ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯ ಶಿಯೋಮಿ ರೆಡ್‌ಮಿ ನೋಟ್ 4

ಇಲ್ಲಿಯ ವರೆಗೂ ಆನ್‌ಲೈನಿನಲ್ಲಿ ಮಾತ್ರ ಲಭ್ಯವಿದ್ದ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನನ್ನು ಸಾಮಾನ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

|

ಚೀನಾ ಮೂಲದ ಮೊಬೈಲ್ ತಯಾರಕ ಕಂಪನಿ ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದ್ದು, ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಸ್ಮಾರ್ಟ್‌ಪೋನುಗಳನ್ನು ನೀಡಿವ ಮೂಲಕ ತನ್ನದೇ ಆದ ಅಭಿಮಾನಿ ವೃಂದವನ್ನು ಗಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಇಲ್ಲಿಯ ವರೆಗೂ ಆನ್‌ಲೈನಿನಲ್ಲಿ ಮಾತ್ರ ಲಭ್ಯವಿದ್ದ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನನ್ನು ಸಾಮಾನ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯ ಶಿಯೋಮಿ ರೆಡ್‌ಮಿ ನೋಟ್ 4

ಓದಿರಿ: ಎಚ್ಚರ..!! ಒಂದು ಫೋಟೋ ನಿಮ್ಮ ವಾಟ್ಸಪ್ ಆಕೌಂಟ್ ಹ್ಯಾಕ್ ಮಾಡಲಿದೆ..!!

ಆರಂಭದಲ್ಲಿ ಕೇವಲ ಆನ್‌ಲೈನ್‌ನಲ್ಲೇ ತನ್ನ ಪೋನುಗಳನ್ನು ಬಿಡುಗಡೆ ಮಾಡುವ ಶಿಯೋಮಿ, ನಂತರದಲ್ಲಿ ಸಾಮಾನ್ಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಸದ್ಯ ಆನ್‌ಲೈನಿನಲ್ಲಿ ಸಾಕಷ್ಟು ಹವಾ ಎಬ್ಬಿಸಿರುವ ಶಿಯೋಮಿ ರೆಡ್‌ಮಿ ನೋಟ್‌ 4 ಈ ಹಿಂದೆ ಎರಡು ಭಾರಿ ಆನ್‌ಲೈನಿನಲ್ಲಿ ಸೇಲಿಗೆ ಬಂದ ಸಂದರ್ಭದಲ್ಲಿ ಕೆಲವೇ ನಿಮಿಷಗಳಲ್ಲಿ ಬಿಸಿ ದೋಸೆಯಂತೆ ಮಾರಾಟವಾಗಿತ್ತು. ಈ ಪೋನನ್ನು ಖರೀದಿಸ ಬೇಕು ಎಂದು ತುದಿಗಾಲಿನಲ್ಲಿ ನಿಂತಿದ್ದ ಹಲವರಿಗೆ ಪೋನು ಸಿಗದೆ ನಿರಾಸೆ ಅನುಭವಿಸಿದ್ದರು.

ಶಿಯೋಮಿ ಆನ್‌ಲೈನಿನಲ್ಲಿ ಸುಮಾರು ಒಂದು ಮಿಲಿಯನ್ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಮಾರ್ಚ್ 21 ರಿಂದ ಸಾಮಾನ್ಯ ಮಾರುಕಟ್ಟೆಗೆ (ಆಫ್‌ಲೈನ್ ಮಾರುಕಟ್ಟೆ) ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಈಗಾಗಲೇ ಪ್ರೀ ಆರ್ಡರ್ ಬುಕಿಂಗ್‌ಗೆ ಅವಕಾಶವನ್ನು ಮಾಡಿಕೊಟ್ಟಿದೆ.

ಓದಿರಿ: 6 ಇಂಚಿನ ಡಿಸ್‌ಪ್ಲೇ ಹೊಂದಿರುವ ಮೈಕ್ರೋಮಾಕ್ಸ್ ಕ್ಯಾನ್ವಾಸ್ ಮೆಗಾ 2 ಪ್ಲಸ್‌: ಬೆಲೆ ರೂ. 7,499 ಮಾತ್ರ

ಜನವರಿ 23 ರಂದು ಆನ್‌ಲೈನಿನಲ್ಲಿ ಮಾರಕಟ್ಟಗೆ ಬಂದ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನು ಈ ಹಿಂದಿನ ನೋಟ್ 3 ಮಾರಾಟದ ದಾಖಲೆಯನ್ನು ಅನಾಯಸವಾಗಿ ಆಳಿಸಿ ಹಾಕಿತ್ತು. ಮೂರು ವಿಧದಲ್ಲಿ ಈ ಪೋನು ಲಭ್ಯವಿದ್ದು, 2GB RAM/32 GB, 3GB RAM/32GB ಮತ್ತು 4GB RAM/64GB ಮಾದರಿಗಳಲ್ಲಿ ಮಾರಾಟವಾಗುತ್ತಿದೆ.

ರೆಡ್‌ಮಿ ನೋಟ್ 4 ಪೋನ್‌ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಈ ಪೋನಿನಲ್ಲಿ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆರ್ ಅಳವಡಿಸಲಾಗಿದ್ದು, 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ. 4G VoLTE ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ.ಇದರೊಂದಿಗೆ ಮೆಟಾಲಿಕ್ ಬಾಡಿ, ಬ್ಲೂಟೂತ್, GPS, USB ಪೋರ್ಟ್ ಗಳಿದೆ.

ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯ ಶಿಯೋಮಿ ರೆಡ್‌ಮಿ ನೋಟ್ 4

ಓದಿರಿ: 3GB RAM ಹೊಂದಿರುವ ಕೂಲ್‌ಪ್ಯಾಡ್ ನೋಟ್ 5 ಲೈಟ್‌: ಬೆಲೆ ರೂ.8,199 ಮಾತ್ರ

ಶಿಯೋಮಿಯ ನೋಟ್‌ 4 ಸ್ಮಾರ್ಟ್‌ಪೋನಿನಲ್ಲಿರುವ ಆಯ್ಕೆಗಳು ಬೇರೆ ಪೋನಿನಲ್ಲಿ ಇದೇ ಬೆಲೆಗೆ ಖಂಡಿತ ದೊರೆಯುವುದಿಲ್ಲ. ಇದಕ್ಕಾಗಿಯೇ ಗ್ರಾಹಕರು ಬೇಗನೇ ಶಿಯೋಮಿ ಫೋನುಗಳನ್ನು ಮುಗಿಬಿದ್ದು ಖರೀದಿಸುತ್ತಾರೆ ಎನ್ನಲಾಗಿದೆ. ಸದ್ಯ ಸಾಮಾನ್ಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನು ಹೇಗೆ ಜನರಿಗೆ ಹತ್ತಿರವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Best Mobiles in India

Read more about:
English summary
Xiaomi claims to have sold over 1 million units of its Redmi Note 4 smartphone in India in 45 days. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X