ಗೂಗಲ್ ಮ್ಯಾಪಿನಲ್ಲೇ ಪಬ್ಲಿಕ್ ಟಾಯ್ಲೆಟ್ ಹುಡುಕಿ
ವಿಳಾಸಕ್ಕಾಗಿ ಮತ್ತು ದಾರಿ ತೋರಿಸಲು ಸಹಾಯ ಮಾಡುತ್ತಿದ್ದ ಗೂಗಲ್ ಮ್ಯಾಪ್ ಇನ್ನು ಮುಂದೆ ಸಾರ್ವಜನಿಕ ಶೌಚಾಲಯಗಳು ಎಲ್ಲಿವೆ ಎಂಬುದನ್ನು ತೋರಿಸಲಿವೆ, ಇನ್ನು ಮುಂದೆ ಅರ್ಜೆಂಟ್ ಆದರೆ ಅವರಿರನ್ನು ಕೇಳುವ ಬದಲು ನಿಮ್ಮ ಗೂಗಲ್ ಮ್ಯಾಪಿನಲ್ಲೇ ನೋಡಿ.
ಇಂದಿನ ಸ್ಮಾರ್ಟ್ ಯುಗದಲ್ಲಿ ಯಾವ ವಿಷಯವನ್ನು ಕೇಳಿದರು ಗೂಗಲ್ ಮಾಡಿ ಉತ್ತರ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಯಾವ ವಿಳಾಸ ಬೇಕಿದ್ದರು, ಯಾವ ಸಿನಿಮಾ ಬೇಕಿದ್ದರು, ಯಾವ ತಿಂಡಿ ಬೇಕಿದ್ದರು ಗೂಗಲ್ ಮೊರೆ ಹೋಗುವವರು ನಮ್ಮ ನಿಮ್ಮ ನಡುವೆಯೇ ಇದ್ದಾರೆ.

ವಿಳಾಸಕ್ಕಾಗಿ ಮತ್ತು ದಾರಿ ತೋರಿಸಲು ಸಹಾಯ ಮಾಡುತ್ತಿದ್ದ ಗೂಗಲ್ ಮ್ಯಾಪ್ ಇನ್ನು ಮುಂದೆ ಸಾರ್ವಜನಿಕ ಶೌಚಾಲಯಗಳು ಎಲ್ಲಿವೆ ಎಂಬುದನ್ನು ತೋರಿಸಲಿವೆ, ಇನ್ನು ಮುಂದೆ ಅರ್ಜೆಂಟ್ ಆದರೆ ಅವರಿರನ್ನು ಕೇಳುವ ಬದಲು ನಿಮ್ಮ ಗೂಗಲ್ ಮ್ಯಾಪಿನಲ್ಲೇ ಶೌಚಾಲಯ ಹುಡುಕಬಹುದಾಗಿದೆ.
ಬೆಂಗಳೂರಿಗರೇ ಆನ್ ಲೈನ್ ನಲ್ಲಿ ಕ್ಯಾಶ್ ಬುಕ್ ಮಾಡಿ, ಮನೆಯಲ್ಲೇ ಕೂತು ಹಣ ಎಣಿಸಿ..!
ಸದ್ಯ ಗೂಗಲ್ ಮ್ಯಾಪ್ ರಾಜಧಾನಿ ದೆಹಲಿ ಮತ್ತು ಮಧ್ಯ ಪ್ರದೇಶದಲ್ಲಿರುವ ಸಾರ್ವಜನಿಕ ಶೌಚಾಲಯಗಳ ಮಾಹಿತಿಯನ್ನು ನೀಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಸೇವೆ ಬೇರೆ ನಗರ ಮತ್ತು ರಾಜ್ಯಗಳಿಗೂ ವಿಸ್ತಿಸಲಿದೆ ಎನ್ನಲಾಗಿದೆ.

ವೆಬ್ ನಲ್ಲಿ ಮ್ಯಾಪ್ ಬಳಸುವವರೊಂದಿಗೆ ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆ ದಾರರು ತಮ್ಮ ಮೊಬೈಲ್ ನಲ್ಲಿರುವ ಮ್ಯಾಪ್ ಬಳಸಿಕೊಂಡು ಶೌಚಾಲಯಗಳನ್ನು ಹುಡುಬಹುದಾಗಿದೆ.

ಮಾರುಕಟ್ಟೆಗೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್ ಪೋನು..! ಇದರ ವೇಗಕ್ಕೇ ಸರಿಸಾಟಿಯೇ ಇಲ್ಲ..!
ಮ್ಯಾಪ್ ನಲ್ಲಿ ಸಮೀಪವಿರುವ ಸಾರ್ವಜನಿಕ ಶೌಚಾಲಯದ ಸಂಪೂರ್ಣ ವಿವರ ದೊರೆಯಲಿದೆ. ಶೌಚಾಲಯ ತೆರೆದಿಯೇ ಅಥವಾ ಮುಚ್ಚಿದಿಯೇ, ಸ್ಪಚ್ಚತೆಯ ಬಗ್ಗೆಯೂ ರೇಟಿಂಗ್ ನೀಡಿರುತ್ತದೆ. ಈ ಮಾಹಿತಿಗಳು ಇಂಗ್ಲೀಷ್ ಮತ್ತು ಹಿಂದಿ ಎರಡು ಭಾಷೆಗಳಲ್ಲಿಯೂ ಲಭ್ಯವಿದೆ. ಸುಮಾರು 4400 ಶೌಚಾಲಯಗಳ ಮಾಹಿತಿ ಇಲ್ಲಿ ದೊರೆಯಲಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








