ಆಪಲ್‌ನ ಹೊಸ ಟ್ಯಾಬ್ಲೆಟ್‌ ಚಾರ್ಜಿಂಗ್‌ ವೇಳೆ ಸ್ಫೋಟ

Posted By:

ಆಪಲ್‌ನ ಹೊಸ ಐಪ್ಯಾಡ್‌ ಆಸ್ಟ್ರೇಲಿಯದ ರಿಟೇಲ್‌ ಅಂಗಡಿಯಲ್ಲಿ ಸ್ಪೋಟಗೊಂಡಿದೆ.ಕ್ಯಾನ್‌ಬೆರ್‍ರಾ ವೊಡಾಫೋನ್‌ ಅಂಗಡಿಯಲ್ಲಿ ಪ್ರದರ್ಶನಕ್ಕೆಂದು ಇಟ್ಟಿದ್ದ ಐಪ್ಯಾಡ್‌ ಏರ್‌ ಚಾರ್ಚಿಂಗ್‌ ವೇಳೆ ಸ್ಪೋಟಗೊಂಡಿದೆ.

ಚಾರ್ಜಿಂಗ್‌ ಭಾಗದಲ್ಲಿ ಈ ಸ್ಪೋಟಗೊಂಡಿದ್ದು ಆಪಲ್‌ ಪ್ರತಿನಿಧಿಯೊಬ್ಬರು ಸ್ಪೋಟಗೊಂಡ ಐಪ್ಯಾಡ್‌ನ್ನು ಹೆಚ್ಚಿನ ಪರೀಕ್ಷೆಗಾಗಿ ಲ್ಯಾಬ್‌ಗೆ ತೆಗೆದುಕೊಂಡು ಹೋಗಿದ್ದಾರೆ.ಇಲ್ಲಿವರೆಗೆ ವಿಶ್ವದ ವಿವಿಧ ಭಾಗದಲ್ಲಿ ಐಫೋನ್‌ ಸ್ಪೋಟಗೊಂಡ ವರದಿಗಳು ಬಂದಿತ್ತು. ಆದರೆ ಚಾರ್ಜಿಂಗ್‌ ವೇಳೆ ಐಪ್ಯಾಡ್‌ ಸ್ಪೋಟಗೊಳ್ಳುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ಆಪಲ್‌ನ ಹೊಸ ಟ್ಯಾಬ್ಲೆಟ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಅಕ್ಟೋಬರ್‌ನಲ್ಲಿ ಆಪಲ್‌ ಕಡಿಮೆ ತೂಕದ ಹೊಸ ಐಪ್ಯಾಡ್‌ ಏರ್‌ನ್ನು ಬಿಡುಗಡೆ ಮಾಡಿತ್ತು. ನವೆಂಬರ್‌ ಒಂದರಿಂದ ವಿಶ್ವದ ಹಲವು ರಾಷ್ಟ್ರಗಳ ಮಾರುಕಟ್ಟೆಗೆ ಹೊಸ ಟ್ಯಾಬ್ಲೆಟ್‌ ಬಿಡುಗಡೆಯಾಗಿತ್ತು.

ಹೊಸದಾಗಿ ಬಿಡುಗಡೆಯಾಗಿರುವ ಐಪ್ಯಾಡ್‌ ಏರ್‌ ಟ್ಯಾಬ್ಲೆಟ್‌ನ ಹಲವು ವಿಶೇಷತೆಗಳು ಐಪ್ಯಾಡ್‌ 4ರಂತೆ ಇದ್ದರೂ ಕೆಲವೊಂದು ಹೊಸ ವಿಶೇಷತೆಗಳು ಈ ಟ್ಯಾಬ್ಲೆಟ್‌ನಲ್ಲಿದೆ. ವೈಫೈ,ವೈಫೈ ಮತ್ತು ಸೆಲ್ಯುಲರ್‌ ಎರಡು ವಿಧ ಮತ್ತು ನಾಲ್ಕು ಆಂತರಿಕ ಮೆಮೊರಿಯಲ್ಲಿ ಈ ಟ್ಯಾಬ್ಲೆಟ್‌ ವಿಶ್ವದ ಹಲವು ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ : ಆಪಲ್‌ ಉತ್ಪನ್ನಗಳು ತಯಾರಾಗುವುದು ಎಲ್ಲಿ ಗೊತ್ತೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot