ಮೋದಿ ಫೋನ್‌ ಅಕ್ಟಾ ಕೋರ್‌ ಪ್ರೊಸೆಸೆರ್‌ನಲ್ಲಿ ಬರುತ್ತಂತೆ!

By Ashwath
|

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೆಸರಿನಲ್ಲಿ ಮಾರುಕಟ್ಟೆ ಬರಲಿರುವ ಸ್ಮಾರ್ಟ್‌ಫೋನ್‌ ಅಕ್ಟಾ ಕೋರ್‌ ಪ್ರೊಸೆಸರ್‌ನಲ್ಲಿ ಬರಲಿದೆಯಂತೆ. ಡಿಸೆಂಬರ್‌ 15ಕ್ಕೆ ಈ ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಒಂದು ವೇಳೆ ನಿಗದಿಯದಂತೆ ಬಿಡುಗಡೆಯಾದರೆ ಅಕ್ಟಾ ಕೋರ್‌ ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗಲಿರುವ ದೇಶೀಯ ಕಂಪೆನಿ ಮೊದಲ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆಯನ್ನು ಈ ಸ್ಮಾರ್ಟ್‌‌ಫೋನ್‌ ಪಡೆಯಲಿದೆ.ಮೈಕ್ರೋಮ್ಯಾಕ್ಸ್‌ ಮತ್ತು ಕಾರ್ಬ‌ನ್‌ ಕಂಪೆನಿ ಅಕ್ಟಾ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ ನಿರ್ಮಾಣಕ್ಕೆ ಕೈ ಹಾಕಿದ್ದು ಜನವರಿಯಲ್ಲಿ ಸ್ಮಾರ್ಟ್‌‌ಫೋನ್‌ ಬಿಡುಗಡೆಯಾಗುವ ಸಾಧ್ಯತೆ ಇದೆ.

 ಮೋದಿ ಫೋನ್‌ ಅಕ್ಟಾ ಕೋರ್‌ ಪ್ರೊಸೆಸೆರ್‌ನಲ್ಲಿ ಬರುತ್ತಂತೆ!


5.7 ಇಂಚಿನ ಟಚ್‌ಸ್ಕ್ರೀನ್‌,ಅಕ್ಟಾ ಕೋರ್‌ ಪ್ರೊಸೆಸರ್‌,2 GB ರ್‍ಯಾಮ್‌,16/32 GB ಆಂತರಿಕ ಮೆಮೊರಿ,13 ಎಂಪಿ ಹಿಂದುಗಡೆ ಕ್ಯಾಮೆರಾ,8 ಎಂಪಿ ಮುಂದುಗಡೆ ಕ್ಯಾಮೆರಾ,2800 mAh ಬ್ಯಾಟರಿ ವಿಶೇಷತೆಯನ್ನು ಈ ಸ್ಮಾರ್ಟ್‌‌ನಮೋ ಹೊಂದಿರುತ್ತದೆ ಎನ್ನಲಾಗಿದೆ.ಸ್ಮಾರ್ಟ್‌ಫೋನನ್ನು 19574 ಬೆಲೆಯಲ್ಲಿ ಬಿಡುಗಡೆ ಮಾಡಲು ಸ್ಮಾರ್ಟ್‌ ನಮೋ ಕಂಪೆನಿ ಮುಂದಾಗಿದೆ.ಆದರೆ ಆಂಡ್ರಾಯ್ಡ್‌ನಲ್ಲಿ ಯಾವ ಆಪರೇಟಿಂಗ್ ಸಿಸ್ಟಂನ್ನು ಈ ಸ್ಮಾರ್ಟ್‌‌ಫೋನ್‌ ಒಳಗೊಂಡಿರುತ್ತದೆ ಎನ್ನುವುದಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


ಈಗಾಗಲೇ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಎರಡು ಸ್ಮಾರ್ಟ್‌‌ಫೋನ್‌ ಲಿಸ್ಟ್‌ ಆಗಿದೆ.ಸ್ಮಾರ್ಟ್‌ನಮೋ ಕೇಸರಿ ಒನ್‌,ಸ್ಮಾರ್ಟ್‌ನಮೋ ಕೇಸರಿ 2 ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದ್ದು ಆನ್‌ಲೈನ್‌ ತಾಣ ಸ್ನಾಪ್‌ಡೀಲ್‌ನಲ್ಲಿ999 ರೂ. ನೀಡಿ ಮುಂಗಡ ಬುಕ್ಕಿಂಗ್‌ ಮಾಡಬಹುದಾಗಿದೆ.

ಇದನ್ನೂ ಓದಿ: ಮೋದಿ ಸ್ಮಾರ್ಟ್‌ಫೋನ್‌‌ ಬಗ್ಗೆ ತಿಳಿಯಬೇಕಾದ ಆರು ಅಂಶಗಳು

news source:www.themobileindian.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X