ತನ್ನ ನಾಯಿಗಾಗಿ ಬರೋಬ್ಬರಿ 8 ಐಫೋನ್ 7 ಕೊಂಡ ಭೂಪ

By Shwetha
|

ಇಂದಿನ ಕ್ರೇಜಿ ಜಗತ್ತಿನಲ್ಲಿ ಮಾನವ ಮಾಡುವ ಕೆಲಸವೆಲ್ಲಾ ವಿಚಿತ್ರವಾಗಿಯೇ ಇರುತ್ತದೆ. ಇಂದಿನ ಲೇಖನದಲ್ಲಿ ಕೂಡ ನಾವು ಈ ಬಗೆಯ ಒಂದು ವಿಚಿತ್ರ ಸುದ್ದಿಯನ್ನು ನಿಮ್ಮೆದುರು ಬಿತ್ತರಿಸ ಹೊರಟಿರುವೆವು. ಐಫೋನ್ ಎಂಬುದು ಎಷ್ಟು ದುಬಾರಿಯಾಗಿರುವ ಡಿವೈಸ್ ಎಂಬುದು ನಮಗೆಲ್ಲಾ ಗೊತ್ತೇ ಇದೆ. ಐಷಾರಾಮದ ಸಂಕೇತವಾಗಿರುವ ಐಫೋನ್ ಅನ್ನು ಕೊಂಡುಕೊಳ್ಳಲು ಹೆಚ್ಚಿನ ಫೋನ್ ಪ್ರಿಯರು ತಮ್ಮ ಅಂಗಗಳನ್ನೇ ಮಾರಿ ಖರೀದಿಸಿಕೊಂಡಿದ್ದಾರೆ.

ಓದಿರಿ: ಬಿಎಸ್‌ಎನ್‌ಎಲ್ ರೂ 20 ರ ಸಿಮ್ ಕಾರ್ಡ್ ವಿಶೇಷತೆ ಗೊತ್ತೇ?

ಚೀನಾದ ಬಿಲಿಯನೇರ್‌ನ ಪುತ್ರನೊಬ್ಬ ಬರೋಬ್ಬರಿ ಏಳು ಐಫೋನ್ 7 ಸ್ಮಾರ್ಟ್‌ಫೋನ್‌ಗಳನ್ನು ತನ್ನ ಪ್ರೀತಿಯ ನಾಯಿಗಾಗಿ ಖರೀದಿಸಿದ್ದಾನೆ. ಈ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಓದಿರಿ:ಐಫೋನ್ ಟಿಪ್ಸ್: ನೀವೆಷ್ಟು ಜಾಣರು ಎಂಬುದನ್ನು ತಿಳಿದುಕೊಳ್ಳಿ

ವೈಬೊ ಖಾತೆಯಲ್ಲಿ ಐಫೋನ್ 7 ಅನ್ನು ಖರೀದಿ

ವೈಬೊ ಖಾತೆಯಲ್ಲಿ ಐಫೋನ್ 7 ಅನ್ನು ಖರೀದಿ

ವಾಂಗ್ ಜಿಯಾಲಿನ್‌ನ ಪುತ್ರನಾದ ವಾಂಗ್ ಸಿಕಾಂಗ್ ತನ್ನ ನಾಯಿಯ ವೈಬೊ ಖಾತೆಯಲ್ಲಿ ಐಫೋನ್ 7 ಅನ್ನು ಖರೀದಿಸಿದ್ದಾನೆ. ಈತನ ನಾಯಿ ಕೂಡ ವೈಬೊ ಖಾತೆಯನ್ನು ಹೊಂದಿದೆ.

ವಿನಿಯೋಗಿಸಿದ ಹಣ ರೂ 5,13,000

ವಿನಿಯೋಗಿಸಿದ ಹಣ ರೂ 5,13,000

ಈ ಐಫೋನ್‌ಗಳ ಬೆಲೆ ಅಂದಾಜು ರೂ 64,210 ರಿಂದ ರೂ 80,000 ವಾಗಿದೆ. ಅಂದರೆ ಈತ ಐಫೋನ್‌ಗಾಗಿ ವಿನಿಯೋಗಿಸಿದ ಹಣ ರೂ 5,13,000 ವಾಗಿದೆ. ಈ ವ್ಯವಹಾರಸ್ಥನ ಬಳಿ ಇರುವ ಸ್ವತ್ತು $30 ಬಿಲಿಯನ್ ಈ ಮೊತ್ತ ಆತನಿಗೆ ದೊಡ್ಡ ವಿಷಯವೇ ಅಲ್ಲ.

ಎಂಟು ಐಫೋನ್‌

ಎಂಟು ಐಫೋನ್‌

ಚೀನಾದಲ್ಲಿ ಆಪಲ್ ಅಭಿಮಾನಿಗಳು ಸ್ಟೋರ್ ಮುಂಭಾಗದಲ್ಲಿ ಸಾಲುಗಟ್ಟಿ ಐಫೋನ್ ಖರೀದಿಗೆ ಹವಣಿಸುತ್ತಿರುವ ಸಂದರ್ಭದಲ್ಲಿ ಸಿಕಾಂಗ್ ಹೆಚ್ಚು ಸುಲಭವಾಗಿ ಆಪಲ್ ಸ್ಟೋರ್‌ನಿಂದ ಎಂಟು ಐಫೋನ್‌ಗಳನ್ನು ತನ್ನ ಪ್ರೀತಿಯ ನಾಯಿಗಾಗಿ ಖರೀದಿಸಿದ್ದಾನೆ.

ಉಡುಗೊರೆ

ಉಡುಗೊರೆ

ತನ್ನ ಹೊಸ ಐಫೋನ್ ಸಂಗ್ರಹಣೆಯೊಂದಿಗೆ ನಾಯಿ ಹೆಚ್ಚು ಸ್ಟೈಲಿಶ್ ಆಗಿ ಫೋಸ್ ಕೂಡ ಕೊಟ್ಟಿದೆ. ಈತ ತನ್ನ ನಾಯಿಗೆ ಈ ಬಗೆಯ ಉಡುಗೊರೆಗಳನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ.

ಎರಡು ಆಪಲ್ ವಾಚ್

ಎರಡು ಆಪಲ್ ವಾಚ್

ಮೇ 2015 ರಂದು ಸಿಕಾಂಗ್ ಎರಡು ಆಪಲ್ ವಾಚ್ ಆವೃತ್ತಿಗಳನ್ನು ಖರೀದಿಸಿದ್ದು ಅದನ್ನು ತನ್ನ ನಾಯಿಗೆ ಉಡುಗೊರೆಯಾಗಿ ನೀಡಿದ್ದಾನೆ. ಐಫೋನ್ 7 ಗೆ ಹೋಲಿಸಿದಾಗ ವಾಚ್ ಬೆಲೆ ಕಡಿಮೆಯಾಗಿದ್ದರೂ, ಪ್ರತಿಯೊಂದರ ಬೆಲೆ ರೂ 6,40,000 ದಿಂದ ರೂ 11,00,000 ವಾಗಿದೆ.

Best Mobiles in India

English summary
Wang Sicong is the son of Wang Jialin, a Chinese businessman whose net worth is over $30 billion. The son bought his dog Coco eight iPhone 7s, according to a post on the dog's account on Weibo.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X