ಈ ಅಪ್ಲಿಕೇಶನ್ ಇದ್ದರೆ ಸಾಕು ಏರ್‌ಟೆಲ್ 5ಜಿಬಿ ಇಂಟರ್ನೆಟ್ ಉಚಿತ
ತೀರಾ ತಡವಾಗಿ ಏರ್‌ಟೆಲ್ ತನ್ನ ಜಾಕ್‌ಪಾಟ್ ಆಫರ್‌ನೊಂದಿಗೆ ಬಂದಿದ್ದು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಮೈಏರ್‌ಟೆಲ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿರುವ ಬಳಕೆದಾರರಿಗೆ 5ಜಿಬಿ ಉಚಿತ ಡೇಟಾವನ್ನು ನೀಡುತ್ತಿದೆ. ರಿಲಾಯನ್ಸ್ ಜಿಯೋದೊಂದಿಗೆ ಪೈಪೋಟಿಯನ್ನು ಮಾಡುತ್ತಿರುವ ಏರ್‌ಟೆಲ್ ಉಚಿತ ಡೇಟಾವನ್ನು ನೀಡುವುದರ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಕಾರ್ಯನಿರತವಾಗಿದೆ.
ಓದಿರಿ: ಏರ್‌ಟೆಲ್ ವರ್ಸಸ್ ಜಿಯೋ: 4ಜಿಗಳ ನಡುವೆಯೇ ಹಣಾಹಣಿ
ಈ ಉಚಿತ ಡೇಟಾವನ್ನು ನೀವು ನಿಮ್ಮ 2ಜಿ, 3ಜಿ ಮತ್ತು 4ಜಿ ಸ್ಮಾರ್ಟ್‌ಫೋನ್‌ನಲ್ಲಿ ಕೂಡ ಪಡೆದುಕೊಳ್ಳಬಹುದಾಗಿದೆ. 5ಜಿಬಿ ಉಚಿತ ಡೇಟಾಗಾಗಿ ನೀವು ಮೈಏರ್‌ಟೆಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲಿದ್ದೀರಿ ಎಂದಾದಲ್ಲಿ ಕೆಲವೊಂದು ನಿಯಮಗಳು ಮತ್ತು ಷರತ್ತುಗಳನ್ನು ನೀವು ಅರಿತುಕೊಳ್ಳಲೇಬೇಕಾಗಿದೆ. ಹಾಗಿದ್ದರೆ ಆ ನಿಯಮಗಳೇನು ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ತಿಳಿದುಕೊಳ್ಳೋಣ.
ಓದಿರಿ: 4ಜಿ ಸ್ಮಾರ್ಟ್‌ಫೋನ್‌ನಲ್ಲಿರುವ ದೋಷಕ್ಕೆ ಅದ್ಭುತ ಪರಿಹಾರಗಳು: ಟ್ರೈ ಮಾಡಿ

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಲೇಬೇಕು
ನೀವು ಮೈಏರ್‌ಟೆಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಲೇಬೇಕು. ಇದರಿಂದ ನಿಮ್ಮ ಏರ್‌ಟೆಲ್ ಸಂಖ್ಯೆಗೆ 5ಜಿಬಿ ಉಚಿತ ಇಂಟರ್ನೆಟ್ ದೊರೆಯುತ್ತದೆ. ಅಪ್ಲಿಕೇಶನ್ ಇಲ್ಲದೆ ಸರ್ವೀಸ್ ಪ್ರೊವೈಡರ್‌ನಿಂದ ಜಾಕ್‌ಪ್ಯಾಟ್ ಆಫರ್ ಅನ್ನು ನಿಮಗೆ ಪಡೆದುಕೊಳ್ಳಲಾಗುವುದಿಲ್ಲ.

ಏರ್‌ಟೆಲ್‌ನ ಪ್ರಿಪೈಡ್ ಚಂದಾದಾರಿಗೆ
ಭಾರತದಲ್ಲಿರುವ ಎಲ್ಲಾ ಪ್ರಿಪೈಡ್ ಏರ್‌ಟೆಲ್ ಬಳಕೆದಾರರು ಜಾಕ್‌ಪ್ಯಾಟ್ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದ್ದು 5ಜಿಬಿ ಉಚಿತ ಡೇಟಾವನ್ನು ಸರ್ವೀಸ್ ಪ್ರೊವೈಡರ್ ನೀಡಲಿದ್ದಾರೆ.

ರಾತ್ರಿ ಡೇಟಾ ಮಾತ್ರ ಪಡೆದುಕೊಳ್ಳಲಿರುವಿರಿ
5ಜಿಬಿ ಉಚಿತ ಡೇಟಾವನ್ನು ನೀವು ಪಡೆದುಕೊಂಡರೂ, ಇದು ರಾತ್ರಿ ಡೇಟಾ ಮಾತ್ರವಾಗಿದೆ ನಿಮಗೆ ನೀಡಿರುವ ಡೇಟಾವನ್ನು ಬೆಳಗ್ಗಿನ ಜಾವ 12 ರಿಂದ ಬೆಳಗ್ಗೆ 6 ರವರೆಗೆ ಬಳಸಬಹುದಾಗಿದೆ.

ನಿಮ್ಮ ಪ್ರಸ್ತುತ ಡೇಟಾ ಪ್ಯಾಕ್ ಅನ್ನು ಆಧರಿಸಿದೆ
ಏರ್‌ಟೆಲ್‌ನ ಜಾಕ್‌ಪ್ಯಾಟ್ ಆಫರ್ ನೀವು ಚಂದಾದಾರರಾಗಿರುವ ಪ್ರಸ್ತುತ ಡೇಟಾ ಪ್ಯಾಕ್‌ಗೆ ಅನುಗುಣವಾಗಿ ಮಾತ್ರವೇ ಬಳಸಬಹುದಾಗಿದೆ.

ನಿಮ್ಮ ದೈನಂದಿನ ಡೇಟಾ ಪ್ಯಾಕ್ ಅನ್ನು ಬಳಸಲಾಗುತ್ತದೆ
ನೀಡಿರುವ ಸಮಯವನ್ನು ಹೊರತುಪಡಿಸಿ (ಬೆಳಗ್ಗೆ 12 ರಿಂದ ಬೆಳಗ್ಗೆ 6 ರವರೆಗೆ) ನೀವು ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಬಳಸುತ್ತಿದ್ದರೆ ನಿಮ್ಮ ನಿಯಮಿತ ಡೇಟಾ ಪ್ಯಾಕ್‌ನಿಂದ ಅದನ್ನು ಕಡಿತಗೊಳಿಸಲಾಗುತ್ತದೆ.

ಸಪ್ಟೆಂಬರ್ 30 ರ ಮುಂಚೆಯೇ ಪಡೆದುಕೊಳ್ಳಿ
ಏರ್‌ಟೆಲ್ ನೀಡುತ್ತಿರುವ ಜಾಕ್‌ಪ್ಯಾಟ್ ಆಫರ್ 5ಜಿಬಿ ಉಚಿತ ಇಂಟರ್ನೆಟ್ ಸಪ್ಟೆಂಬರ್ 30 ರಿಂದ 2016 ರವರೆಗೆ ಮಾತ್ರ ಲಭ್ಯವಿದೆ. ಈ ತಿಂಗಳ ಕೊನೆಗೂ ಮುಂಚೆಯೇ ಸರ್ವೀಸ್ ಪ್ರೊವೈಡರ್‌ನಿಂದ ಈ ಆಫರ್ ಪಡೆದುಕೊಳ್ಳಿ.

28 ದಿನಗಳ ವ್ಯಾಲಿಡಿಟಿ
ಈ ಉಚಿತ 5ಜಿಬಿ ಡೇಟಾದ ವ್ಯಾಲಿಡಿಟಿ 28 ದಿನಗಳಾಗಿದೆ. 28 ದಿನಗಳ ನಂತರ, ನಿಮ್ಮ ಖಾತೆಗೆ ಸೇರಿಸಲಾಗಿರುವ ಡೇಟಾ ಲ್ಯಾಪ್ಸ್ ಆಗುತ್ತದೆ.

ಇದನ್ನು ಕಂಬೈನ್ ಮಾಡಲಾಗುವುದಿಲ್ಲ
ನಿಮ್ಮ ಪ್ರಿಪೈಡ್ ಏರ್‌ಟೆಲ್ ಸಂಖ್ಯೆಗೆ 50% ನೈಟ್ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಪಡೆದುಕೊಂಡಿದ್ದೀರಿ ಎಂದಾದಲ್ಲಿ, ಪ್ರಸ್ತುತ ಆಫರ್‌ಗೆ ಇದನ್ನು ಸಂಯೋಜಿಸಲಾಗುವುದಿಲ್ಲ.

ವಯಾಂಕ್ ಆಫರ್‌ಗಳನ್ನು ಸೇರಿಸಲಾಗುವುದಿಲ್ಲ
ಮೈಏರ್‌ಟೆಲ್ ಅಪ್ಲಿಕೇಶನ್ ಆಫರ್ ಮಾಡುತ್ತಿರುವ 300 ಎಮ್‌ಬಿ ನೈಟ್ ಡೇಟಾಗೆ ವಯಾಂಕ್ ಆಫರ್‌ಗಳನ್ನು ಸೇರಿಸಲಾಗುವುದಿಲ್ಲ. ವಯಾಂಕ್ ಆಫರ್‌ನಲ್ಲಿ ವಯಾಂಕ್ ಮೂವೀಸ್, ವಯಾಂಕ್ ಗೇಮ್ಸ್ ಮತ್ತು ವಯಾಂಕ್ ಮ್ಯೂಸಿಕ್ ಸರ್ವೀಸ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಅದೇ ಸಂಖ್ಯೆಯನ್ನು ಬಳಸಿ
ಮೈಏರ್‌ಟೆಲ್ ಅಪ್ಲಿಕೇಶನ್‌ನಲ್ಲಿ ರಿಜಿಸ್ಟರ್ ಮಾಡಲು, ಟಾರ್ಗೆಟ್ ಅಪ್ಲಿಕೇಶನ್‌ನಲ್ಲಿರುವ ಅದೇ ಏರ್‌ಟೆಲ್ ಸಂಖ್ಯೆಯನ್ನು ಬಳಸಬೇಕಾಗುತ್ತದೆ. ಆದರೆ ಮಾತ್ರವೇ, ಉಚಿತ 5ಜಿಬಿ ಡೇಟಾವನ್ನು ನಿಮಗೆ ಪಡೆದುಕೊಳ್ಳಲು ಸಾಧ್ಯ.


Click it and Unblock the Notifications








