುದಾಗಿ ತಿಳಿಸಿದೆ.

2 ದಿನಗಳ ವಿತರಣೆ ವಿಳಂಬ

2 ದಿನಗಳ ವಿತರಣೆ ವಿಳಂಬ

#3

ಈ ಮೊದಲು, ರಿಂಗಿಂಗ್ ಬೆಲ್ಸ್ ಫ್ರೀಡಮ್ 251 ನ ವಿತರಣೆಯು ಜೂನ್ 28 ರಿಂದ ಆರಂಭವಾಗುವುದಾಗಿ ತಿಳಿಸಿತ್ತು. ಆದರೆ ಕಂಪೆನಿ ದಿನಾಂಕವನ್ನು ಜೂನ್ 30 ಕ್ಕೆ ಹಾಕಿದೆ. ಕ್ಯಾಶ್ ಡೆಲಿವರಿಯನ್ನು ನೀಡಿದ ಗ್ರಾಹಕರಿಗೆ ಫೋನ್ ಜೂನ್ 28 ಕ್ಕೆ ಲಭ್ಯವಾಗುವುದಾಗಿ ಗೋಯಲ್ ತಿಳಿಸಿದ್ದರು. ಆದರೆ ಎರಡು ದಿನಗಳ ಮುಂದುವರಿಕೆಯನ್ನು ಇದು ಕಂಡಿದೆ.

ರಿಂಗಿಂಗ್ ಬೆಲ್ಸ್ ವಿರುದ್ಧ ಎಫ್‌ಐಆರ್

ರಿಂಗಿಂಗ್ ಬೆಲ್ಸ್ ವಿರುದ್ಧ ಎಫ್‌ಐಆರ್

#4

ಮಾರ್ಚ್‌ನಲ್ಲಿ ಮೋಸದ ಕೇಸ್ ಅನ್ನು ಕಂಪೆನಿಯ ವಿರುದ್ಧ ಬಿಜೆಪಿ ಮುಖಂಡ ಕಿರಿತ್ ಸೋಮಾಯ್ಯಾ ನೊಯ್ಡಾ ಠಾಣೆಯಲ್ಲಿ ಹೂಡಿದ್ದರು. ಈ ಕೇಸ್ ಅನ್ನು ಕಾಯ್ದೆ ಐಪಿಸಿ ಸೆಕ್ಶನ್ 420 ಅನ್ವಯ ನೋಂದಾವಣೆ ಮಾಡಲಾಗಿದ್ದು ಎಫ್‌ಐಆರ್‌ನಲ್ಲಿ ಮೋಹಿತ್ ಗೋಯಲ್ ಮತ್ತು ಅಶೋಕ್ ಚಡ್ಡಾ ಅವರನ್ನು ಉಲ್ಲೇಖಿಸಲಾಗಿದೆ. ರೂ 251 ಬೆಲೆಯಲ್ಲಿ ಫೋನ್ ತಯಾರು ಮಾಡುವುದು ಅಸಾಧ್ಯ ಎಂಬುದು ಕಿರಿತ್ ದೂರಾಗಿತ್ತು. ಜನರನ್ನು ಕಂಪೆನಿ ಮೂರ್ಖರನ್ನಾಗಿಸುತ್ತಿದೆ ಎಂಬುದು ಇವರ ದೂರಾಗಿತ್ತು.

ಆಡ್‌ಕಾಮ್ ದಾವೆ

ಆಡ್‌ಕಾಮ್ ದಾವೆ

#5

ಫ್ರೀಡಮ್ 251 ಅನ್ನು ಲಾಂಚ್ ಮಾಡಿದ ಸಂದರ್ಭದಲ್ಲಿ ಆಡ್‌ಕಾಮ್ ಕಂಪೆನಿಯ ಫೋನ್ ಎಂಬುದಾಗಿ ಆಡ್‌ಕಾಮ್ ತಿಳಿಸಿತು. ವೈಟ್ನರ್ ಬಳಸಿಕೊಂಡು ರಿಂಗಿಂಗ್ ಬೆಲ್ಸ್ ಆಡ್‌ಕಾಮ್ ಹೆಸರನ್ನು ಒರೆಸಿದೆ ಎಂಬುದು ಈ ಕಂಪೆನಿಯ ದೂರಾಗಿತ್ತು. ಮಾರ್ಚ್‌ನಲ್ಲಿ ರಿಂಗಿಂಗ್ ಬೆಲ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುದಾಗಿ ಆಡ್‌ಕಾಮ್ ಬೆದರಿಕೆ ಹಾಕಿತ್ತು.

ಮರುಪಾವತಿ ಕೂಡ ನಡೆದಿತ್ತು

ಮರುಪಾವತಿ ಕೂಡ ನಡೆದಿತ್ತು

#6

ಫೆಬ್ರವರಿ ಅಂತ್ಯದಲ್ಲಿ, ವದಂತಿಗಳಿಗೆ ಅನುಸಾರವಾಗಿ ಕಂಪೆನಿಯು ಹಣ ಪಾವತಿಸಿದವರಿಗೆ ಮರುಪಾವತಿಯನ್ನು ಮಾಡಿತ್ತು. ಫೋನ್‌ ದರವನ್ನು 30,000 ಜನರಿಗೆ ಕಂಪೆನಿ ನೀಡಿರುವುದಾಗಿ ತಿಳಿಸಿದ್ದು 7 ಕೋಟಿ ಜನ ನೋಂದಾವಣೆಯನ್ನು ಮಾಡಿಕೊಂಡಿದ್ದರು.

ಫ್ರೀಡಮ್ 251 ಮೇಕ್ ಇನ್ ಇಂಡಿಯಾ ಅಥವಾ ಸರಕಾರ ಯೋಜನೆಯೇ?

ಫ್ರೀಡಮ್ 251 ಮೇಕ್ ಇನ್ ಇಂಡಿಯಾ ಅಥವಾ ಸರಕಾರ ಯೋಜನೆಯೇ?

#7

ಡಿಐಪಿಪಿ ಸೆಕ್ರೆಟರಿ ಅಮಿತಾಬ್ ಕಾಂತ್ ತಿಳಿಸಿರುವಂತೆ ಫ್ರೀಡಮ್ 251 ಸರಕಾರದ ಯೋಜನೆಯಲ್ಲ ಅಥವಾ ಮೇಕ್ ಇನ್ ಇಂಡಿಯಾ ಟೀಮ್ ಈ ಸ್ಮಾರ್ಟ್‌ಫೋನ್‌ನ ಹಿಂದಿಲ್ಲ ಎಂಬುದಾಗಿ ಹೇಳಿದ್ದಾರೆ. ಮೇಕ್ ಇನ್ ಇಂಡಿಯಾ ಯೋಜನೆಯಿಂದಾಗಿ ಫೋನ್ ಬೆಲೆಯನ್ನು ಕಡಿಮೆಮಾಡಲಾಗಿದೆ ಎಂಬಬ ವದಂತಿ ಕೂಡ ಹರಡಿತ್ತು.

ರಿಂಗಿಂಗ್ ಬೆಲ್ಸ್ ಮೇಲೆ ಕಾಲ್ ಸೆಂಟರ್ ದಾವೆ

ರಿಂಗಿಂಗ್ ಬೆಲ್ಸ್ ಮೇಲೆ ಕಾಲ್ ಸೆಂಟರ್ ದಾವೆ

#8

ಡೇಟಾ ಸೆಂಟರ್ ಮತ್ತು ಬಿಪಿಒ ಸೇವೆಗಳು, ಮೋಸದ ಕೇಸ್ ಅನ್ನು ಕಂಪೆನಿಯ ಮೇಲೆ ಹೂಡಿದ್ದವು. ಕಂಪೆನಿಯೊಂದಿಗೆ ರಿಂಗಿಂಗ್ ಬೆಲ್ಸ್ ಒಪ್ಪಂದವನ್ನು ಮಾಡಿಕೊಂಡಿದ್ದು ಪಾವತಿಗಳನ್ನು ನೀಡಿಲ್ಲ ಎಂಬುದು ದಾವೆಯಲ್ಲಿ ಹೇಳಲಾಗಿತ್ತು.

ಪಾವತಿಗಳ ಮೇಲೆ ಪೇಯು ಬಿಜ್ ಹಿಡಿತ

ಪಾವತಿಗಳ ಮೇಲೆ ಪೇಯು ಬಿಜ್ ಹಿಡಿತ

#9

ವಿತರಣೆಯನ್ನು ಕಂಪೆನಿಯು ಮಾಡಿದೆ ಎಂಬುದನ್ನು ತೋರಿಸದ ಹೊರತು ಪಾವತಿಗಳನ್ನು ಮಾಡುವುದಿಲ್ಲವೆಂದು ಪೇಯು ಬಿಜ್ ಪಾವತಿಯ ಮೇಲೆ ಹಿಡಿತವನ್ನು ಹಾಕಿತ್ತು. ಫ್ರೀಡಮ್ 251 ಅನ್ನು ತಡವಾಗಿ ನೀಡುವುದರ ಕುರಿತು ಪ್ರಶ್ನೆಗಳು ಎದ್ದಿದ್ದು ಇದಕ್ಕೆ ಕಂಪೆನಿ ಕಾರಣವನ್ನು ನೀಡಬೇಕು ಎಂಬುದು ಪೇಯು ಮಾತಾಗಿತ್ತು. ದುಡ್ಡು ತಮ್ಮ ಬಳಿ ಸುಭದ್ರವಾಗಿದೆ ಎಂಬುದಾಗಿ ಪೇಯು ಬಿಜ್ ತಿಳಿಸಿತ್ತು. ಕಂಪೆನಿಯು ಗ್ರಾಹಕರ ಭಾರೀ ಬೇಡಿಕೆಯನ್ನು ಪೂರೈಸಲು ಆಗದೇ ಇದ್ದಲ್ಲಿ ಕಂಪೆನಿಯೊಂದಿಗೆ ಕೆಲಸ ಮಾಡುವುದಾಗಿ ಪೇಯು ಬಿಜ್ ತಿಳಿಸಿತ್ತು.

ಐಟಿ ವಿಭಾಗದ ಸ್ಕ್ಯಾನರ್ ವೀಕ್ಷಣೆ

ಐಟಿ ವಿಭಾಗದ ಸ್ಕ್ಯಾನರ್ ವೀಕ್ಷಣೆ

#10

ಇನ್ನೊಂದು ವರದಿಯ ಪ್ರಕಾರ, ಐಟಿ ವಿಭಾಗವು ಕಂಪೆನಿಯ ಮೇಲೆ ಟ್ರ್ಯಾಕ್ ಮಾಡುತ್ತಿದ್ದು ಆರ್ಥಿಕ ರಚನೆ ಮತ್ತು ರಾಕ್ (ರಿಜಿಸ್ಟ್ರಾರ್ ಆಫ್ ಕಂಪೆನಿಗಳು) ದಾಖಲೆಗಳ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Many people who ordered the Freedom 251 have dismissed the company claiming that it is a Ponzi scheme. Now, the announcement from Ringing Bells that the smartphone will be delivered from June 30 to the buyers is creating a stir in the market.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot