ಐಫೋನ್ ಟಿಪ್ಸ್: ನೀವೆಷ್ಟು ಜಾಣರು ಎಂಬುದನ್ನು ತಿಳಿದುಕೊಳ್ಳಿ

By Shwetha
|

ಐಫೋನ್ ದುಬಾರಿಯಾಗಿದ್ದರೂ ಅದನ್ನು ಖರೀದಿಸಬೇಕೆಂಬ ಹಂಬಲ ಎಲ್ಲಾ ಫೋನ್ ಪ್ರೇಮಿಯ ಮನದಲ್ಲಿರುತ್ತದೆ. ತಾವು ಐಫೋನ್ ಬಳಸುವವರು ಎಂಬುದನ್ನು ಹೇಳಿಕೊಳ್ಳಲು ಏನೋ ಉತ್ಸಾಹ ಹೆಮ್ಮೆ ಅಂತೆಯೇ ಐಫೋನ್ ಹೊಂದಿರುವವರಿಗೆ ಸಿಗುವ ಮಾನ್ಯತೆಯೇ ಬೇರೆ. ಇದಕ್ಕಾಗಿಯೇ ತಾನೇ ಐಫೋನ್ ಖರೀದಿಗಾಗಿ ಮನೆ ಕನ್ನಹಾಕಿದವರು ಇದ್ದಾರೆ, ಕಿಡ್ನಿ ಮಾರಿದವರೂ ಇದ್ದಾರೆ, ಹೆಚ್ಚುವರಿ ದುಡಿದು ಅದಕ್ಕಾಗಿ ಹಣ ಒಟ್ಟುಮಾಡಿ ಕೊಂಡವರೂ ಇದ್ದಾರೆ. ಐಫೋನ್‌ಗಾಗಿ ಕೊಲೆ ಮಾಡಿದವರೂ ಇದ್ದಾರೆ ಎಂದಾದಲ್ಲಿ ಐಫೋನ್ ಮಾಯೆ ಎಂತಹ ಮಟ್ಟದ್ದು ಎಂಬುದನ್ನು ನೀವು ಅರಿತುಕೊಳ್ಳಲೇಬೇಕು.

ಓದಿರಿ: ಬೆಂಗಳೂರಿನಲ್ಲಿ ಕೈತುಂಬಾ ಸಂಬಳಕ್ಕೆ ಇನ್ನು ಕೊರತೆಯಿಲ್ಲ

ಹೊಸ ಹೊಸ ಐಫೋನ್‌ಗಳು ಲಾಂಚ್ ಆಗುತ್ತಿರುವಾಗಲೇ ಹಳೆಯದಕ್ಕೆ ಬೆಲೆ ಇಳಿಕೆಯಾಗುತ್ತದೆ ಮತ್ತು ಈ ಸಮಯದಲ್ಲಿ ಐಫೋನ್ ಅನ್ನು ಕೊಳ್ಳುವವರೂ ಇದ್ದಾರೆ. ಇದರ ಫೀಚರ್‌ಗಳು ಇತರ ಓಎಸ್‌ಗಳಿಗಿಂತಲೂ ಪ್ರತ್ಯೇಕವಾಗಿದ್ದರೂ ತಿಳಿದುಕೊಂಡರೆ ಸಲೀಸಾಗಿ ನಾವು ಐಫೋನ್‌ನಲ್ಲಿ ಮಾಸ್ಟರ್ ಆಗಬಹುದು. ಇಂದಿನ ಲೇಖನದಲ್ಲಿ ಇಂತಹುದೇ ಐಫೋನ್ ಟ್ರಿಕ್ಸ್‌ಗಳನ್ನು ನಿಮಗೆ ತಿಳಿಸಿಕೊಡಲಿದ್ದು ಈ ಸಲಹೆಗಳಿಂದ ಐಫೋನ್ ಬಳಕೆಯ ವಿಧಾನವೇ ಬೇರೆಯಾಗುವುದು ಖಂಡಿತ.

ಜಾಹೀರಾತು ನಿರ್ಬಂಧನೆ

ಜಾಹೀರಾತು ನಿರ್ಬಂಧನೆ

ಏರ್‌ಪ್ಲೇನ್ ಮೋಡ್‌ನಲ್ಲಿ ನೀವು ಗೇಮ್ಸ್ ಆಡಿದಲ್ಲಿ ಜಾಹೀರಾತಿಗೆ ತಡೆಯನ್ನು ಒಡ್ಡಬಹುದಾಗಿದೆ. ಆದರೆ ಕರೆ ಬರಲು ಸಾಧ್ಯವಿಲ್ಲ.

ಐಫೋನ್ ಚಾರ್ಜ್

ಐಫೋನ್ ಚಾರ್ಜ್

ಗ್ಯಾಲನ್‌ನಷ್ಟು ಗ್ಯಾಸ್ ಬಳಸಿಕೊಂಡು ಮುಂದಿನ 20 ವರ್ಷಗಳಿಗೆ ಐಫೋನ್ ಚಾರ್ಜ್ ಮಾಡಬಹುದಾಗಿದೆ.

ಕಂಪ್ಯೂಟಿಂಗ್ ಮೆಮೊರಿ

ಕಂಪ್ಯೂಟಿಂಗ್ ಮೆಮೊರಿ

ಐಫೋನ್ ಕಂಪ್ಯೂಟಿಂಗ್ ಮೆಮೊರಿ ಹೇಗಿದೆಯೆಂದರೆ ನಾಸಾದ ಸ್ಪೇಸ್ ಶಿಪ್ ಮಾನವನನ್ನು ಚಂದ್ರನನ್ನು ಕೊಂಡೊಯ್ಯುವಲ್ಲಿಗಿನ ಸಾಮರ್ಥ್ಯದಷ್ಟಿದೆ.

ಬಲಿಷ್ಟ ಡಿವೈಸ್

ಬಲಿಷ್ಟ ಡಿವೈಸ್

13,500 ಫೀಟ್‌ನಲ್ಲಿ ವ್ಯಕ್ತಿಯೊಬ್ಬ ಸ್ಕೈ ಡೈವಿಂಗ್ ಮಾಡುತ್ತಿದ್ದಾಗ ಆತನ ಐಫೋನ್ ಕೆಳಗೆ ಬಿದ್ದಿತು, ಆದರೆ ಇಷ್ಟು ಎತ್ತರದಿಂದ ಐಫೋನ್ ಕೆಳಕ್ಕೆ ಬಿದ್ದಿದ್ದರೂ ಅದರ ಸ್ಕ್ರೀನ್ ಒಡೆದಿದು ಬಿಟ್ಟರೆ ಮೊದಲಿನಂತೆಯೇ ಅದು ಕಾರ್ಯನಿರ್ವಹಿಸುತ್ತಿತ್ತಂತೆ.

ಆಪಲ್ ವರ್ಸಸ್ ಆಪಲ್ ಹಣ್ಣು

ಆಪಲ್ ವರ್ಸಸ್ ಆಪಲ್ ಹಣ್ಣು

ಐಫೋನ್ 5ಎಸ್‌ನ ಬೆಲೆಯಲ್ಲಿ ನೀವು ಅಸಲಿ 2000 ಸೇಬನ್ನು ಖರೀದಿಸಬಹುದಂತೆ

ಐಫೋನ್ ಬೆಳೆದು ಬಂದ ದಾರಿ

ಐಫೋನ್ ಬೆಳೆದು ಬಂದ ದಾರಿ

ಐಫೋನ್ ಬೆಳೆದು ಬಂದ ದಾರಿ

ಐಫೋನ್ ಪ್ರೇಮ

ಐಫೋನ್ ಪ್ರೇಮ

ವಿಶ್ವದೆಲ್ಲೆಡೆ ಐಫೋನ್ ಪ್ರೇಮ ಎಷ್ಟಿದೆಯೆಂದರೆ ಚೀನಾದಲ್ಲೊಬ್ಬ ಐಫೋನ್ 6 ಬಿಡುಗಡೆಯಾಗುವುದಕ್ಕೂ ಮುನ್ನವೇ 7 ತಿಂಗಳುಗಳ ಕಾಲ ಕಾಯಲು ಆರಂಭಿಸಿದ್ದನಂತೆ

ಲೈಂಗಿಕ ಸಂಗಾತಿ

ಲೈಂಗಿಕ ಸಂಗಾತಿ

2010 ರಲ್ಲಿ ಒಕ್ಯುಪೈಡ್ ನಡೆಸಿದ ಅಧ್ಯಯನದಿಂದ ತಿಳಿದು ಬಂದ ಅಂಶವೆಂದರೆ ಆಂಡ್ರಾಯ್ಡ್ ಮತ್ತು ಬ್ಲ್ಯಾಕ್‌ಬೆರ್ರಿ ಬಳಕೆದಾರರಿಗಿಂತಲೂ ಎರಡು ಪಟ್ಟು ಹೆಚ್ಚು ಐಫೋನ್ ಬಳಕೆದಾರರು ಲೈಂಗಿಕ ಸಂಗಾತಿಗಳನ್ನು ಹೊಂದಿದ್ದಾರೆ ಎಂದಾಗಿದೆ.

ಉತ್ತಮ ಮಾರಾಟ ವಸ್ತು

ಉತ್ತಮ ಮಾರಾಟ ವಸ್ತು

ಐದು ವರ್ಷಗಳ ತನ್ನ ಅಸ್ತಿತ್ವದ ನಂತರ, ಐಫೋನ್ ಉತ್ತಮವಾಗಿ ಮಾರಾಟ ಕಂಡು ವಸ್ತುವಿನ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನ ರುಬಿಕ್ಸ್ ಕ್ಯೂಬ್‌ನದ್ದಾಗಿದೆ.

ಕಪ್ಪಿಗಿಂತ ಬಿಳಿಗೆ ಆದ್ಯತೆ

ಕಪ್ಪಿಗಿಂತ ಬಿಳಿಗೆ ಆದ್ಯತೆ

ಕಪ್ಪು ಐಫೋನ್ ವೇಗವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿದಿದ್ದರೂ ಹೆಚ್ಚಿನವರು ಬಿಳಿ ಐಫೋನ್ ಅನ್ನೇ ಖರೀದಿಸುತ್ತಾರೆ.

ಹಳದಿ ಕವರ್

ಹಳದಿ ಕವರ್

ಐಫೋನ್ ಕೇಸ್‌ನಲ್ಲಿರುವ ಹಳದಿ ಜಾಕೆಟ್ ನಿಮ್ಮ ಫೋನ್‌ನಲ್ಲಿನ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ, ಬಟನ್ ಬಳಸಿಕೊಂಡು ಟೇಸರ್‌ನಂತೆ ಉಪಯೋಗಿಸಿಕೊಳ್ಳಬಹುದಾಗಿದೆ.

ಐಫೋನ್ ಪ್ರಸಿದ್ಧಿ

ಐಫೋನ್ ಪ್ರಸಿದ್ಧಿ

ಸ್ಮಾರ್ಟ್‌ಫೋನ್ ಮಾರುಕಟ್ಟೆ ಪೂರ್ಣವಾಗಿ ಆರ್ದ್ರವಾಗಿ ಹೋದರೂ, 68% ರಷ್ಟು ಅಮೇರಿಕಾದವರು ಐಫೋನ್ ತಮ್ಮದಾಗಿಸಿಕೊಳ್ಳುವ ಮೂಲಕ ಕೊನೆಗೊಳಿಸಲಿದ್ದಾರೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ.

ಐಫೋನ್ ಪೂರ್ವ ಹೆಸರು

ಐಫೋನ್ ಪೂರ್ವ ಹೆಸರು "ಪರ್ಪಲ್"

ಮೂಲತಃ ಐಫೋನ್ ಅನ್ನು "ಪರ್ಪಲ್" ಎಂದು ಕರೆಯಲಾಗಿತ್ತಂತೆ.

ನಾಯಿ ಇದ್ದವರಲ್ಲಿ ಐಫೋನ್ ಹೆಚ್ಚು

ನಾಯಿ ಇದ್ದವರಲ್ಲಿ ಐಫೋನ್ ಹೆಚ್ಚು

ಇತರ ಸಾಕು ಪ್ರಾಣಿಗಳಿಗಿಂತಲೂ ನಾಯಿಯನ್ನು ಸಾಕುಪ್ರಾಣಿಯಂತೆ ಹೊಂದಿರುವ 23% ಕ್ಕಿಂತಲೂ ಹೆಚ್ಚಿನ ಜನರು ಐಫೋನ್ ಬಳಕೆದಾರರಾಗಿದ್ದಾರೆ.

ಮೈಕ್ರೋಸಾಫ್ಟ್‌ಗಿಂತಲೂ ಮುಂದೆ

ಮೈಕ್ರೋಸಾಫ್ಟ್‌ಗಿಂತಲೂ ಮುಂದೆ

ಆಪಲ್‌ನ ಐಫೋನ್ ಮೈಕ್ರೋಸಾಫ್ಟ್‌ನ ಎಲ್ಲದಕ್ಕಿಂತಲೂ ಹೆಚ್ಚು ಮೌಲ್ಯಯುತವಾಗಿದೆ.

ಐಫೋನ್ ರಚನೆ

ಐಫೋನ್ ರಚನೆ

ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಅನ್ನು ಆಪಲ್ ಎಷ್ಟು ಗಡುಸಾಗಿ ನಿರ್ಮಿಸಿದೆ ಎಂದರೆ ಇದನ್ನು ನಿಮಗೆ ಬಗ್ಗಿಸಲು ಸಾಧ್ಯವಾದರೂ, ಅಷ್ಟು ಸುಲಭವಾಗಿ ಇದರ ಸ್ಕ್ರೀನ್ ಒಡೆಯುವುದಿಲ್ಲವಂತೆ.

ಐಫೋನ್ ಕಂಡ ಮಾರಾಟ

ಐಫೋನ್ ಕಂಡ ಮಾರಾಟ

10 ಮಿಲಿಯನ್ ಐಫೋನ್‌ಗಳನ್ನು ಮಾರಲು ಆಪಲ್‌ಗೆ ವರ್ಷವೇ ತಗಲುತ್ತದಂತೆ. ಆದರೆ ಐಫೋನ್ 6 ನೊಂದಿಗೆ ಕಂಪೆನಿ ಈ ಕೆಲಸವನ್ನು ವಾರಾಂತ್ಯದಲ್ಲಿ ಮಾಡಿದೆ.

ಮರುಮಾರಾಟಗೊಂಡರೂ ಕುಗ್ಗದ ಬೆಲೆ

ಮರುಮಾರಾಟಗೊಂಡರೂ ಕುಗ್ಗದ ಬೆಲೆ

ಇಬೇನಲ್ಲಿ ಐಫೋನ್ 6 ಪ್ಲಸ್ ಅನ್ನು ಮಾರಾಟ ಮಾಡಿದರೂ ಐಫೋನ್ ಪ್ರಿ ಆರ್ಡರ್ ಅನ್ನು ಹೆಚ್ಚಿನವರು ಹೆಚ್ಚೆಂದರೆ $6,000 ಗೆ ಪಡೆದುಕೊಂಡಿದ್ದಾರಂತೆ.

ಹಲವು ವರ್ಷಗಳ ಬಾಳಿಕೆ

ಹಲವು ವರ್ಷಗಳ ಬಾಳಿಕೆ

ಕೆಲವು ವರ್ಷಗಳವರೆಗೆ ಮಾತ್ರ ಕಾರ್ಯನಿರ್ವಹಿಸುವಂತೆ ಐಫೋನ್ ಅನ್ನು ಕಂಪೆನಿ ಸಿದ್ಧಪಡಿಸಿದೆ, ನಂತರ ಅದು ನಿಧಾನವಾಗುತ್ತದೆ ಮತ್ತು ನಿಶ್ಯಕ್ತಗೊಳ್ಳುತ್ತದೆ.

ಸ್ಯಾಮ್‌ಸಂಗ್ ಉತ್ಪನ್ನ ಬಳಕೆ

ಸ್ಯಾಮ್‌ಸಂಗ್ ಉತ್ಪನ್ನ ಬಳಕೆ

ಆಪಲ್ ತನ್ನ ಹಳೆಯ ಐಪೋಡ್ ಮತ್ತು ಐಫೋನ್ ಮಾಡೆಲ್‌ಗಳಿಗೆ ಸ್ಯಾಮ್‌ಸಂಗ್‌ನ ಪ್ರೊಸೆಸರ್‌ಗಳನ್ನು ಬಳಸಿತ್ತಂತೆ.

Best Mobiles in India

English summary
In this article we are telling 20 Facts About iPhone Every Geek Must Know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X