ಬೋಸ್‌ ಸಂಸ್ಥೆಯಿಂದ ಎರಡು ಹೊಸ ಇಯರ್‌ಬಡ್ಸ್‌ ಬಿಡುಗಡೆ!

|

ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಭರಾಟೆ ಹೆಚ್ಚಾದಂತೆ ಇಯರ್‌ಫೋನ್‌ಗಳ ಮಾರುಕಟ್ಟೆ ಕೂಡ ವಿಶಾಲವಾಗಿ ಬೆಳೆಯುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಇಯರ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ. ಇವುಗಳಲ್ಲಿ ಬೋಸ್‌ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ಬೋಸ್‌ ಕಂಪೆನಿ ತನ್ನ ಹೊಸ ಬೋಸ್ ಕ್ವಿಟ್ ಕಂಫರ್ಟ್ ಇಯರ್‌ಬಡ್ಸ್‌ ಮತ್ತು ಸ್ಪೋರ್ಟ್ಸ್ ಇಯರ್‌ಬಡ್‌ ಅನ್ನು ಬಿಡುಗಡೆ ಮಾಡಿದೆ. ಈ ಎರಡು ಇಯರ್‌ಬಡ್ಸ್‌ಗಳು ಕೂಡ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ.

ಇಯರ್‌ಫೋನ್‌

ಹೌದು, ಜನಪ್ರಿಯ ಇಯರ್‌ಫೋನ್‌ ಕಂಪೆನಿ ತನ್ನ ಹೊಸ ಬೋಸ್ ಕ್ವೈಟ್ ಕಂಫರ್ಟ್ ಇಯರ್‌ಬಡ್ಸ್‌ ಮತ್ತು ಸ್ಪೋರ್ಟ್ಸ್ ಇಯರ್‌ಬಡ್‌ ಅನ್ನು ಬಿಡುಗಡೆ ಮಾಡಿದೆ. ಇದು ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿದ್ದು, ಸೌಂಡ್‌ಸ್ಪೋರ್ಟ್ ಫ್ರೀ ಬಡ್ಸ್‌ಗಿಂತ ಅಪ್‌ಗ್ರೇಡ್ ಆಗಿರುವ ಸ್ಪೋರ್ಟ್ಸ್ ಇಯರ್‌ಬಡ್‌ಗಳಾಗಿವೆ. ಇನ್ನು ಕ್ವೈಟ್ ಕಂಫರ್ಟ್ ಇಯರ್‌ಬಡ್ಸ್‌ $ 279 (ಸುಮಾರು 20,600ರೂ) ಬೆಲೆಯನ್ನ ಹೊಂದಿದೆ. ಜೊತೆಗೆ ಸ್ಪೋರ್ಟ್ಸ್ ಇಯರ್‌ಬಡ್‌ಗಳು $179 (ಸುಮಾರು 13,200 ರೂ) ಬೆಲೆಯನ್ನು ಹೊಂದಿವೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ಯಾವೆಲ್ಲಾ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಯರ್‌ಡ್ಸ್

ಬೋಸ್ ಕ್ವಿಟ್ ಕಂಫರ್ಟ್ ಇಯರ್‌ಡ್ಸ್ ವಾಲ್ಯೂಮ್-ಆಪ್ಟಿಮೈಸ್ಡ್ ಆಕ್ಟಿವ್ ಇಕ್ಯೂ ಟೆಕ್ನಾಲಜಿಯನ್ನು ಹೊಂದಿದ್ದು, ಪರಿಮಾಣವನ್ನು ಸರಿಹೊಂದಿಸಿದಾಗಲೂ ಗರಿಷ್ಠ ಮತ್ತು ಕನಿಷ್ಠವನ್ನು ಹೊಂದಿಸುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ವಾಯರ್‌ಲೆಸ್ ಇಯರ್‌ಬಡ್‌ಗಳು ಗೆಸ್ಚರ್ ಆಧಾರಿತ ಟಚ್ ಕಂಟ್ರೋಲ್‌ ಅನ್ನು ಹೊಂದಿವೆ. ಇನ್ನು ಈ ಇಯರ್‌ಬಡ್ಸ್‌ ಐಪಿಎಕ್ಸ್ 4 ರೇಟ್ ಮಾಡಲ್ಪಟ್ಟಿದೆ. ಅಲ್ಲದೆ ಕ್ವೈಟ್ ಕಂಫರ್ಟ್ ಇಯರ್‌ಬಡ್ಸ್‌ 6 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಬೋಸ್ ಕಂಪೆನಿ ಭರವಸೆ ನೀಡಿದೆ.

ಬೋಸ್

ಇನ್ನು ಬೋಸ್ ಸಂಸ್ಥೆ ಪರಿಚಯಿಸಿರುವ ಸ್ಪೋರ್ಟ್ ಇಯರ್‌ಬಡ್‌ಗಳು ‘ಬಾಲ್ಟಿಕ್ ಬ್ಲೂ', ‘ಗ್ಲೇಸಿಯರ್ ವೈಟ್' ಮತ್ತು ‘ಟ್ರಿಪಲ್ ಬ್ಲ್ಯಾಕ್' ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ವಾಯರ್‌ಲೆಸ್ ಇಯರ್‌ಬಡ್‌ಗಳು ಮೃದುವಾದ ಸಿಲಿಕೋನ್‌ನಿಂದ ಮಾಡಲ್ಪಟ್ಟ ವಿಭಿನ್ನ ಗಾತ್ರದ ಕಿವಿಯೋಲೆಗಳೊಂದಿಗೆ ಲಬ್ಯವಾಗಲಿವೆ. ಇನ್ನು ಈ ಸ್ಪೋರ್ಟ್‌ ಇಯರ್‌ಬಡ್‌ಗಳು ನಿಮ್ಮ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲಿದೆ. ಅಲ್ಲದೆ ಈ ವಾಯರ್‌ಲೆಸ್ ಇಯರ್‌ಬಡ್ಸ್ ಐಪಿಎಕ್ಸ್ 4-ರೇಟೆಡ್ ಆಗಿದ್ದು, 5 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ.

ಕಂಫರ್ಟ್ ಇಯರ್‌ಬಡ್ಸ್‌

ಇನ್ನು ಕ್ವೈಟ್ ಕಂಫರ್ಟ್ ಇಯರ್‌ಬಡ್ಸ್‌ $ 279 (ಸುಮಾರು 20,600ರೂ) ಬೆಲೆಯನ್ನ ಹೊಂದಿದೆ. ಜೊತೆಗೆ ಸ್ಪೋರ್ಟ್ಸ್ ಇಯರ್‌ಬಡ್‌ಗಳು $179 (ಸುಮಾರು 13,200 ರೂ) ಬೆಲೆಯನ್ನು ಹೊಂದಿವೆ. ಇನ್ನು ಈ ಎರಡು ಇಯರ್‌ಬಡ್ಸ್‌ಗಳು ‘ಟ್ರಿಪಲ್ ಬ್ಲ್ಯಾಕ್' ಮತ್ತು ‘ಸೋಪ್ ಸ್ಟೋನ್' ನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಸದ್ಯ ಈ ಇಯರ್‌ಬಡ್ಸ್‌ಗಳು ಇದೇ ಸೆಪ್ಟೆಂಬರ್‌ 29 ರಂದು ಮಾರುಕಟ್ಟೆಯಲ್ಲಿ ಖರೀದಿಗೆ ಲಬ್ಯವಾಗಲಿವೆ ಎಂದು ಬೋಸ್‌ ಸಂಸ್ಥೆ ಹೇಳಿಕೊಂಡಿದೆ.

Best Mobiles in India

English summary
Bose QuietComfort Earbuds offer 11 levels of noise cancellation that is said to give an experience like the Bose QuietComfort headphones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X