ಅತಿಯಾದ ಫೋನ್ ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ

By Shwetha
|

ಆಧುನಿಕ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್ ಬಳಕೆಯನ್ನು ಮಾಡದವರು ಯಾರಿದ್ದಾರೆ ಹೇಳಿ? ಮಾಹಿತಿ ಸಂಗ್ರಹಣೆ, ಕರೆ ಮಾಡುವುದು, ಸಂದೇಶ ರವಾನೆ ಹೀಗೆ ಹತ್ತು ಹಲವು ಕೆಲಸಗಳನ್ನು ಒಂದೇ ನಿಮಿಷದಲ್ಲಿ ಚಕಚಕನೇ ಮಾಡಿ ಮುಗಿಸಲು ನಿಮಗೆ ನೆರವನ್ನೀಯುತ್ತದೆ.

ಆದ್ದರಿಂದಲೇ ಈ ಅಂಗೈಯಗಲದ ಮಾಣಿಕ್ಯ ನಮಗೆ ಅಷ್ಟು ಪ್ರಿಯವಾಗಿರುವುದು. ಇದರಿಂದ ಉಪಕಾರ ಎಷ್ಟಿದೆಯೋ ಅಷ್ಟೇ ಅಪಾಯ ಕೂಡ ಇದೆ ಎಂಬ ಅಂಶವನ್ನು ನೀವು ಗಮನಿಸಿದ್ದೀರಾ? ಹೌದು ನಾವು ಅಷ್ಟೊಂದು ಇಷ್ಟಪಡುವ ಈ ಪುಟ್ಟ ಇಲೆಕ್ಟ್ರಿಕ್ ವಸ್ತು ನಮ್ಮ ದೇಹದ ಮೇಲೆ ಅತಿ ಗಂಭೀರವಾದ ದುಷ್ಪರಿಣಾಮವನ್ನೇ ಬೀರಬಲ್ಲುದು. ಅದು ಏನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು.

ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವ ಫೋನ್ ಪ್ರಭಾವವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ನಿಮ್ಮ ಕೈಗಳಿಗೆ ತೊಂದರೆ

ನಿಮ್ಮ ಕೈಗಳಿಗೆ ತೊಂದರೆ

ನೀವು ಫೋನ್ ಬಳಸುವಾಗ ನಿಮ್ಮ ಬೆರಳು ಹೆಚ್ಚು ಇಲ್ಲಿ ಕಾರ್ಯನಿರ್ವಹಿಸುತ್ತದೆ. ನಿರಂತರ ಸ್ಕ್ರಾಲಿಂಗ್, ಪಠ್ಯ ಟೈಪಿಸುವುದು ಹೀಗೆ ಫೋನ್‌ನಲ್ಲಿ ಬಹು ಕೆಲಸಗಳನ್ನು ನಾವು ಮಾಡುವುದರಿಂದ ನಮ್ಮ ಭುಜ ಕೈಗಳಿಗೆ ತೀವ್ರ ತೆರನಾದ ಹಾನಿ ಉಂಟಾಗುತ್ತದೆ.

ಬೆನ್ನು ನೋವು

ಬೆನ್ನು ನೋವು

ಸಂದೇಶ ಕಳುಹಿಸಲು ನೀವು ಆಗಾಗ್ಗೆ ಬೆನ್ನು ಬಗ್ಗಿಸುವುದರಿಂದ ಬೆನ್ನು ನೋವು ಉಂಟಾಗುವುದು ಖಂಡಿತ. ಮತ್ತು ನಿಮ್ಮ ಕುತ್ತಿಗೆಯ ಮೇಲೂ ಇದು ಪ್ರಬಲ ಪೆಟ್ಟನ್ನು ನೀಡುತ್ತದೆ.

ತೀವ್ರ ತಲೆನೋವು

ತೀವ್ರ ತಲೆನೋವು

ಫೋನ್ ಬಳಕೆಯಿಂದ ನಿಮ್ಮ ಕಣ್ಣಿಗೆ ಹಾನಿಯುಂಟಾಗುವುದಲ್ಲದೆ ತಲೆಗೂ ತೀವ್ರ ಪೆಟ್ಟನ್ನು ಉಂಟುಮಾಡುತ್ತದೆ. ಇದರಿಂದ ತಲೆನೋವು ಉಂಟಾಗುವುದು ಸಹಜ.

ಫೋನ್‌ನ ಬೆಳಕು

ಫೋನ್‌ನ ಬೆಳಕು

ಇನ್ನು ಫೋನ್‌ನ ಬೆಳಕು ನಿಮ್ಮ ಸುಖ ನಿದ್ರೆಗೆ ಹಾನಿಯುಂಟು ಮಾಡುವುದು ಖಂಡಿತ. ಇದರ ನೀಲಿಬೆಳಕು ನಿಮ್ಮ ಕಣ್ಣನ್ನು ಬಲಿ ತೆಗೆಯುವುದರೊಂದಿಗೆ ನಿದ್ದೆಗೂ ಕುತ್ತನ್ನು ಉಂಟುಮಾಡುತ್ತದೆ.

ಒತ್ತಡ ಹೆಚ್ಚು

ಒತ್ತಡ ಹೆಚ್ಚು

ಫೋನ್‌ನ ತೀವ್ರ ಬಳಕೆ ನಿಮ್ಮಲ್ಲಿ ಒತ್ತಡ ಮತ್ತು ಖಿನ್ನತೆಯನ್ನು ಉಂಟುಮಾಡುತ್ತದೆ.

ಅಪಘಾತ ಹೆಚ್ಚು

ಅಪಘಾತ ಹೆಚ್ಚು

ಇನ್ನು ಅಧಿಕ ಫೋನ್ ಬಳಕೆ ಹೆಚ್ಚುವರಿ ಅಪಘಾತಕ್ಕೆ ಕಾರಣವಾಗುತ್ತದೆ.

ಟಾಯ್ಲೆಟ್ ಸೀಟಿಗಿಂತಲೂ ಕೆಟ್ಟದ್ದು

ಟಾಯ್ಲೆಟ್ ಸೀಟಿಗಿಂತಲೂ ಕೆಟ್ಟದ್ದು

ಸಂಶೋಧನೆಗಳಿಂದ ತಿಳಿದು ಬಂದಿರುವ ಅಂಶವೆಂದರೆ ನಿಮ್ಮ ಫೋನ್ ಟಾಯ್ಲೆಟ್ ಸೀಟಿಗಿಂತಲೂ ಕೆಟ್ಟದ್ದು ಎಂಬುದಾಗಿದೆ. ಅಷ್ಟೊಂದು ಸೂಕ್ಷ್ಮಾಣು ಜೀವಿಗಳು ನಿಮ್ಮ ಫೋನ್‌ನಲ್ಲಿ ಇರುತ್ತವೆ.

ಜನಿಸುವ ಮಗುವಿಗೆ ಅಪಘಾತ

ಜನಿಸುವ ಮಗುವಿಗೆ ಅಪಘಾತ

ಹೆಚ್ಚುವರಿ ಫೋನ್ ಬಳಕೆ ನಿಮ್ಮ ಗರ್ಭದಲ್ಲಿರುವ ಶಿಶುವಿನ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತದೆ.

ಅಸಮತೋಲನ

ಅಸಮತೋಲನ

ಗರ್ಭದಲ್ಲಿರುವ ಮಗುವಿಗೆ ಮಾತ್ರವಲ್ಲದೆ ನಿಮ್ಮ ಮೇಲೂ ಇದು ಕೆಟ್ಟ ಪರಿಣಾಮವನ್ನು ಬೀರಬಲ್ಲುದು.

ಹೃದಯ ರೋಗ

ಹೃದಯ ರೋಗ

ಫೋನ್ ಬಳಕೆಯಿಂದ ಹೃದಯ ರೋಗ ಹೆಚ್ಚು ಸಂಭವಿಸಲಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿರುವ ಅಂಶವಾಗಿದೆ.

ಕಿವಿ ಕೇಳದಿರುವಿಕೆ

ಕಿವಿ ಕೇಳದಿರುವಿಕೆ

ಫೋನ್‌ ಬಳಕೆಯಿಂದ ಆಗುವ ಇನ್ನೊಂದು ದುಷ್ಪರಿಣಾಮ ಎಂದರೆ ಆಲಿಸುವಲ್ಲಿ ಉಂಟಾಗುವ ತೊಂದರೆಯಾಗಿದೆ.

ಫೋನ್ ಸ್ಫೋಟ

ಫೋನ್ ಸ್ಫೋಟ

ಇನ್ನು ಫೋನ್ ಸ್ಫೋಟದಂತಹ ಹೆಚ್ಚಿನ ವಿಷಯಗಳನ್ನು ನಿಮ್ಮನ್ನು ಆಗಾಗ್ಗೆ ತಲುಪುತ್ತಲೇ ಇರುತ್ತದೆ. ಫೋನ್ ಬ್ಯಾಟರಿಗೆ ಇಟ್ಟ ಸಂದರ್ಭದಲ್ಲಿ ಸ್ಫೋಟ ಉಂಟಾಗಿ ಆದ ಹಾನಿ, ಫೋನ್ ಕೈಯಲ್ಲಿರುವಾಗಲೇ ಸ್ಫೋಟಗೊಂಡಿರುವುದು ಇತ್ಯಾದಿ.

Best Mobiles in India

English summary
Quick test! Imagine you're in an earthquake, and you have to leave the house immediately. What's the first thing you grab? Your phone, right? No matter where you are, what state you are in, living without your beloved phone seems like an unimaginable feat. Here are the cellphone damages.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X