Subscribe to Gizbot

ಅಕ್ಟಾ ಕೋರ್‌ ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗಲಿದೆ ಸ್ಮಾರ್ಟ್‌‌ ನಮೋ

Posted By:

ಸದ್ಯದಲ್ಲೇ ಅಕ್ಟಾಕೋರ್‌ ಪ್ರೊಸೆಸರ್‌ನಲ್ಲಿ ಸ್ಮಾರ್ಟ್‌‌ನಮೋ ಫ್ಯಾಬ್ಲೆಟ್‌‌‌ ಬಿಡುಗಡೆಯಾಗಲಿದೆ.ಸ್ಮಾರ್ಟ್‌‌ನಮೋ ತನ್ನ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು,ಫ್ಯಾಬ್ಲೆಟ್‌ನ ಕೆಲವೊಂದು ವಿಶೇಷತೆಗಳನ್ನು ಬಹಿರಂಗ ಪಡಿಸಿದೆ.

ಸ್ಮಾರ್ಟ್‌‌ನಮೋ ಫ್ಯಾಬ್ಲೆಟ್‌‌ 1.7 GHz ಮೀಡಿಯಾಟೆಕ್‌ ಅಕ್ಟಾಕೋರ್‌ ಪ್ರೊಸೆಸರ್‌, 2ಜಿಬಿ ರ್‍ಯಾಮ್‌‌,16ಜಿಬಿ ಆಂತರಿಕ ಮೆಮೊರಿ 1920x1200 ರೆಸೂಲೂಶನ್‌ ಹೊಂದಿರುವ 7 ಇಂಚಿನ ಸ್ಕ್ರೀನ್‌‌,3500 mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದೆ. ಆಂಡ್ರಾಯ್ಡ್‌‌ನಲ್ಲಿ ಯಾವ ಓಎಸ್‌‌ ಮತ್ತು ಕ್ಯಾಮೆರಾ ವಿಶೇಷತೆ ಬಗ್ಗೆ ಯಾವುದೇ ಮಾಹಿತಿ ಪ್ರಕಟಿಸಿಲ್ಲ.

ಸ್ಮಾರ್ಟ್‌‌ನಮೋ ಅಕ್ಟಾ ಕೋರ್‍ ಪ್ರೊಸೆಸರ್‌‌ನಲ್ಲಿ ಡಿಸೆಂಬರ್‌‌ನಲ್ಲಿ ಬಿಡುಗಡೆಯಾಗಲಿದೆ ಎನ್ನುವ ವದಂತಿ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಆದರೆ ಡಿಸೆಂಬರ್‌ನಲ್ಲಿ ಅಕ್ಟಾ ಕೋರ್‌ ಪ್ರೊಸೆಸರ್‌‌ನಲ್ಲಿ ಸ್ಮಾರ್ಟ್‌‌ನಮೋ ಸ್ಮಾರ್ಟ್‌‌‌‌‌ ಬಿಡುಗಡೆಯಾಗಿರಲಿಲ್ಲ. ಈಗಾಗಲೇ ದೇಶೀಯ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್‌,ಇಂಟೆಕ್ಸ್‌‌,ಕಾರ್ಬ‌‌ನ್‌‌‌,ವಿಕ್ಡ್‌‌ಲೀಕ್‌ ಕಂಪೆನಿಗಳು ಮೀಡಿಯಾ ಟೆಕ್‌ ಕಂಪೆನಿಯ ಅಕ್ಟಾಕೋರ್‌ ಪ್ರೊಸೆಸರ್‌ ಹೊಂದಿರುವ ಸ್ಮಾರ್ಟ್‌‌ಫೋನ್‌ಗಳನ್ನು ಬಿಡುಗಡೆ ಮಾಡಿವೆ.

ಮುಂದಿನ ಪುಟದಲ್ಲಿ ನರೇಂದ್ರ ಮೋದಿ ಸ್ಮಾರ್ಟ್‌ಫೋನ್‌‌ ಬಗ್ಗೆ ತಿಳಿಯಬೇಕಾದ ಅಂಶ ಜೊತೆಗೆ ಈ ಹಿಂದೆ ಬಿಡುಗಡೆಯಾಗಿರುವ ನಮೋ ಸ್ಮಾರ್ಟ್‌‌‌ಫೋನ್‌‌ ವಿವರವನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ :ನರೇಂದ್ರ ಮೋದಿಗೆ ಭಾರೀ ಜನಪ್ರಿಯತೆ ತಂದುಕೊಟ್ಟ ಸೋಲಾರ್‌ ಪಾರ್ಕ್‌ ಬಗ್ಗೆ ತಿಳಿದಿದ್ದೀರಾ?

Post by Smartnamo.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚೀನಾ ಪ್ರೇರಣೆಯಂತೆ!

1

ಚೀನಾದ ಕೆಲವೊಂದು ಎಲೆಕ್ಟ್ರಾನಿಕ್‌ ಉತ್ಪನ್ನಗಳು ವಿಶೇಷವಾಗಿ ಎಂಪಿ3 ಪ್ಲೇಯರ್‌ಗಳು,ಅಲ್ಲಿನ ರಾಜಕೀಯ ನಾಯಕರ ಹೆಸರಿನಲ್ಲಿ ಮಾರುಕಟ್ಟೆಗೆ ಬರುತ್ತಿವೆ.ಚೀನಾದ ಈ ಟ್ರೆಂಡ್‌‌ ಪ್ರೇರಣೆಯಾಗಿ ಮೋದಿ ಅಭಿಮಾನಿ ಉದ್ಯಮಿಗಳು ಈ ಸ್ಮಾರ್ಟ್ ನಮೋ ಫೋನ್‌ ಫೋನ್‌ಗಳನ್ನು ತಯಾರಿಸುತ್ತಿದ್ದಾರೆ.

ಏನೆಲ್ಲ ಇರುತ್ತೆ ಈ ಸ್ಮಾರ್ಟ್‌ಫೋನಲ್ಲಿ?

2

ನರೇಂದ್ರ ಮೋದಿ ಸಾಧನೆಗಳ ಮಾಹಿತಿಯಿರುವ ವಿಡಿಯೋ ಮತ್ತು ಫೋಟೋಗಳಿರುವ ಪ್ರಿ ಲೋಡೆಡ್‌ ಅಪ್ಲಿಕೇಶನ್‌ಗಳು ಮೋದಿ ಸ್ಮಾರ್ಟ್‌‌‌‌‌ಫೋನ್‌ಲ್ಲಿದೆ.

ಸ್ಮಾರ್ಟ್‌ನಮೋ ಕೇಸರಿ1(SmartNamo Saffron One)

ಸ್ಮಾರ್ಟ್‌ನಮೋ ಕೇಸರಿ1

ಬೆಲೆ:11,990

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‍
16 ಜಿಬಿ ಆಂತರಿಕ ಮೆಮೊರಿ
1GB ರ್‍ಯಾಮ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
3150 mAh ಬ್ಯಾಟರಿ

ಸ್ಮಾರ್ಟ್‌ ನಮೋ ಕೇಸರಿ 2(SmartNamo Saffron Two)

ಸ್ಮಾರ್ಟ್‌ ನಮೋ ಕೇಸರಿ 2

ಬೆಲೆ: 24,000

ವಿಶೇಷತೆ:
ಡ್ಯುಯಲ್ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
6.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಮೀಡಿಯಾಟೆಕ್‌ಕ್ವಾಡ್‌ ಕೋರ್‌ ಪ್ರೊಸೆಸರ್‌
32GB ಆಂತರಿಕ ಮೆಮೋರಿ
2GB ರ್‍ಯಾಮ್‌
ಫ್ಲ್ಯಾಶ್‌ ಇರುವ 13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಜಿಪಿಎಸ್‌,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
3150 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot