ಏರ್‌ಟೆಲ್ 4ಜಿ ಜಾಹೀರಾತು ಮೇಲೆ ನಿರ್ಬಂಧ

Written By:

ಭಾರತದಲ್ಲಿ 4 ಜಿ ಸೇವೆಗಳನ್ನು ಪ್ರಥಮ ಬಾರಿಗೆ ಒದಗಿಸಿದ ನೆಟ್‌ವರ್ಕ್ ಏರ್‌ಟೆಲ್ ಆಗಿದ್ದು ಭಾರತದಲ್ಲಿ 300 ಕ್ಕಿಂತಲೂ ಹೆಚ್ಚಿನ ಪಟ್ಟಣಗಳಲ್ಲಿ ಇದು ಸೇವೆಯನ್ನು ಒದಗಿಸುತ್ತಿದೆ. ಇನ್ನು ಇತರ 4 ಜಿ ಕಂಪೆನಿಗಳು ಇನ್ನೂ ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿವೆ. ಆದರೆ ವಿಪರ್ಯಾಸ ಎಂಬಂತೆ ಭಾರತದ ಜಾಹೀರಾತು ಕೌನ್ಸಿಲ್ (ಎಸ್‌ಸಿಐ) ಭಾರತಿ ಏರ್‌ಟೆಲ್‌ನ 4 ಜಿ ಚಾಲೆಂಜ್ ಜಾಹೀರಾತಿಗೆ ನಿರ್ಬಂಧವನ್ನು ಹೇರಿದ್ದು ಇದು ತಪ್ಪುಮಾಹಿತಿಯನ್ನು ನೀಡುತ್ತಿದೆ ಮತ್ತು ಜಾಹೀರಾತನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದೆ.

ಓದಿರಿ: ಅಣಬೆ ಬ್ಯಾಟರಿ ಬಳಸಿ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಿ

ಏರ್‌ಟೆಲ್ 4ಜಿ ನೆಟ್‌ವರ್ಕ್ ಎಂದೆಂದಿಗೂ ವೇಗದ ನೆಟ್‌ವರ್ಕ್ ಎಂಬುದಾಗಿ ಜಾಹೀರಾತಿನಲ್ಲಿದೆ ಅಂತೆಯೇ ನಿಮ್ಮ ನೆಟ್‌ವರ್ಕ್ ಎಲ್ಲಿಯಾದರೂ ವೇಗವಾಗಿದ್ದಲ್ಲಿ, ನಿಮ್ಮ ಮೊಬೈಲ್‌ ಬಿಲ್‌ಗಳನ್ನು ಜೀವನ ಪರ್ಯಂತ ನಾವು ಪಾವತಿಸುತ್ತೇವೆ ಎಂಬುದೂ ಕೂಡ ಇದರಲ್ಲಿದೆ. ಇದು ವಿವಾದಾತ್ಮಕ ಹೇಳಿಕೆಯಾಗಿದೆ ಎಂಬುದಾಗಿ ಸೂಚನೆ ತಿಳಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4 ಜಿ ಸೇವೆ

4 ಜಿ ಸೇವೆ

4 ಜಿ ಸೇವೆ

ಇನ್ನು ಕಂಪೆನಿ ತನ್ನ ವೆಬ್‌ಸೈಟ್‌ನಲ್ಲಿ 4 ಜಿ ಸೇವೆಗಳು ನಾಲ್ಕು ಪಟ್ಟು ಅಧಿಕ ವೇಗವಾಗಿದ್ದು 3ಜಿಗಿಂತಲೂ ಹೆಚ್ಚಿನ ವೇಗದಲ್ಲಿ ಇಂಟರ್ನೆಟ್ ವ್ಯವಸ್ಥೆಯನ್ನು ನಿಮಗೆ ಒದಗಿಸುತ್ತಿದೆ.

6೦ ಎಮ್‌ಬಿಪಿಎಸ್‌

6೦ ಎಮ್‌ಬಿಪಿಎಸ್‌

6೦ ಎಮ್‌ಬಿಪಿಎಸ್‌

ಇನ್ನು ಟೆಲಿಕಾಮ್ ಏರ್‌ಟೆಲ್‌ನ 4ಜಿ ಸೇವೆಗಳನ್ನು ಮುಂಬೈನಲ್ಲಿ ಪರಿಶೀಲಿಸಿದ್ದು ಗರಿಷ್ಟ ಡೌನ್‌ಲೋಡ್ ವೇಗ 6೦ ಎಮ್‌ಬಿಪಿಎಸ್‌ವರೆಗಿರಬೇಕು ಇನ್ನು ವೇಗ 3-10 ಎಮ್‌ಬಿಪಿಎಸ್ ಆಗಿದೆ ಎಂಬುದಾಗಿ ತಿಳಿಸಿದೆ.

ವಿವಾದಾತ್ಮಕ ಹೇಳಿಕೆ

ವಿವಾದಾತ್ಮಕ ಹೇಳಿಕೆ

ವಿವಾದಾತ್ಮಕ ಹೇಳಿಕೆ

ಇನ್ನು ತನ್ನ ಜಾಹೀರಾತಿನಲ್ಲಿ ಏರ್‌ಟೆಲ್ ವಿವಾದಾತ್ಮಕ ಹೇಳಿಕೆ ನೀಡಿದ್ದು ಎಂದೆಂದಿಗೂ ಏರ್‌ಟೆಲ್ 4ಜಿ ಫಾಸ್ಟ್‌ ನೆಟ್‌ವರ್ಕ್ ಆಗಿದೆ ಮತ್ತು ನಿಮ್ಮ ನೆಟ್‌ವರ್ಕ್ ಇದಕ್ಕಿಂತಲೂ ಫಾಸ್ಟ್ ಆಗಿದೆ ಎಂದಾದಲ್ಲಿ ನಾವು ನಿಮ್ಮ ಮೊಬೈಲ್ ಬಿಲ್ ಅನ್ನು ಜೀವನ ಪರ್ಯಂತ ಪಾವತಿಸುತ್ತೇವೆ ಎಂದಾಗಿದೆ.

4ಜಿ

4ಜಿ

4ಜಿ

ಇನ್ನು ಕಂಪೆನಿಯ 4ಜಿ ಇತರ ಕಂಪೆನಿಗಳ 4ಜಿ ನೆಟ್‌ವರ್ಕ್‌ನಂತೆಯೇ ಕೆಲಸ ಮಾಡುತ್ತಿದ್ದು ಇದರಲ್ಲಿ ವ್ಯತ್ಯಾಸವೇನೂ ಇಲ್ಲ ಎಂಬುದಾಗಿ ತಿಳಿಸಿದೆ.

 ತುಸು ವೇಗ

ತುಸು ವೇಗ

ತುಸು ವೇಗ

ಕೆಲವೊಂದು ವಲಯಗಳಲ್ಲಿ ಏರ್‌ಟೆಲ್ 4ಜಿ ಸೇವೆಯನ್ನು ಒದಗಿಸುತ್ತಿದ್ದು ತುಸು ವೇಗವಾಗಿ ಇದು ಕೆಲಸ ಮಾಡುತ್ತದೆ ಎಂಬುದಾಗಿದೆ.

ಇಂಟರ್ನೆಟ್ ವೇಗ ಕುಗ್ಗುತ್ತಿದೆ

ಇಂಟರ್ನೆಟ್ ವೇಗ ಕುಗ್ಗುತ್ತಿದೆ

ಇಂಟರ್ನೆಟ್ ವೇಗ ಕುಗ್ಗುತ್ತಿದೆ

ಬೆಂಗಳೂರು ಮತ್ತು ದೆಹಲಿಯಲ್ಲಿರುವ ಏರ್‌ಟೆಲ್ 4ಜಿ ಬಳಕೆದಾರರನ್ನು ಕೇಳಿದಾಗ 4ಜಿ ಉತ್ತಮವಾಗಿದೆ ಆದರೆ ಸಂಪರ್ಕದಲ್ಲಿ ಇದು ಕೊರತೆಯನ್ನು ಎದುರಿಸುತ್ತಿದೆ ಅದರಲ್ಲೂ ಒಳಾಂಗಣ ಪ್ರದೇಶಗಳಲ್ಲಿ ಇಂಟರ್ನೆಟ್ ವೇಗ ಕುಗ್ಗುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Advertising Standards Council of India (ASCI) has termed Bharti Airtel's 4G speed challenge advertisement as misleading and has asked the teleco to withdraw the advertisement immediately, according to a report of the Mint, a financial daily.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot