ಗೂಗಲ್‌ ತೆಕ್ಕೆಗೆ ಬೆಂಗಳೂರಿನ ಕಂಪೆನಿ

Posted By:

ವಿಶ್ವದ ಟೆಕ್‌ ಕಂಪೆನಿಗಳ ಕಣ್ಣು ಭಾರತದ ಕಂಪೆನಿಗಳತ್ತ ಬಿದ್ದಿದೆ.ಇತ್ತೀಚಿಗಷ್ಟೆ ಬೆಂಗಳೂರಿನ ಕಂಪೆನಿಯೊಂದನ್ನು ಫೇಸ್‌ಬುಕ್ ಖರೀದಿಸಿದ ಬೆನ್ನಲ್ಲೇ ಗೂಗಲ್‌ ಈಗ ಇಬ್ಬರು ಭಾರತೀಯರು ಸ್ಥಾಪಿಸಿದ ಕಂಪೆನಿಯೊಂದನ್ನು ಖರೀದಿಸಿದೆ.

ಇಂಟರ್‌ನೆಟ್‌ ಆಂಟಿ ಸ್ಪಾಮ್‌ ಸಾಫ್ಟ್‌ವೇರ್‌‌ಗಳನ್ನು ಅಭಿವೃದ್ಧಿ ಪಡಿಸುವ ಇಂಪರ್‌‌ಮಿಯಮ್‌‌(Impermium) ಕಂಪೆನಿಯನ್ನು ಗೂಗಲ್‌ ಖರೀದಿಸಿದ್ದು,ಎಷ್ಟು ಮೊತ್ತಕ್ಕೆ ಖರೀದಿಸಿದೆ ಎನ್ನುವ ಮಾಹಿತಿ ಇನ್ನು ಬಹಿರಂಗಗೊಂಡಿಲ್ಲ.

ಗೂಗಲ್‌ ತೆಕ್ಕೆಗೆ ಬೆಂಗಳೂರಿನ ಕಂಪೆನಿ

ಮೂರು ವರ್ಷದ ಹಿಂದೆ ಈ ಕಂಪೆನಿಯನ್ನು ಯಾಹೂವಿನ ಮಾಜಿ ಉದ್ಯೋಗಿಗಳಾದ ರಾಮ್‌ರಾವ್‌,ನವೀನ್‌ ಜಮಾಲ್‌ ಮತ್ತು ಅಮೆರಿಕದ ಮಾರ್ಕ್‌‌ ರಿಶೀರ್‌ ಆರಂಭಿಸಿದ್ದರು.ಬೆಂಗಳೂರು ಮತ್ತು ಕ್ಯಾಲಿಪೋರ್ನಿ‌ಯಾದಲ್ಲಿ ಕಚೇರಿಯನ್ನು ಹೊಂದಿದ್ದ ಕಂಪೆನಿ ಮುಂದಿನ ದಿನಗಳಲ್ಲಿ ಗೂಗಲ್‌ ಜೊತೆಗೂಡಿ ಇಂಟರ್‌ನೆಟ್‌ ಸುರಕ್ಷತೆಗಾಗಿ ಮತ್ತಷ್ಟು ಶ್ರಮಿಸಲಿದ್ದೇವೆ ಎಂದು ಸಹ ಸಂಸ್ಥಾಪಕ ಮಾರ್ಕ್‌ ರಿಶೀರ್‌ ವೆಬ್‌ಸೈಟ್‌ನಲ್ಲಿ ಹೇಳಿದ್ದಾರೆ.

ಇಂಪರ್‌‌ಮಿಯಮ್‌ ಕಂಪೆನಿಗೆ Accel Partners, AOL Ventures, Charles River Ventures and Highland Capital Partners ಕಂಪೆನಿಗಳು ಬಂಡವಾಳ ಹೂಡಿದೆ. ಕಂಪೆನಿಗೆ ವಿಶ್ವದೆಲ್ಲೆಡೆ ಮೂರು ಲಕ್ಷಕ್ಕೂ ಅಧಿಕ ಗ್ರಾಹಕರಿದ್ದು, ಟಂಬ್ಲರ್‌,ಸಿಎನ್‌ಎನ್‌,ಇಎಸ್‌ಪಿಎನ್‌,ವಾಶಿಂಗ್ಟನ್‌ ಪೋಸ್ಟ್‌ಗಳು ಇಂಪರ್‌‌ಮಿಯಮ್‌ ಸೇವೆಯನ್ನು ಬಳಸುತ್ತಿದೆ.

ಇದನ್ನೂ ಓದಿ: ಗೂಗಲ್‌ ತೆಕ್ಕೆಗೆ ಆಪಲ್‌ ಮಾಜಿ ಉದ್ಯೋಗಿಗಳ ಕಂಪೆನಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot