ಗೂಗಲ್‌ ತೆಕ್ಕೆಗೆ ಆಪಲ್‌ ಮಾಜಿ ಉದ್ಯೋಗಿಗಳ ಕಂಪೆನಿ

Posted By:

ಆಪಲ್‌ ಕಂಪೆನಿಗೆ ಸ್ಪರ್ಧೆ‌ ನೀಡಲು ಗೂಗಲ್‌ ಅಮೆರಿಕ ಮೂಲದ ಕಂಪೆನಿಯನ್ನು ಖರೀದಿಸಲು ಮುಂದಾಗುತ್ತಿದೆ.ವೈಫೈ ಮೂಲಕ ನಿಯಂತ್ರಣ ಮಾಡುವ ಥರ್ಮೋಸ್ಟಾಟ್‌ ತಯಾರಿಸುವ ನೆಸ್ಟ್‌ ಲ್ಯಾಬ್ಸ್‌ ಕಂಪೆನಿಯನ್ನು 3.2 ಶತಕೋಟಿ ಡಾಲರ್‌ಗೆ ಖರೀದಿಸಲು ಮುಂದಾಗುತ್ತಿರುವುದಾಗಿ ಗೂಗಲ್‌ ಪ್ರಕಟಿಸಿದೆ.

ನೆಸ್ಟ್‌ ಲ್ಯಾಬ್ಸ್‌ ವೈಫೈ ಮೂಲಕ ನಿಯಂತ್ರಣ ಮಾಡಬಹುದಾದ ಥರ್ಮೋಸ್ಟಾಟ್‌ ಮತ್ತು ಹೊಗೆ ಗುರುತಿಸುವ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವ ಕಂಪೆನಿಯಾಗಿದೆ. ಈ ಉತ್ಪನ್ನಗಳು ಮನೆಯಲ್ಲಿ ಅಳವಡಿಸಿ,ಸ್ಮಾರ್ಟ್‌ಫೋನಿಗೆ ಮಾಹಿತಿ ರವಾನಿಸಲು ಐಓಎಸ್‌ ಮತ್ತು ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳನ್ನು ಕಂಪೆನಿ ಅಭಿವೃದ್ಧಿ ಪಡಿಸಿದ್ದು,ಅಮೆರಿಕದಲ್ಲಿ ನೆಸ್ಟ್‌ ಥರ್ಮೋಸ್ಟಾಟ್‌ ಜನಪ್ರಿಯ ಉತ್ಪನ್ನವಾಗಿದೆ.

ಗೂಗಲ್‌ ತೆಕ್ಕೆಗೆ ಆಪಲ್‌ ಮಾಜಿ ಉದ್ಯೋಗಿಗಳ ಕಂಪೆನಿ

ಆಪಲ್‌ನ ಬಹಳ ಪ್ರಸಿದ್ದ ಉತ್ಪನ್ನ ಐಪಾಡ್‌ ಸೃಷ್ಟಿಕರ್ತ‌ ಎಂದೇ ಹೆಸರುವಾಸಿಯಾಗಿರುವ ಟೋನಿ ಫೆಡಲ್‌ ಸಿಇಒ ಆಗಿರುವ ಕಂಪೆನಿಯನ್ನು ಯಾಕೆ ಖರೀದಿಸಿದೆ ಎನ್ನುವುದನ್ನು ಗೂಗಲ್‌ ಇನ್ನೂ ಸ್ಪಷ್ಟ ಪಡಿಸಿಲ್ಲ. ಕೆಲ ಮಾಧ್ಯಮಗಳು ಪ್ರಕಟಿಸಿರುವಂತೆ ಸ್ಮಾರ್ಟ್‌ಫೋನ್‌‌ ಮೂಲಕ ಮನೆ ಬಳಕೆಯ ವಸ್ತುಗಳನ್ನು ನಿಯಂತ್ರಣ ಮಾಡುವ ಉತ್ಪನ್ನಗಳತ್ತ ಗೂಗಲ್‌ ಆಸಕ್ತಿ ತೋರಿಸುತ್ತಿದ್ದು, ಈ ಕಾರಣಕ್ಕಾಗಿ ಆಂಡ್ರಾಯ್ಡ್‌ ಓಎಸ್‌ಗೆ‌ ಮತ್ತಷ್ಟು ವಿಶೇಷತೆಗಳನ್ನು ಸೇರಿಸಲು ನೆಸ್ಟ್‌‌ ಲ್ಯಾಬ್ಸ್‌ನ್ನು ಖರೀದಿಸಿದೆ ಎಂದು ಹೇಳಲಾಗುತ್ತಿದೆ.

ಆಪಲ್‌ನ ಮಾಜಿ ಇಬ್ಬರು ಉದ್ಯೋಗಿಗಳು ನೆಸ್ಟ್‌ ಲ್ಯಾಬ್ಸ್‌ ಕಂಪೆನಿಯ 2010ರಲ್ಲಿ ಪ್ರಾರಂಭಿಸಿದ್ದರು. ಟೋನಿ ಫೆಡಲ್‌ಮತ್ತು ಮಟ್‌ ರೋಜರ್ಸ್‌ ಅಮೆರಿಕದಲ್ಲಿ ಸ್ಥಾಪಿಸಿದ ಕಂಪೆನಿಯಲ್ಲಿ 130 ಅಧಿಕ ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಫೇಸ್‌ಬುಕ್‌ ತೆಕ್ಕೆಗೆ ಬೆಂಗಳೂರು ಆಪ್‌ ಕಂಪೆನಿ

ಇದನ್ನೂ ಓದಿ: ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳ ಒಳಗಡೆಯ ವ್ಯವಸ್ಥೆ ಹೇಗಿದೆ ನೋಡಿದ್ದೀರಾ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot