ಬಿಎಸ್‌ಎನ್‌ಎಲ್‌ ಗ್ರಾಹಕರಿಗೂ ಉಚಿತ ಲೈಫ್‌ಟೈಮ್‌ ವಾಯ್ಸ್ ಕರೆ ಲಾಂಚ್‌

By Suneel
|

ರಿಲಾಯನ್ಸ್ ಜಿಯೊ ಭಾರತೀಯ ಟೆಲಿಕಾಂ ಮಾರುಕಟ್ಟೆ ಪ್ರವೇಶಿಸಿದ ನಂತರ, ಹಲವು ಟೆಲಿಕಾಂ ಆಪರೇಟರ್‌ಗಳು ವಿಶೇಷ ಟ್ಯಾರಿಫ್ ಪ್ಲಾನ್‌ಗಳನ್ನು ಜಿಯೋಗೆ ಸ್ಪರ್ಧೆ ನೀಡಲು ಪರಿಚಯಿಸಿವೆ. ಆದರೆ ಯಾವ ಟೆಲಿಕಾಂ ಆಪರೇಟರ್ ಅತ್ಯುತ್ತಮ ಆಫರ್ ನೀಡಿದೆ ಎಂದು ತಿಳಿಯುವುದು ಮಾತ್ರ ಕಷ್ಟವಾಗಿತ್ತು. ಆದರೆ ಈಗ ಇತರೆ ಯಾವುದೇ ಟೆಲಿಕಾಂ ಆಪರೇಟರ್‌ಗಳು ನೀಡದ ವಿಶೇಷ ಟ್ಯಾರಿಫ್‌ ಆಫರ್‌ ಅನ್ನು ಬಿಎಸ್‌ಎನ್‌ಎಲ್‌ ನೀಡುತ್ತಿದೆ.

ಬಿಎಸ್‌ಎನ್‌ಎಲ್‌ ಗ್ರಾಹಕರಿಗೂ ಉಚಿತ ಲೈಫ್‌ಟೈಮ್‌  ವಾಯ್ಸ್ ಕರೆ ಲಾಂಚ್‌

ಏರ್‌ಟೆಲ್‌, ವೊಡಾಫೋನ್‌, ಐಡಿಯಾ, ರಿಲಾಯನ್ಸ್ ಕಂಮ್ಯೂನಿಕೇಷನ್ ಮತ್ತು ಇತರೆ ಟೆಲಿಕಾಂಗಳ ನಂತರ, ದೀರ್ಘ ಸಮಯ ತೆಗೆದುಕೊಂಡು ಅಂತೂ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ಅತೀ ಕಡಿಮೆ ಬೆಲೆಯ ಅತ್ಯಾಕರ್ಷಕ ಆಫರ್ ಲಾಂಚ್‌ ಮಾಡುತ್ತಿದೆ.

ಫ್ಲ್ಯಾಶ್‌ ನ್ಯೂಸ್: ಜಿಯೋ ಸಿಮ್ ಇಲ್ಲದಿದ್ದರೂ ಜಿಯೋ ಆಪ್‌ ಉಚಿತ ಸೇವೆ ಲಭ್ಯ! ಹೇಗೆ?

ಡಾಟಾ ಪ್ಯಾಕ್‌ ಆಗಲಿ ಅಥವಾ ಟಾಕ್‌ಟೈಮ್‌ ಆಫರ್ ಆಗಲಿ. ಈಗ ಬಿಎಸ್‌ಎನ್‌ಎಲ್‌ ಎಲ್ಲರಿಗಿಂತ ಮುಂದೆ. ರಿಲಾಯನ್ಸ್ ಜಿಯೋ ಮಾತ್ರವಲ್ಲದೇ, ಏರ್‌ಟೆಲ್‌, ವೊಡಾಫೋನ್, ಐಡಿಯಾ, ರಿಲಾಯನ್ಸ್ ಕಂಮ್ಯೂನಿಕೇಷನ್, ಡೊಕೊಮೊ ಮತ್ತು ಇತರೆ ಎಲ್ಲಾ ಟೆಲಿಕಾಂಗಳ ನಿದ್ರೆಗೆಡಿಸುವ ಪ್ಲಾನ್‌ ಒಂದನ್ನು ಬಿಎಸ್‌ಎನ್‌ಎಲ್‌ ನೀಡುತ್ತಿದೆ. ಆ ಪ್ಲಾನ್ ಯಾವುದು ಎಂದು ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ ಉಚಿತ ಲೈಫ್‌ಟೈಮ್ ವಾಯ್ಸ್ ಕರೆ

ಬಿಎಸ್‌ಎನ್‌ಎಲ್‌ ಉಚಿತ ಲೈಫ್‌ಟೈಮ್ ವಾಯ್ಸ್ ಕರೆ

ಬಿಎಸ್‌ಎನ್‌ಎಲ್‌ ಇತ್ತೀಚೆಗೆ ತಾನೆ, 2017 ರಿಂದ ತನ್ನ ಗ್ರಾಹಕರಿಗೆ ಉಚಿತ ಲೈಫ್‌ಟೈಮ್ ವಾಯ್ಸ್ ಕರೆ ಆಫರ್ ನೀಡುವುದಾಗಿ ಹೇಳಿದೆ.

ಬಿಎಸ್ಎನ್‌ಎಲ್‌ನ ಈ ಪ್ಲಾನ್ ಇತರೆ ಟೆಲಿಕಾಂ ಆಪರೇಟರ್‌ಗಳಿಗೆ ನಿದ್ರೆಕೆಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಟೆಲಿಕಾಂ, ಬಹುಶಃ ರಿಲಾಯನ್ಸ್ ಜಿಯೋಗಿಂತ ಅತೀ ಕಡಿಮೆ ಬೆಲೆಯ ವಾಯ್ಸ್ ಕರೆ ಆಫರ್ ನೀಡಲಿದೆ.

ಬಿಎಸ್‌ಎನ್‌ಎಲ್‌ ಫ್ರೀಡಂ ಪ್ಲಾನ್

ಬಿಎಸ್‌ಎನ್‌ಎಲ್‌ ಫ್ರೀಡಂ ಪ್ಲಾನ್

ಬಿಎಸ್‌ಎನ್‌ಎಲ್‌ ಇತ್ತೀಚೆಗಷ್ಟೆ ತಮ್ಮ ಬಳಕೆದಾರರಿಗೆ 'ಫ್ರೀಡಂ ಪ್ಲಾನ್' ಅನ್ನು ಪರಿಚಯಿಸಿದ್ದು, ಈ ಪ್ಲಾನ್‌ನಿಂದ ಕೇವಲ ರೂ.136 ಕ್ಕೆ ರೂ.25 ಪೈಸೆ/ನಿಮಿಷ ಕರೆ ದರದಲ್ಲಿ 2 ವರ್ಷ ಕರೆ ಮಾಡಬಹುದು.

ಈ ಪ್ಲಾನ್‌ನೊಂದಿಗೆ, 1GB ಉಚಿತ ಡಾಟಾವನ್ನು ಮೊದಲ ತಿಂಗಳಲ್ಲಿ ಬಿಎಸ್ಎನ್‌ಎಲ್‌ ನೀಡುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಬಿಎಸ್‌ಎನ್‌ಎಲ್‌ ಭಾನುವಾರದ ಕರೆಗಳು

ಬಿಎಸ್‌ಎನ್‌ಎಲ್‌ ಭಾನುವಾರದ ಕರೆಗಳು

ಬಿಎಸ್‌ಎನ್‌ಎಲ್‌ ಇತ್ತೀಚೆಗಷ್ಟೆ ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್‌ ಅನ್ನು ಭಾನುವಾರ ದಿನಗಳಲ್ಲಿ ತನ್ನ ಗ್ರಾಹಕಗಾಗಿ ಆರಂಭಿಸಿದೆ.

ಬಿಎಸ್‌ಎನ್‌ಎಲ್‌ ಪ್ರೀಪೇಡ್ ಚಂದಾದಾರರು ಉಚಿತ ಅನ್‌ಲಿಮಿಟೆಡ್ ವಾಯ್ಸ್ ಕರೆಗಳನ್ನು ಪ್ರತಿ ಭಾನುವಾರ 9pm-7am ವರೆಗೆ ನಿರ್ವಹಿಸಬಹುದಾಗಿತ್ತು.

ಬಿಎಸ್‌ಎನ್‌ಎಲ್‌ ಡಿಜಿಟಲ್ ವೆರಿಫಿಕೇಶನ್‌

ಬಿಎಸ್‌ಎನ್‌ಎಲ್‌ ಡಿಜಿಟಲ್ ವೆರಿಫಿಕೇಶನ್‌

ಹೌದು, ರಿಲಾಯನ್ಸ್ ಜಿಯೋ ರೀತಿಯಲ್ಲಿಯೇ ಬಿಎಸ್‌ಎನ್‌ಎಲ್ ಸಹ ಡಿಜಿಟಲ್ ವೆರಿಫಿಕೇಶನ್ ಆರಂಭಿಸಿದೆ. ಬಿಎಸ್‌ಎನ್‌ಎಲ್‌ ಬಳಕೆದಾರರು ಹಾರ್ಡ್‌ ಕಾಪಿ ಹಿಡಿದು ನಿಲ್ಲುವ ಅಗತ್ಯವಿಲ್ಲ.

ಬಿಎಸ್ಎನ್‌ಎಲ್‌ ಶೀಘ್ರದಲ್ಲೇ ಬಯೋಮೆಟ್ರಿಕ್ ಡಾಟಾ ಮತ್ತು ಆಧಾರ್ ಕಾರ್ಡ್ ನಂಬರ್ ಪಡೆದು ಹೊಸ ಗ್ರಾಹಕರಿಗೆ ಕನೆಕ್ಷನ್‌ ನೀಡಲಿದೆ.

ಬಿಎಸ್‌ಎನ್‌ಎಲ್‌ ವೈಫೈ ಹಾಟ್‌ಸ್ಪಾಟ್ ವಲಯಗಳು ಶೀಘ್ರದಲ್ಲೇ

ಬಿಎಸ್‌ಎನ್‌ಎಲ್‌ ವೈಫೈ ಹಾಟ್‌ಸ್ಪಾಟ್ ವಲಯಗಳು ಶೀಘ್ರದಲ್ಲೇ

ಬಿಎಸ್ಎನ್‌ಎಲ್‌ ಶೀಘ್ರದಲ್ಲೇ ವೈಫೈ ಹಾಟ್‌ಸ್ಪಾಟ್‌ಗಳನ್ನು ಮೈಸೂರು ಅರಮನೆ, ಮೈಸೂರು ಜೂ, ಮತ್ತು ಇತರೆ ಹಲವು ಪ್ರದೇಶಗಳಲ್ಲಿ ಇನ್‌ಸ್ಟಾಲ್‌ ಮಾಡುವ ಬಗ್ಗೆ ಹೇಳಿದೆ. ಈ ವೈಫೈ ಹಾಟ್‌ಸ್ಪಾಟ್‌ ವಲಯಗಳಲ್ಲಿ ಬಳಕೆದಾರರು ಸುಲಭವಾಗಿ ವೇಗದ ಇಂಟರ್ನೆಟ್ ಆಕ್ಸೆಸ್ ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
BSNL to Introduce Free Lifetime Voice Calls in 2017, Aims to be the Best Network. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X