Home
ಮೊಬೈಲ್

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

By Ashwath

ಸ್ಯಾಮ್‌ಸಂಗ್‌‌ನ ಈ ವರ್ಷದ ಬಾರಿ ನಿರೀಕ್ಷೆಯ ಗೆಲಾಕ್ಸಿ ಎಸ್‌5 ಸ್ಮಾರ್ಟ್‌ಫೋನ್‌ ಈ ತಿಂಗಳಿನಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌‌ ಮಾಧ್ಯಮದವರಿಗೆ ಆಹ್ವಾನ ನೀಡಿದ್ದು ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ನಲ್ಲಿ 'Samsung Unpacked' ಹೆಸರಿನಲ್ಲಿ ಆಹ್ವಾನ ನೀಡಿದ್ದು ಗೆಲಾಕ್ಸಿ ಎಸ್‌ 5 ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಸ್ಯಾಮ್‌ಸಂಗ್‌ ಈಗಾಗಲೇ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದ್ದು ಸ್ಮಾರ್ಟ್‌‌‌ಫೋನ್‌ನ್ನು ಆಂಡ್ರಾಯ್ಡ್‌ನ ಹೊಸ ಓಎಸ್‌ನಲ್ಲಿ ಬಿಡುಗಡೆ ಮಾಡಿಲ್ಲ.ಹೀಗಾಗಿ ಈ ಸ್ಮಾರ್ಟ್‌‌ಫೋನ್‌‌ ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಬಿಡುಗಡೆಯಾಗಲಿದೆ. ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನಿನ ವಿಶೇಷತೆಯನ್ನು ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ ಸ್ಯಾಮ್‌ಸಂಗ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷ ಲೀ ಯಂಗ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಈ ಫೋನಿನ ಕೆಲವು ವಿಶೇಷತೆಯ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಪುಟದಲ್ಲಿ ಗೆಲಾಕ್ಸಿ ಎಸ್‌5 ಯಾಕೆ ಬಗ್ಗೆ ಇಷ್ಟೊಂದು ಕುತೂಹಲ ಜೊತೆಗೆ ಈ ಸ್ಮಾರ್ಟ್‌‌ಫೋನ್‌ಲ್ಲಿ ಇರಲಿದೆ ಎಂದು ಹೇಳಲಾಗುತ್ತಿರುವ ಕೆಲವು ವಿಶೇಷತೆಗಳ ಬಗ್ಗೆ ವಿವರ ನೀಡಲಾಗಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ ಟ್ವೀಟರ್‌‌ನಲ್ಲಿ Follow ಮಾಡಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸ್ಯಾಮ್‌ಸಂಗ್‌ ಮಾಧ್ಯಮದವರಿಗೆ ಕಳುಹಿಸಿದ 'Samsung Unpacked'ಆಹ್ವಾನ ಪತ್ರಿಕೆ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸ್ಯಾಮ್‌ಸಂಗ್‌ ಹೊಸ ಹೊಸ ಸ್ಮಾರ್ಟ್‌‌‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರೊಂದಿಗೆ ದುಬಾರಿ ಬೆಲೆಯ,ಇದುವರೆಗೂ ಯಾವುದೇ ಫೋನ್‌ಗೆ ನೀಡದ ವಿಶೇಷತೆ ಹೊಂದಿರುವ ಗೆಲಾಕ್ಸಿ ಎಸ್‌ ಸರಣಿಯ ಒಂದು ಸ್ಮಾರ್ಟ್‌‌ಫೋನ್‌ನ್ನು ಪ್ರತಿವರ್ಷ‌ ಬಿಡುಗಡೆ ಮಾಡುತ್ತದೆ.ಕಳೆದ ವರ್ಷ‌ ಬಿಡುಗಡೆ ಮಾಡಿದ ಎಸ್‌4 ಅಕ್ಟಾ ಕೋರ್‌ ಪ್ರೊಸೆಸರ್‌,ಕೆಲವು ಕ್ಯಾಮೆರಾ ವಿಶೇಷತೆ ಗ್ರಾಹಕರಿಗೆ ಇಷ್ಟವಾಗಿತ್ತು ಜೊತೆಗೆ ಈ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿತ್ತು.

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಗೆಲಾಕ್ಸಿ ಎಸ್‌4 ಮೈಲಿಗಲ್ಲು ಸೃಷ್ಟಿಸಿದ್ದರೆ, ಕೆಲ ತಿಂಗಳ ಹಿಂದೆ ಬಿಡುಗಡೆ ಮಾಡಿದ್ದ ನೋಟ್‌ 3 ಫ್ಯಾಬ್ಲೆಟ್‌ ಸಹ ಮಾರಾಟದಲ್ಲಿ ಹೊಸ ಮೈಲಿಗನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಸ್ಯಾಮ್‌ಸಂಗ್‌ ವರ್ಷ ಬಿಡುಗಡೆ ಮಾಡಲಿರುವ ಗೆಲಾಕ್ಸಿ ಎಸ್‌5 ಫೋನಿನ ವಿಶೇಷತೆ ಬಗ್ಗೆ ಬಹಳ ನಿರೀಕ್ಷೆಯಿದೆ. ಜೊತೆಗೆ ಕಳೆದ ವರ್ಷದ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಅತಿ ಹೆಚ್ಚಯ ಸ್ಮಾರ್ಟ್‌‌ಫೋನ್ ಮಾರಾಟ ಮಾಡಿ ವಿಶ್ವದ ನಂಬರ್‌ ಒನ್‌ ಮೊಬೈಲ್‌ ಬ್ರ್ಯಾಂಡ್‌ ಕಂಪೆನಿ ಎಂಬ ಪಟ್ಟವು ಸ್ಯಾಮ್‌ಸಂಗ್‌ಗೆ ದೊರಕಿರುವುದರಿಂದ ಗೆಲಾಕ್ಸಿ ಎಸ್‌5 ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಗೆಲಾಕ್ಸಿ ಎಸ್‌ 5 ಕಣ್ಣನ್ನು ಸ್ಕ್ಯಾನ್‌ ಮಾ‍ಡುವ ಸೆನ್ಸರ್‌ನೊಂದಿಗೆ ಬರಲಿರುವುದನ್ನು ಲೀ ಯಂಗ್ ಖಚಿತಪಡಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಹೊಸ ಡಿಸ್ಪ್ಲೇಯೊಂದಿಗೆ ಬರಲಿದೆ ಎಂಬುದನ್ನು ಹೇಳಿದ್ದಾರೆ. ಆದರೆ ನಿಖರವಾಗಿ ಈ ವಿಚಾರವನ್ನು ಸ್ಪಷ್ಟವಾಗಿ ಹೇಳಿಲ್ಲ. ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ಫೋನ್‌ 1440x2560 ಪಿಕ್ಸೆಲ್‌ ರೆಸೂಲೂಶನ್‌(2ಕೆ), 587 ಪಿಪಿಐ(ಪಿಕ್ಸೆಲ್‌ ಪರ್‌ ಇಂ‌ಚ್‌) ಇರುವ ಸ್ಕ್ರೀನ್‌ ಒಳಗೊಂಡಿರುತ್ತದೆ ಹೇಳಲಾಗುತ್ತಿದೆ.

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಈ ಸ್ಮಾರ್ಟ್‌ಫೋನ್‌ ಎರಡು ದೇಹದಲ್ಲಿ ಬಿಡುಗಡೆಯಾಗಲಿದ್ದು, ಕಡಿಮೆ ಬೆಲೆ ಫೋನ್‌ನ್ನು ಪ್ಲ್ಯಾಸ್ಟಿಕ್‌ನಿಂದ ತಯಾರಿಸಿದ್ದರೆ, ದುಬಾರಿ ಬೆಲೆಯ ಫೋನ್‌ನ್ನು ಮೆಟಲ್‌‌ ತಯಾರಿಸಲಾಗುವುದು ಎನ್ನುವದನ್ನು ಈ ಸಂದರ್ಭಲ್ಲಿ ಲೀ ಯಂಗ್ ಹೇಳಿದ್ದಾರೆ.

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸದ್ಯ ವಿಶ್ವದ ವೇಗದ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಆಪಲ್‌ನ ಐಫೋನ್‌ 5ಎಸ್‌ 64 ಬಿಟ್‌ ಪ್ರೊಸೆಸರ್‌ ಹೊಂದಿದೆ. ಹೀಗಾಗಿ ಐಫೋನ್‌ 5ಎಸ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ ತನ್ನ ಗೆಲಾಕ್ಸಿ ಎಸ್‌5ಗೆ 64 ಬಿಟ್‌ ಪ್ರೊಸೆಸರ್ ನೀಡುವ ಸಾಧ್ಯತೆ ಇದೆ.

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸ್ಯಾಮ್‌ಸಂಗ್‌ ಈಗಾಗಲೇ 4ಜಿಬಿ RAM ತಯಾರಿಸುತ್ತಿರುವುದನ್ನು ಸ್ಯಾಮ್‌ಸಂಗ್‌ ಟುಮಾರೋ ವೆಬ್‌ಸೈಟ್‌ ಪ್ರಕಟಿಸಿದೆ. ಹೀಗಾಗಿ ಗೆಲಾಕ್ಸಿ ಎಸ್‌5 ಸ್ಯಾಮ್‌ಸಂಗ್‌ನ ದುಬಾರಿ ಫೋನ್‌ ಆಗಿರುವುದರಿಂದ 4ಜಿಬಿ RAMನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಫೆಬ್ರವರಿ 24ಕ್ಕೆ ಬಿಡುಗಡೆ!

ಗೆಲಾಕ್ಸಿ ಎಸ್‌5 ಹಿಂದುಗಡೆ 16 ಎಂಪಿ ಕ್ಯಾಮೆರಾ ಸೆನ್ಸರ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+