ಫೇಸ್‌ಬುಕ್ ತೆಕ್ಕೆಗೆ ಬೆಂಗಳೂರು ಆಪ್ ಕಂಪೆನಿ
ಫೇಸ್‌ಬುಕ್ ಪ್ರಪ್ರಥಮ ಬಾರಿಗೆ ಭಾರತದ ಟೆಕ್ ಕಂಪೆನಿಯನ್ನು ಖರೀದಿಸಿದೆ.ಬೆಂಗಳೂರಿನ ಆಪ್ ತಯಾರಕ ಲಿಟ್ಲ್ ಐ ಲ್ಯಾಬ್ ಕಂಪೆನಿಯನ್ನು ಫೇಸ್‌ಬುಕ್ ಖರೀದಿಸಿದ್ದು ಲಿಟ್ಲ್ ಐ ಲ್ಯಾಬ್ ಈ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಲಿಟ್ಲ್ ಐ ಲ್ಯಾಬ್ ಕಂಪೆನಿ ಮೊಬೈಲ್ ಅಪ್ಲಿಕೇಶ್‌ಗಳಿಗೆ ಸಂಬಂಧಿಸಿದ ಟೂಲ್‌ಗಳನ್ನು ಅಭಿವೃದ್ಧಿ ಪಡಿಸುವ ಕಂಪೆನಿಯಾಗಿದ್ದು ಈ ಕಂಪೆನಿಯನ್ನು ಫೇಸ್‌ಬುಕ್ ಖರೀದಿಸಲಿದೆ ಎನ್ನುವ ಸುದ್ದಿಯನ್ನು ಗಿಝ್‌ಬಾಟ್ ಈ ಹಿಂದೆ ಪ್ರಕಟಿಸಿತ್ತು. ಫೇಸ್‌ಬುಕ್ ಎಷ್ಟು ಬೆಲೆಗೆ ಖರೀದಿಸಿದೆ ಎನ್ನುವುದನ್ನು ಲಿಟ್ಲ್ ಐ ಪ್ರಕಟಿಸಿದ್ದರೂ ಟೆಕ್ ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ 10 ,15 ಮಿಲಿಯನ್ ಡಾಲರ್ ವ್ಯಾಪ್ತಿ ಒಳಗಡೆ ಖರೀದಿ ಒಪ್ಪಂದ ನಡೆದಿದೆ ಎಂದು ಹೇಳಲಾಗುತ್ತಿದೆ.

ಗಿರಿಧರ್ ಮೂರ್ತಿ,ಕುಮಾರ್ ರಂಗರಾಜನ್,ಸತ್ಯಂ ಕಂಡುಲ ಮತ್ತು ಲಕ್ಷ್ಮಣ್ ಕಕ್ಕಿರ್ಲ ಮೇ 2012ರಲ್ಲಿ ಲಿಟ್ಲ್ ಐ ಲ್ಯಾಬ್ ಕಂಪೆನಿಯನ್ನು ಆರಂಭಿಸಿದ್ದು, ಗಿರಿಧರ್ ಮೂರ್ತಿ,ಕುಮಾರ್ ರಂಗರಾಜನ್ ಕಂಪೆನಿಯ ಸಿಇಒ ಆಗಿದ್ದಾರೆ.
ಯಾಕೆ ಖರೀದಿ:
ಲಿಟ್ಲ್ ಐ ಲ್ಯಾಬ್ ಮೊಬೈಲ್ ಆಪ್ ತಯಾರಿಸುವವರಿಗಾಗಿ ಟೂಲ್ ಅಭಿವೃದ್ಧಿ ಪಡಿಸುವ ಕಂಪೆನಿಯಾಗಿದೆ. ಈ ಟೂಲ್‌ಗಳು ಅಪ್ಲಿಕೇಶನ್ ತಯಾರಿಸುವವರಿಗೆ ಆಪ್ ಬಗ್ಗೆ ಇರುವ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಆಪ್‌ಗೆ ಎಷ್ಟು ಬ್ಯಾಟರಿ ಖರ್ಚಾಗುತ್ತದೆ,ಮೆಮೊರಿ ವಿವರ, ಸಿಪಿಯು ಸೇರಿದಂತೆ ಇತ್ಯಾದಿ ಬೆಂಚ್‌ಮಾರ್ಕ್ ಡೇಟಾಗಳನ್ನು ಈ ಟೂಲ್ ಮೂಲಕ ನೋಡಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ಆಪ್‌ಗಳನ್ನು ತಯಾರಿಸಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಫೇಸ್‌ಬುಕ್ ಈ ಕಂಪೆನಿಯನ್ನು ಖರೀದಿಸಿದೆ.
ಇದನ್ನೂ ಓದಿ: ನಿಮ್ಮ ಎಲ್ಲಾ ಫೇಸ್‌ಬುಕ್ ಲೈಕ್,ಕಾಮೆಂಟ್‌ಗಳು ಸೇವ್ ಆಗುವುದು ಇಲ್ಲಿ


Click it and Unblock the Notifications








