ಅಮೇರಿಕಾ ಮಾದರಿಯಲ್ಲಿ ಬೆಂಗಳೂರು ಸಿಟಿ ರೈಲ್ವೇ ಸ್ಟೇಶನ್
ನಗರ ರೈಲ್ವೇ ಸ್ಟೇಶನ್‌ಗಳಲ್ಲಿ ಹೊರಹೋಗುವ ಅಥವಾ ಒಳಬರುವ ರೈಲುಗಳನ್ನು ಅರಿಯಬೇಕು ಎಂದಾದಲ್ಲಿ ರೈಲು ನಿಲ್ದಾಣದ ಒಳಗೆ ಅಲೆದಾಡುವ ಪರಿಸ್ಥಿತಿ ಇನ್ನಿಲ್ಲ.
ಓದಿರಿ: ಭಾರತದ ಫೇಸ್‌ಬುಕ್ ದೇವಾಲಯಕ್ಕೆ ಭೇಟಿ ನೀಡಿದ್ದೀರಾ?

ಈಗ ಸಂಪೂರ್ಣ ಮಾಹಿತಿ ಕ್ಲಿಕ್ ಮಾಡುವುದರೊಂದಿಗೆ ನಿಮಗೆ ದೊರೆಯಲಿದೆ. www.bengalururailwaystation.com ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಗರ ರೈಲು ನಿಲ್ದಾಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.
ಓದಿರಿ: ಅತಿಯಾದ ಫೋನ್ ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ

ವಾಶಿಂಗ್ಟನ್ ಡಿಸಿ ರೈಲು ನಿಲ್ದಾಣದಲ್ಲಿ ಬಳಸಲಾದ ತಂತ್ರಜ್ಞಾನವನ್ನು ಇದೇ ಪ್ರಥಮ ಬಾರಿಗೆ ಬೆಂಗಳೂರು ಸಿಟಿ ರೈಲ್ವೇ ಸ್ಟೇಶನ್‌ನಲ್ಲಿ ಬಳಸಲಾಗುತ್ತಿದೆ. ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನೂಪ್ ದಯಾನಂದ್ ಸಾಧು ತಮ್ಮ ಯುಎಸ್ ಭೇಟಿಯಲ್ಲಿ ಈ ತಂತ್ರಜ್ಞಾನವನ್ನು ಕಂಡು ಅದನ್ನು ಬೆಂಗಳೂರಿಗೆ ತಂದಿದ್ದಾರೆ.
ಓದಿರಿ: ಐಫೋನ್ 7: ಫೋನ್ ಮಾರುಕಟ್ಟೆಯ ಬಾದ್‌ಷಾ

ರೈಲ್ವೇ ಸಚಿವರು ಈ ವ್ಯವಸ್ಥೆಗೆ ಹಸಿರು ನಿಶಾನೆಯನ್ನು ಕೂಡ ತೋರಿಸಿದ್ದಾರೆ. ಇನ್ನು ದೇಶಾದ್ಯಂತ ಈ ವ್ಯವಸ್ಥೆಯನ್ನು ಅಳವಡಿಸುವಲ್ಲಿ ಅವರು ಆಸಕ್ತಿಯನ್ನು ಕೂಡ ಹೊಂದಿದ್ದಾರೆ. ಇನ್ನು ಗುರುವಾರ ಈ ವ್ಯವಸ್ಥೆಯನ್ನು ಲಾಂಚ್ ಮಾಡಲಾಗುತ್ತಿದ್ದು ಜೊತೆಗೆ ಮೊಬೈಲ್ ಅಪ್ಲಿಕೇಶನ್ ಆದ RAILNAV ಅನ್ನು ಕೂಡ ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗುತ್ತಿದೆ.


Click it and Unblock the Notifications