ಅರ್ಧ ದಾರಿ ಕ್ರಮಿಸಿದ ಇಸ್ರೋ ಮಾರ್ಸ್ ಆರ್ಬಿಟರ್ ನೌಕೆ
ಮಂಗಳ ಗ್ರಹದ ಅಧ್ಯಯನಕ್ಕಾಗಿ ಇಸ್ರೋ ಉಡಾವಣೆ ಮಾಡಿದ ಮಾರ್ಸ್ ಆರ್ಬಿಟರ್ ಗಗನ ನೌಕೆ ತನ್ನ ಮಾರ್ಗದಲ್ಲಿ ಅರ್ಧದಷ್ಟು ಹಾದಿಯನ್ನು ಯಶಸ್ವಿಯಾಗಿ ಕ್ರಮಿಸಿದೆ.
ಒಟ್ಟು 68 ಕೋಟಿ ಕಿ.ಮೀ. ದೂರದಲ್ಲಿರುವ ಮಂಗಳನ ಕಕ್ಷೆಗೆ ಪ್ರಯಾಣ ಬೆಳೆಸಿರುವ ನೌಕೆ ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 9.50ಕ್ಕೆ 33.75 ಕೋಟಿ ಕಿ.ಮೀ. ದೂರವನ್ನು ಕ್ರಮಿಸುವ ಮೂಲಕ ಯಶಸ್ವಿಯಾಗಿ ಅರ್ಧದಾರಿಯನ್ನು ಮುಗಿಸಿದೆ ಎಂದು ಇಸ್ರೊ ಹರ್ಷ ವ್ಯಕ್ತಪಡಿಸಿದೆ.
ಗಗನನೌಕೆಯು ನಿಗದಿತ ಪಥದಲ್ಲೇ ಸಾಗುತ್ತಿದ್ದು, ನೌಕೆಗೆ ಸಂದೇಶ ಕಳುಹಿಸಿ ಹಿಂಪಡೆದುಕೊಳ್ಳಲು ಸುಮಾರು 4 ನಿಮಿಷ 15 ಸೆಕೆಂಡ್‌ಗಳು ತಗುಲುತ್ತಿವೆ. ನೌಕೆಯಲ್ಲಿರುವ ಎಲ್ಲಾ ಐದು ಉಪಕರಣಗಳು ಸುಸ್ಥಿತಿಯಲ್ಲಿದೆ ಎಂದು ಎಂದು ಇಸ್ರೋ ತಿಳಿಸಿದೆ.ಭಾರತದ ಮಂಗಳಯಾನ ನೌಕೆಯ ಪ್ರಯಾಣ ನವೆಂಬರ್ 5ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಆರಂಭಗೊಂಡಿದ್ದು,ನೌಕೆ ಇನ್ನು 154 ದಿನದಲ್ಲಿ 34 ಕೋಟಿ ದೂರ ಸಾಗಬೇಕಾಗಿದ್ದು,ಸೆಪ್ಟೆಂಬರ್ 24ಕ್ಕೆ ಮಂಗಳ ಗ್ರಹವನ್ನು ತಲುಪುವಂತೆ ಇಸ್ರೋ ಯೋಜನೆ ರೂಪಿಸಿದೆ.
ಉಡಾವಣೆಯಾದ ಒಂದು ವಾರದಲ್ಲಿ'ಮಾರ್ಸ್ ಆರ್ಬಿಟರಿ ಮಿಷನ್' ಸಣ್ಣ ತೊಂದರೆಯಲ್ಲಿ ಸಿಲುಕಿಕೊಂಡಿತ್ತು.ಉಪಗ್ರಹವನ್ನುಎತ್ತರಕ್ಕೆ ಏರಿಸಲು ಇಸ್ರೋ ಕಾರ್ಯಾಚರಣೆ ತಾಂತ್ರಿಕ ದೋಷದಿಂದಾಗಿ ವೈಫಲ್ಯ ಅನುಭವಿಸಿತ್ತು. ಉಪಗ್ರಹದ ಎತ್ತರವನ್ನು ಹಂತಹಂತವಾಗಿ ಏರಿಸುತ್ತಿದ್ದ ಇಸ್ರೋದ ಮೂರು ಹಂತದ ಕಾರ್ಯಾಚರಣೆ ಯಶಸ್ವಿಯಾಗಿ, ನಾಲ್ಕನೇಯ ಹಂತದ ಕಾರ್ಯಾಚರಣೆಯ ವೇಳೆ ಇಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಂಡದ್ದರಿಂದ ಉಪಗ್ರಹ ವೇಗ ಕಡಿಮೆಯಾಗಿ ಕ್ರಮಿಸಿಸಬೇಕಾಗಿದ್ದ ದೂರವನ್ನು ತಲುಪಲು ವಿಫಲವಾಗಿತ್ತು.
ಈ ಸಮಸ್ಯೆ ಸೃಷ್ಟಿಯಾದರೂ ಇಸ್ರೋ ವಿಜ್ಞಾನಿಗಳು ಉಪಗ್ರಹವನ್ನು ಹಂತಹಂತವಾಗಿ ಎತ್ತರಕ್ಕೆ ಏರಿಸಿ ಮಂಗಳನ ಕಕ್ಷಗೆ ನೂಕುವಲ್ಲಿ ಯಶಸ್ವಿಯಾಗಿದ್ದರು.ಇಸ್ರೋದ ಮಂಗಳಯಾನ ನೌಕೆ ಡಿಸೆಂಬರ್1ರಂದು ಭೂಮಿಯ ಕಕ್ಷೆಯನ್ನು ತೊರೆದು ಮಂಗಳ ಗ್ರಹದತ್ತ ತನ್ನ ಪ್ರಯಾಣವನ್ನು ಆರಂಭಿಸಿತ್ತು.
ನಿರಂತರ ಸುದ್ದಿಗಾಗಿ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ

Post by ISRO's Mars Orbiter Mission.

Click it and Unblock the Notifications