ಬಿಎಸ್‌ಎನ್‌ಎಲ್ ರೂ 20 ರ ಸಿಮ್ ಕಾರ್ಡ್ ವಿಶೇಷತೆ ಗೊತ್ತೇ?

By Shwetha
|

ಹೆಚ್ಚು ಹಳೆಯ ಟೆಲಿಕಾಮ್ ಕಂಪೆನಿ ಎಂಬುದಾಗಿಯೇ ಜನಮನದಲ್ಲಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿರುವ ಬಿಎಸ್‌ಎನ್‌ಎಲ್ 2000 ದಲ್ಲಿ ಆರಂಭವಾಗಿ ದೇಶಾದ್ಯಂತ ತನ್ನ ಆಫರ್‌ಗಳ ಮೂಲಕವೇ ಸುದ್ದಿಯನ್ನು ಮಾಡಿತ್ತು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಿಎಸ್‌ಎನ್‌ಎಲ್ ಕೂಡ ಏರ್‌ಟೆಲ್, ವೊಡಾಫೋನ್, ಐಡಿಯಾದ ಆಫರ್‌ಗಳ ನಡುವೆ ಕುಸಿದು ಬಳಕೆದಾರರ ಮೇಲೆ ತನ್ನ ಹಿಡಿತವನ್ನೇ ಕಳೆದುಕೊಂಡಿದೆ.

ಓದಿರಿ: 4ಜಿ ಸ್ಮಾರ್ಟ್‌ಫೋನ್‌ನಲ್ಲಿರುವ ದೋಷಕ್ಕೆ ಅದ್ಭುತ ಪರಿಹಾರಗಳು: ಟ್ರೈ ಮಾಡಿ

ಅದಾಗ್ಯೂ, ವಿಚಲಿತನಾಗದೇ ಬಿಎಸ್‌ಎನ್‌ಎನ್ ಮತ್ತೊಮ್ಮೆ ಮೈಕೊಡವಿ ಎದ್ದಿದೆ. ಕಡಿಮೆ ದರದಲ್ಲಿ ಅತ್ಯುತ್ತಮ ಆಫರ್‌ಗಳನ್ನು ಒದಗಿಸುವ ಮೂಲಕ ಬಳಕೆದಾರರಿಗೆ ಮತ್ತೊಮ್ಮೆ ಭರವಸೆಯ ಬೆಳಕನ್ನು ಹೊಮ್ಮಿಸಿದೆ. ಬನ್ನಿ ಇಂದಿನ ಲೇಖನದಲ್ಲಿ ಬಿಎಸ್‌ಎನ್‌ಎಲ್‌ನ ಸಿಮ್ ಅನ್ನು ನೀವು ಖರೀದಿಸುತ್ತೀರಿ ಎಂದಾದಲ್ಲಿ ನೀವು ಕೆಲವೊಂದು ಅಂಶಗಳತ್ತ ಗಮನ ಹರಿಸಬೇಕಾಗಿದೆ ಅದೇನು ಎಂಬುದನ್ನು ಕಂಡುಕೊಳ್ಳೋಣ.

ಓದಿರಿ: ವಾಟ್ಸಾಪ್‌ನಲ್ಲಿ ಸಂಪರ್ಕ ಬ್ಲಾಕ್ ಮಾಡಿದ ಮೇಲೆ ಚಿಂತೆಯೇ ಮಾಡದಿರಿ!

ಸಿಮ್ ಕಾರ್ಡ್ ದರ ರೂ 20 ಮಾತ್ರ

ಸಿಮ್ ಕಾರ್ಡ್ ದರ ರೂ 20 ಮಾತ್ರ

ನೀವು ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಅನ್ನು ರೂ 20 ಕ್ಕೆ ಖರೀದಿಸಬಹುದಾಗಿದ್ದು, 24 ಗಂಟೆಗಳಲ್ಲಿ ಅದನ್ನು ಆಕ್ಟಿವೇಟ್ ಕೂಡ ಮಾಡಿಕೊಳ್ಳಬಹುದಾಗಿದೆ.

ಆನ್‌ಲೈನ್‌ನಲ್ಲಿ ಸಂಖ್ಯೆಯನ್ನು ಆರಿಸಿ

ಆನ್‌ಲೈನ್‌ನಲ್ಲಿ ಸಂಖ್ಯೆಯನ್ನು ಆರಿಸಿ

ನಿಮ್ಮ ಮುಂದಿನ ಭವಿಷ್ಯ ಬಳಕೆಗಳಿಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್‌ಗಳಲ್ಲಿ ಆರಿಸಿ ಅದನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ನಿಮಗೆ ಸಿಮ್ ಕಾರ್ಡ್ ಬೇಕಾದಲ್ಲಿ ಹತ್ತಿರದ ಬಿಎಸ್‌ಎನ್‌ಎಲ್ ಸ್ಟೋರ್‌ಗೆ ಹೋಗಿ ಮತ್ತು ದಾಖಲೆಗಳನ್ನು ಸಲ್ಲಿಸಿ.

ಆಯ್ಕೆಮಾಡಿದ ವಲಯಗಳಲ್ಲಿ ಮಾತ್ರ 4ಜಿ ಸೇವೆ

ಆಯ್ಕೆಮಾಡಿದ ವಲಯಗಳಲ್ಲಿ ಮಾತ್ರ 4ಜಿ ಸೇವೆ

ದೇಶಾದ್ಯಂತ ಬಿಎಸ್‌ಎನ್‌ಎನ್ 4ಜಿ ಪರವಾನಗಿಯನ್ನು ಹೊಂದಿಲ್ಲ. ಆ ಸಮಯದಲ್ಲಿ ಸಿಗ್ನಲ್ ಏರಿಳಿತವುಂಟಾದಾಗ ನೆಟ್‌ವರ್ಕ್ ಕುಸಿತ ಮತ್ತು ಕರೆ ಕುಸಿತ ಸಮಸ್ಯೆಗಳನ್ನು ನೀವು ಎದುರಿಸಬಹುದಾಗಿದೆ.

ರಿಲಾಯನ್ಸ್ ಜಿಯೋದೊಂದಿಗೆ 4ಜಿ ಬೆಂಬಲ

ರಿಲಾಯನ್ಸ್ ಜಿಯೋದೊಂದಿಗೆ 4ಜಿ ಬೆಂಬಲ

ಇತ್ತೀಚೆಗೆ ತಾನೇ, ರೋಮಿಂಗ್ ಪ್ರದೇಶಗಳಲ್ಲಿ ಉತ್ತಮ ನೆಟ್‌ವರ್ಕ್ ರಿಸೆಪ್ಶನ್‌ಗಾಗಿ ಜಿಯೋ 4ಜಿ ಸೇವೆಗಳನ್ನು ಬಳಸುವುದಾಗಿ ಕಂಪೆನಿ ಘೋಷಿಸಿದ್ದು, ಜಿಯೋ ಬಿಎಸ್ಎನ್‌ಎಲ್‌ನ 2ಜಿ ಡೇಟಾ ಸೇವೆಗಳನ್ನು ವಾಯ್ಸ್ ಕರೆಗಾಗಿ ಇಂಟರ್ನೆಟ್ ಇಲ್ಲದ ಸಂದರ್ಭದಲ್ಲಿ ಬಳಸಲೂಬಹುದಾಗಿದೆ.

ಸಿಮ್ ಆಕ್ಟಿವೇಶನ್

ಸಿಮ್ ಆಕ್ಟಿವೇಶನ್

ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಅನ್ನು ಆಕ್ಟಿವೇಟ್ ಮಾಡುವುದು ಕಷ್ಟದ ಕೆಲಸವೇನಲ್ಲ. ನಿಮ್ಮ ಕೈಗೆ ಸಿಮ್ ಬಂದೊಡನೆ 24 ಗಂಟೆಗಳಲ್ಲಿ ಸಿಮ್ ಆಕ್ಟಿವೇಟ್ ಆಗುತ್ತದೆ. ಟಿಆರ್ಎಐ ರೆಗ್ಯುಲೇಶನ್ ಪ್ರಕಾರವಾಗಿ ಟೆಲಿ ವೆರಿಫಿಕೇಶನ್ ಕೂಡ ನಡೆಯುತ್ತದೆ.

Best Mobiles in India

English summary
Here are the five things you should know about the telecom network before becoming a member.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X