ಮೈಕ್ರೋಮ್ಯಾಕ್ಸ್‌‌ನಿಂದ ವಿಂಡೋಸ್‌ ಸ್ಮಾರ್ಟ್‌ಫೋನ್

Posted By:

ದೇಶೀಯ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌ ತಯಾರಕಾ ಕಂಪೆನಿ ಮೈಕ್ರೋಮ್ಯಾಕ್ಸ್‌ ವಿಂಡೋಸ್‌ ಫೋನ್‌ ಓಎಸ್‌ನಲ್ಲಿ ಈ ವರ್ಷ‌ದಿಂದ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡಲಿದೆ.

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆಯುತ್ತಿರುವ ವಿಂಡೋಸ್‌ ಓಎಸ್‌‌‌‌‌ ಡೆವಲಪರ್ಸ್‌‌‌ ಸಮ್ಮೇಳನದಲ್ಲಿ ಮೈಕ್ರೋಸಾಫ್ಟ್‌ ಈ ವಿಷಯವನ್ನು ಬಹಿರಂಗಪಡಿಸಿದೆ. ಮೈಕ್ರೋಮ್ಯಾಕ್ಸ್‌ ಸೇರಿದಂತೆ ವಿಶ್ವದ ಹಲವು ಸ್ಮಾರ್ಟ್‌ಫೋನ್‌ ತಯಾರಕಾ ಕಂಪೆನಿಗಳೊಂದಿಗೆ ಮೈಕ್ರೋಸಾಫ್ಟ್‌ ವಿಂಡೋಸ್‌ ಓಎಸ್‌ ಸ್ಮಾರ್ಟ್‌‌ಫೋನ್‌ ನಿರ್ಮಿ‌ಸಲು ಒಪ್ಪಂದ ನಡೆಸಿದೆ.

ಫೆಬ್ರವರಿಯಲ್ಲಿ ಕಾರ್ಬ‌ನ್‌,ಲಾವಾ ಕಂಪೆನಿಗಳ ಜೊತೆ ವಿಂಡೋಸ್‌‌ ಓಎಸ್‌ ಸ್ಮಾರ್ಟ್‌ಫೋನ್‌ ನಿರ್ಮಾಣದ ಬಗ್ಗೆ ಮೈಕ್ರೋಸಾಫ್ಟ್‌‌ ಒಪ್ಪಂದ ನಡೆಸಿದ್ದರೂ,ಮೈಕ್ರೋಮ್ಯಾಕ್ಸ್‌ ಜೊತೆಗೆ ವಿಂಡೋಸ್‌ ಸ್ಮಾರ್ಟ್‌ಫೋನ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಸುದ್ದಿಗಳು ಬಹಿರಂಗವಾಗಿರಲಿಲ್ಲ.ಈಗ ಈ ಸುದ್ದಿ ಬಹಿರಂಗವಾಗುವುದರೊಂದಿಗೆ ಮೈಕ್ರೋಮ್ಯಾಕ್ಸ್‌‌ ಈ ವರ್ಷದಿಂದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ನಿರ್ಮಾ‌ಣದ ಜೊತೆಗೆ ವಿಂಡೋಸ್‌ ಓಎಸ್‌ ಸ್ಮಾರ್ಟ್‌ಫೋನ್‌ ನಿರ್ಮಿ‌ಸಲಿದೆ.

 ಮೈಕ್ರೋಮ್ಯಾಕ್ಸ್‌‌ನಿಂದ ವಿಂಡೋಸ್‌ ಸ್ಮಾರ್ಟ್‌ಫೋನ್

ವಿಂಡೋಸ್‌ ಫೋನ್‌ ಓಎಸ್‌ ಸಾಧನಗಳನ್ನು ತಯಾರಿಸಿದಿದ್ದರೂ ವಿಂಡೋಸ್‌ ಓಎಸ್‌ ಹೊಂದಿರುವ ಸಾಧನವನ್ನು ಮೈಕ್ರೋಮ್ಯಾಕ್ಸ್‌ ಈಗಾಗಲೇ ತಯಾರಿಸಿದೆ. ವಿಶ್ವದ ಪ್ರಥಮ ಡ್ಯುಯಲ್‌ ಓಎಸ್‌ (ವಿಂಡೋಸ್‌ 8 ಮತ್ತು ಆಂಡ್ರಾಯ್ಡ್ ಜೆಲ್ಲಿ ಬೀನ್‌ಓಎಸ್‌)ಹೊಂದಿರುವ ಕ್ಯಾನ್‌ವಾಸ್‌ ಲ್ಯಾಪ್‌ಟಾಬ್‌ನ್ನು ಮೈಕ್ರೋಮ್ಯಾಕ್ಸ್‌ ಅಭಿವೃದ್ಧಿ ಪಡಿಸಿದ್ದು ಜನವರಿಯಲ್ಲಿ ಸಿಇಎಸ್‌ಲ್ಲಿ ಈ ಲ್ಯಾಪ್‌ಟಾಬ್‌ನ್ನು ಬಿಡುಗಡೆ ಮಾಡಿತ್ತು.ಭಾರತದ ಮಾರುಕಟ್ಟೆಗೆ ಇನ್ನೂಈ ಲ್ಯಾಪ್‌ಟಾಬ್‌ ಬಿಡುಗಡೆಯಾಗಿಲ್ಲ.

ಸಾರ್ಟ್‌‌ಫೋನ್‌ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಪ್ರಾಬಲ್ಯವನ್ನು ಕಡಿಮೆ ಮಾಡಲು ಮೈಕ್ರೋಸಾಫ್ಟ್‌ ನಾನ ಯೋಜನೆಗಳನ್ನು ರೂಪಿಸುತ್ತಿದ್ದು, ದೇಶೀಯ ಮತ್ತು ವಿದೇಶಿ ಸ್ಮಾರ್ಟ್‌‌ಫೋನ್‌ ತಯಾರಕ ಕಂಪೆನಿಗಳಿಗೆ ಶುಲ್ಕ ರಹಿತವಾಗಿ ವಿಂಡೋಸ್ ಫೋನ್‌ ಓಎಸ್‌ ಪರವಾನಗಿ ನೀಡಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಕಂಪೆನಿಗಳು ವಿಂಡೋಸ್‌ ಸ್ಮಾರ್ಟ್‌ಫೋನ್ ತಯಾರಿಸಲು ಆಸಕ್ತಿ ತೋರಿಸಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot