15 ಸಾವಿರ ಮಂದಿ ಡಿಜಿಟಲ್ ಪೇಮೆಂಟ್ ಬಹುಮಾನ ವಿಜೇತರು: ನಿಮ್ಮ ಹೆಸರು ಇದ್ಯಾ ಒಂದು ಸರಿ ನೋಡಿ

Written By:

ನೋಟ್ ಬ್ಯಾನ್ ಅದ ನಂತರದಲ್ಲಿ ನಗದು ರಹಿತ ವಹಿವಾಟಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರಕಾರವು ಡಿಜಿಟಲ್ ಮಾಧ್ಯಮದ ಮೂಲಕ ಹಣ ಪಾವತಿ ಮಾಡಿದವರಿಗೆ ಉಚಿತ ಕೊಡುಗೆಗಳು, ರಿಯಾಯಿತಿ ಸೇರಿದಂತೆ ಬಹುಮಾನ ನೀಡುವ ವಾಗ್ದಾನವನ್ನು ಮಾಡಿತ್ತು. ಈ ಹಿನ್ನಲೆಯಲ್ಲಿ ಡಿಜಟಲ್ ಮಾಧ್ಯಮದ ಮೂಲಕ ವ್ಯವಹಾರ ನಡೆಸಿದ 15 ಸಾವಿರ ವಿಜೇತರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.

ಡಿಜಿಟಲ್ ಪೇಮೆಂಟ್ 15 ಸಾವಿರ ಮಂದಿ ಬಹುಮಾನ ವಿಜೇತರು

ಜಿಯೋನಿ M2017 ಸ್ಮಾರ್ಟ್‌ಪೋನ್‌ನಲ್ಲಿದೆ 7000mAh ಬ್ಯಾಟರಿ, ಡುಯಲ್ ಕ್ಯಾಮೆರಾ ಇನ್ನು ಹಲವು ವಿಶೇಷತೆ

ಈ ವಿಜೇತರನ್ನು ಆಯ್ಕೆ ಮಾಡುವ ಸಲುವಾಗಿಯೇ ನಾಲ್ಕು ಬೋರ್ಡ್‌ಗಳನ್ನು ನೇಮಕ ಮಾಡಲಾಗಿದ್ದು, ಈ ಬೋರ್ಡ್ ನವೆಂಬರ್ 9 ರಿಂದ ಡಿಸೆಂಬರ್ 21 ರ ವರೆಗೆ ನಡೆದಿದ್ದ ಸುಮಾರು 8 ಕೋಟಿ ಡಿಜಿಟಲ್ ವ್ಯವಹಾರಗಳ ಪೈಕಿ 15 ಸಾವಿರ ಮಂದಿ ವಿಜೇತರನ್ನು ಆಯ್ಕೆ ಮಾಡಿದ್ದಾರೆ.

ಲೆಸ್ ಕ್ಯಾಷ್ ಎಕಾನಮಿ ಕಡೆಗೆ ಮುಖ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಲಕ್ಕಿ ಗ್ರಾಹಕ್ ಯೋಜನೆ ಮತ್ತು ಡಿಜಿ ಧನ್ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಮೂಲಕ ಮೊಬೈಲ್ ಬ್ಯಾಂಕಿಗ್ ಮತ್ತು ಈ ಪೇಮೆಂಟ್ ಹೆಚ್ಚು ಮಾಡುವ ಗುರಿಯನ್ನು ಹೊಂದಿದ್ದಾರೆ.

ಡಿಜಿಟಲ್ ಪೇಮೆಂಟ್ 15 ಸಾವಿರ ಮಂದಿ ಬಹುಮಾನ ವಿಜೇತರು

ಕಾರ್ಬನ್‌ನಿಂದ ಕಡಿಮೆ ಬೆಲೆಯ ನಾಲ್ಕು 4G ಸ್ಮಾರ್ಟ್‌ಪೋನ್ ಬಿಡುಗಡೆ

ಈಗಾಗಲೇ 15 ಸಾವಿರ ಮಂದಿ ವಿಜೇತರನ್ನು ಆಯ್ಕೆ ಮಾಡಲಾಗಿದ್ದು, ಇಷ್ಟು ಜನರ ಅಕೌಂಟ್ ಗೆ ಕೇಂದ್ರ ಸರಕಾರದ ವತಿಯಿಂದ ಬಹುಮಾನದ ಮೊತ್ತವಾಗಿ 1 ಸಾವಿರ ರೂಗಳನ್ನು ಹಾಕಲಾಗುತ್ತದೆ. ಮುಂದಿನ 24 ಗಂಟೆಗಳಲ್ಲಿ ವಿಜೇತರ ಬ್ಯಾಂಕ್ ಅಕೌಂಟ್ ಗಳಿಗೆ ಹಣ ಜಮೆಯಾಗಲಿದ್ದು, ಈ ಕುರಿತು ಮೇಸೆಜ್ ಸಹ ಅವರಿಗೆ ತಲುಪಲಿದೆ.

ಡಿಜಿಟಲ್ ಪೇಮೆಂಟ್ 15 ಸಾವಿರ ಮಂದಿ ಬಹುಮಾನ ವಿಜೇತರು

ರೆಡ್‌ಮಿ ನೋಟ್ 4 ಮತ್ತು ಮೊಟೋ G4 ಪ್ಲಸ್: ಎರಡರಲ್ಲಿ ಯಾವುದು ಬೆಸ್ಟ್..!

ಈ ವಿಜೇತರ ಪಟ್ಟಿಯನ್ನು ನೋಡಲು ಸಾರ್ವಜನಿಕರು www.digidhanlucky.mygov.in ಜಾಲತಾಣಕ್ಕೆ ಭೇಟಿ ನೀಡಬೇಕಿದೆ. ಇಲ್ಲಿ ವಿಜೇತರ ಸಂಪೂರ್ಣ ವಿವರವನ್ನು ದಾಖಲಿಸಲಾಗಿದೆ. ಇನ್ನು ಲಕ್ಕಿ ಗ್ರಾಹಕ್ ಯೋಜನೆ ಮತ್ತು ಡಿಜಿ ಧನ್ ಯೋಜನೆಯ ಮೆಗಾ ಡ್ರಾ ಎಪ್ರಿಲ್ 14, 2017 ರಂದು ನಡೆಯಲಿದೆ.

Read more about:
English summary
15,000 winners have been selected from eight crore digital transactions as part of the government's efforts to incentivise and boost digital payments in the country.to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot