Subscribe to Gizbot

6 ಇಂಚಿನ ಡಿಸ್‌ಪ್ಲೇ ಹೊಂದಿರುವ ಮೈಕ್ರೋಮಾಕ್ಸ್ ಕ್ಯಾನ್ವಾಸ್ ಮೆಗಾ 2 ಪ್ಲಸ್‌: ಬೆಲೆ ರೂ. 7,499 ಮಾತ್ರ

Written By:

ಮತ್ತೆ ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪನಿ ಸುದ್ದಿಗೆ ಬಂದಿದ್ದು, ಮತ್ತೊಂದು ಆರಂಭಿಕ ಬೆಲೆಯ ಸ್ಮಾರ್ಟ್‌ಪೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಪೋನನ್ನು ಮಾರುಕಟ್ಟೆಗೆ ಪರಿಚಯಿಸಿರುವುದಾಗಿ ಕಂಪನಿ ಹೇಳಿದೆ.

ಓದಿರಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಸರ್ಕಾರ: BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!!

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಮೆಗಾ 2 ಪೋನಿನ ಮುಂದುವರೆದ ಭಾಗವಾಗಿರುವ ಕ್ಯಾನ್‌ವಾಸ್ ಮೆಗಾ 2 ಪ್ಲಸ್ ಭಾರತೀಯ ಮಾರುಕಟ್ಟೆಯಲ್ಲಿ 7,499 ರೂಗಳಿಗೆ ಮಾರಾಟವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 6 ಇಂಚಿನ ಪರದೆ:

6 ಇಂಚಿನ ಪರದೆ:

ಕ್ಯಾನ್‌ವಾಸ್ ಮೆಗಾ 2 ಪ್ಲಸ್ ಸ್ಮಾರ್ಟ್‌ಪೋನಿನಲ್ಲಿ ಡೊಡ್ಡದೇ ಎನ್ನುವ 6 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಅಳವಡಿಸಲಾಗಿದ್ದು, 960×540 p ರೆಸಲ್ಯೂಷನ್ ಗುಣಮಟ್ಟವನ್ನು ಈ ಪರದೆ ಹೊಂದಿದೆ ಎನ್ನಲಾಗಿದೆ. ದೊಡ್ಡ ಸ್ಕ್ರಿನ್ ಹೊಂದಿರುವುದರಿಂದ ವಿಡಿಯೋ ವಿಕ್ಷಣೆಗೆ ಹೇಳಿ ಮಾಡಿಸಿದಂತಿದೆ.

2 GB RAM/16 GB ROM

2 GB RAM/16 GB ROM

ಕ್ಯಾನ್‌ವಾಸ್ ಮೆಗಾ 2 ಪ್ಲಸ್ ಪೋನಿನಲ್ಲಿ 2 GB RAM ಇದ್ದು, 16 GB ಇಂಟರ್ನಲ್ ಮೆಮೊರಿಯನ್ನು ಇದು ಹೊಂದಿದೆ ಎನ್ನಲಾಗಿದೆ. ಇಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್‌ ಹಾಕುವ ಮೂಲಕ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

8 MP ಕ್ಯಾಮೆರಾ:

8 MP ಕ್ಯಾಮೆರಾ:

ಕ್ಯಾನ್‌ವಾಸ್ ಮೆಗಾ 2 ಪ್ಲಸ್ ಪೋನಿನ ಹಿಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, LED ಫ್ಲಾಷ್ ಲೈಟ್ ಸಹ ಇದರೊಂದಿಗಿದೆ. ಸ್ವಂತೀ ತೆಗೆಯಲು 5 MP ಕ್ಯಾಮೆರಾವನ್ನು ಇದರಲ್ಲಿ ನೀಡಲಾಗಿದೆ.

3000mAh ಬ್ಯಾಟರಿ:

3000mAh ಬ್ಯಾಟರಿ:

ಕ್ಯಾನ್‌ವಾಸ್ ಮೆಗಾ 2 ಪ್ಲಸ್ ಪೋನಿನಲ್ಲಿ ದೀರ್ಘಕಾಲದ ಬ್ಯಾಟರಿ ಬಾಳಿಕೆಗಾಗಿ 3000mAh ಬ್ಯಾಟರಿ ಅಳವಡಿಸಲಾಗಿದ್ದು, ಈ ಪೋನು ಆಂಡ್ರಾಯ್ಡ್ 6.0ದಲ್ಲಿ ಕಾರ್ಯನಿರ್ವಹಿಸಲಿದೆ. 4G VoLTE ಸಫೋರ್ಟ್ ಮಾಡುವ ಈ ಪೋನಿನಲ್ಲಿ ಬ್ಲೂಟೂತ್ 4.0, WiFi, GPS ಮತ್ತು ಎಫ್‌ ಎಂ ರೇಡಿಯೋವನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Micromax has been out of action lately however the company announced a new smartphone called the Canvas Mega 2 Plus. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot