ಕಾರ್ಬನ್‌ನಿಂದ ಕಡಿಮೆ ಬೆಲೆಯ ನಾಲ್ಕು 4G ಸ್ಮಾರ್ಟ್‌ಪೋನ್ ಬಿಡುಗಡೆ

Written By:

ಭಾರತೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಕಾರ್ಬನ್‌ ಕಂಪನಿ ಹೊಸ ವರ್ಷದ ಸಂಭ್ರಮಕ್ಕೆ ಒಟ್ಟು ನಾಲ್ಕು 4G ಸ್ಮಾರ್ಟ್‌ಪೋನುಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡುತ್ತಿದ್ದು, ಈ ಪೋನುಗಳು 10 ಸಾವಿರದ ಒಳಗಿನವಾಗಿವೆ. ಸಾಮಾನ್ಯರ ಕೈಗೆ ಎಟುಕುವ ಬೆಲೆಯಲ್ಲಿ ಫೋನ್ ಗಳನ್ನು ಲಾಂಚ್ ಮಾಡಲು ಕಾರ್ಬನ್ ಮುಂದಾಗಿದೆ.

 

ರೆಡ್‌ಮಿ ನೋಟ್ 4 ಮತ್ತು ಮೊಟೋ G4 ಪ್ಲಸ್: ಎರಡರಲ್ಲಿ ಯಾವುದು ಬೆಸ್ಟ್..!

ಕಾರ್ಬನ್ ಕಂಪನಿಯು ಈ ಬಾರಿ Aura Note 4G, K9 Smart 4G, Titanium Vista 4G, ಮತ್ತು K9 Viraat 4G ಎಂಬ ನಾಲ್ಕು 4G ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದೆ. Aura Note 4G ಮತ್ತು Titanium Vista 4G ಪೋನುಗಳು ಕ್ರಮವಾಗಿ 6,490 ರೂ ಮತ್ತು 5,090 ರೂಗಳಿಗೆ ಲಭ್ಯವಿದ್ದರೆ, K9 Smart 4G ಮತ್ತು K9 Viraat 4G ಪೋನುಗಳು ಕ್ರಮವಾಗಿ ರೂ. 5,090 ಮತ್ತು 5,790 ರೂಗಳಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾರ್ಬನ್ Aura Note 4G ವಿಶೇಷತೆಗಳು: ಬೆಲೆ 6,490 ರೂ

ಕಾರ್ಬನ್ Aura Note 4G ವಿಶೇಷತೆಗಳು: ಬೆಲೆ 6,490 ರೂ

ಆಂಡ್ರಾಯ್ಡ್ 6.0 ನಲ್ಲಿ ಕಾರ್ಯನಿರ್ವಹಿಸಲಿರುವ Aura Note 4G ಸ್ಮಾರ್‌ಪೋನಿನಲ್ಲಿ 5.5 ಇಂಚಿನ HD ಡಿಸ್‌ಪ್ಲೇ ಇದ್ದು, ಉತ್ತಮ ವಿಡಿಯೋ ವೀಕ್ಷಣೆಗೆ ಸಹಾಯಕಾರಿಯಾಗಿದೆ. ವೇಗದ ಕಾರ್ಯಚರಣೆಗಾಗಿ 1.25GHz ವೇಗದ ಕ್ವಾಡ್ ಕೋರ್ ಮಿಡಿಯಾಟೆಕ್ ಪ್ರೊಸೆಸರ್, 2GB RAM ಮತ್ತು 16BG ಇಂಟರ್ನಲ್ ಮೆಮೊರಿ ಅಳವಡಿಸಲಾಗಿದೆ. 8 MP ಹಿಂಬದಿ ಮತ್ತು 5 MP ಮುಂಬದಿ ಕ್ಯಾಮೆರಾ ಇದ್ದು, ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಇದೆ. ಜೊತೆಗೆ 2800mAh ಸಾಮರ್ಥ್ಯದ ಬ್ಯಾಟರಿ ಇದೆ.

ಕಾರ್ಬನ್ K9 Smart 4G ವಿಶೇಷತೆಗಳು: 5,090 ರೂ

ಕಾರ್ಬನ್ K9 Smart 4G ವಿಶೇಷತೆಗಳು: 5,090 ರೂ

ವಿಶೇಷವಾಗಿ ಒಡೆಯದ ಪರದೆಯೊಂದಿಗೆ ಬಿಡುಗಡೆಯಾಗುತ್ತಿರುವ K9 Smart 4G ಪೋನಲ್ಲಿ ಇಂಡಸ್ OS ಬಳಸಿದ್ದು, ಇದು ಸ್ಥಳೀಯ ಭಾಷೆಗಳಲ್ಲಿ ಧ್ವನಿ ಹುಡುಕುವಿಕೆಗೆ ಸಹಾಯಕಾರಿಯಾಗಿದೆ ಎಂದು ಕಂಪನಿ ತಿಳಿಸಿದೆ. ಈ ಪೋನಿನಲ್ಲಿ 5 ಇಂಚಿನ ಡಿಸ್‌ಪ್ಲೇ, 1.25GHz ವೇಗದ ಕ್ವಾಡ್ ಕೋರ್ ಮಿಡಿಯಾಟೆಕ್ ಪ್ರೊಸೆಸರ್, 1GB RAM, ಎರಡು ಬದಿಯಲ್ಲೂ 5 MP ಕ್ಯಾಮೆರಾ ಇದ್ದು ಎರಡು ಬಣ್ಣಗಳಲ್ಲಿ ಲಭ್ಯವಿದೆ.

ಕಾರ್ಬನ್ Titanium Vista 4G ವಿಶೇಷತೆಗಳು: 5,090 ರೂ.

ಕಾರ್ಬನ್ Titanium Vista 4G ವಿಶೇಷತೆಗಳು: 5,090 ರೂ.

5 ಇಂಚಿನ HD ಡಿಸ್‌ಪ್ಲೇ ಹೊಂದಿರುವ ಕಾರ್ಬನ್ Titanium Vista 4G ಸ್ಮಾರ್ಟ್‌ಪೋನಿನಲ್ಲಿ 1.3 GHz ವೇಗದ ಕ್ವಾಡ್ ಕೋರ್ ಮಿಡಿಯಾಟೆಕ್ ಪ್ರೊಸೆಸರ್, 1GB RAM ಮತ್ತು 8GB ಆಂತರಿಕ ಮೆಮೊರಿ ಇದೆ. ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಈ ಪೋನ್ ಲಭ್ಯವಿದ್ದು, ಹಲವು ಜನಪ್ರಿಯ ಆಪ್ ಗಳು ಒಂದೇ ಟಿಪ್ ನಲ್ಲಿ ಈ ಪೋನಿನಲ್ಲಿ ದೊರೆಯಲಿವೆ.

ಕಾರ್ಬನ್ K9 Viraat 4G ವಿಶೇಷತೆಗಳು: 5,790 ರೂ.

ಕಾರ್ಬನ್ K9 Viraat 4G ವಿಶೇಷತೆಗಳು: 5,790 ರೂ.

K9 Viraat 4G ಪೋನಿನಲ್ಲಿ 5.5 ಇಂಚಿನ HD ಡಿಸ್‌ಪ್ಲೇ ಇದೆ. 1.3GHz ವೇಗದ ಕ್ವಾಡ್ ಕೋರ್ ಮಿಡಿಯಾಟೆಕ್ ಪ್ರೊಸೆಸರ್, 8 MP ಹಿಂಬದಿ ಮತ್ತು 5 MP ಮುಂಬದಿ ಕ್ಯಾಮೆರಾ ಮತ್ತು 800mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಎರಡು ಬಣ್ಣದಲ್ಲಿ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Karbonn has launched four new 4G smartphones in India - the Aura Note 4G, K9 Smart 4G, Titanium Vista 4G, and K9 Viraat 4G. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot