ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬರುತ್ತಂತೆ!

Posted By:

ಭಾರತ ಸೇರಿದಂತೆ ಏಷ್ಯಾ,ಆಫ್ರಿಕಾದಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌‌ಗಳು ಹೆಚ್ಚು ಮಾರಾಟವಾಗುತ್ತಿರುವ ಹಿನ್ನಲೆಯಲ್ಲಿ ಗೂಗಲ್‌ ಈಗ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗುತ್ತಿದೆ.

ಗೂಗಲ್‌ ಈ ಸಂಬಂಧ ಮೀಡಿಯಾ ಟೆಕ್‌ ಕಂಪೆನಿಯ ಜೊತೆಗೆ ಮಾತುಕತೆ ನಡೆಸಿದ್ದು,ಕಡಿಮೆ ಬೆಲೆಯ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಕಂಪೆನಿಯ ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಬಿಡಿಗಡೆಯಾಗಲಿದೆ ಎಂದು ವಿದೇಶಿ ಟೆಕ್‌ ತಾಣಗಳು ವರದಿ ಮಾಡಿವೆ.

ಆಪಲ್‌ ಕಳೆದ ವರ್ಷ‌ ಕಡಿಮೆ ಬೆಲೆ ಮತ್ತು ದುಬಾರಿ ಬೆಲೆಯ ಎರಡು ಐಫೋನ್‌ಗಳನ್ನು ಬಿಡುಗಡೆ ಮಾಡಿತ್ತೋ ಅದೇ ರೀತಿಯಾಗಿ ಈ ವರ್ಷ‌ದಿಂದ ಗೂಗಲ್‌ ಸಹ ದುಬಾರಿ ಬೆಲೆಯ ಮತ್ತು ಕಡಿಮೆ ಬೆಲೆಯ ಎರಡು ನೆಕ್ಸಸ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ವರದಿ ತಿಳಿಸಿದೆ.

ಪ್ರಸ್ತುತ ಗೂಗಲ್‌ ನೆಕ್ಸಸ್‌5 ಬೆಲೆ ಮಾರುಕಟ್ಟೆಯಲ್ಲಿ 28ಸಾವಿರ ರೂಪಾಯಿ ಆಗಿದ್ದರೆ, ಕಡಿಮೆ ಬೆಲೆಯ ನೆಕ್ಸಸ್‌‌ ಸ್ಮಾರ್ಟ್‌ಫೋನ್‌‌ ಆರು ಸಾವಿರ ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಗೂಗಲ್‌‌ಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟ ನೆಕ್ಸಸ್‌ 4 ಮತ್ತು ನೆಕ್ಸಸ್‌ 5 ಎಲ್‌ಜಿ ಕಂಪೆನಿ ತಯಾರಿಸಿತ್ತು. ಕಡಿಮೆ ಬೆಲೆಯ ನೆಕ್ಸಸ್‌ ಸ್ಮಾರ್ಟ್‌ಫೋನ್‌‌ ತಯಾರಿಸಲು ಸೋನಿ,ಲೆನೊವೊ,ಎಚ್‌ಟಿಸಿ ಕಂಪೆನಿಗಳ ಪೈಕಿ ಒಂದು ಕಂಪೆನಿಗೆ ಗುತ್ತಿಗೆ ನೀಡಲು ಗೂಗಲ್‌ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

 ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬರುತ್ತಂತೆ!

ಗೂಗಲ್‌ ಕಾರ್ಯನಿರ್ವಾಹಕ ಮುಖ್ಯಸ್ಥ ಎರಿಕ್ ಸ್ಕಿಮಿಟ್‌ 2013 ಮಾರ್ಚ್‌ ಭಾರತದ ಪ್ರವಾಸದ ಸಂದರ್ಭದಲ್ಲಿ 50 ಡಾಲರ್‌(ಮೂರು ಸಾವಿರ ರೂ.) ಬೆಲೆಯಲ್ಲಿ ಗುಣಮಟ್ಟದ ಫೋನ್‌ ತಯಾರಿಸಬಹುದು ಎಂದು ಹೇಳಿದ್ದರು.ಆದರೆ ಗೂಗಲ್‌ ಇದುವರೆಗೆ ನೆಕ್ಸಸ್‌ ಸರಣಿಯಲ್ಲಿ ಕಡಿಮೆ ಬೆಲೆಯಲ್ಲಿ ಯಾವುದೇ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿರಲಿಲ್ಲ. ಆದರೆ ಗೂಗಲ್‌ ತೆಕ್ಕೆಯಲ್ಲಿದ್ದ ಸಂದರ್ಭ‌ದಲ್ಲಿ ಮೋಟರೋಲಾ ಕಡಿಮೆ ಬೆಲೆಯಲ್ಲಿ ಮೋಟೋ ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಆದರೆ ಈಗ ಮೋಟರೋಲಾವನ್ನು ಚೀನಾದ ಲೆನೊವೊ ಕಂಪೆನಿ 2.91 ಶತಕೋಟಿ ಡಾಲರ್‌ಗೆ ಖರೀದಿಸಿದೆ.

ಸ್ಮಾರ್ಟ್‌ಫೋನ್‌ ತಯಾರಾಕ ಕಂಪೆನಿಗಳ ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌‌ನಂತೆ ನೆಕ್ಸಸ್‌ ಸರಣಿಯ ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌ಗಳು ತಯಾರಾಗುವುದಿಲ್ಲ. ನೆಕ್ಸಸ್‌ ಸಾಧನಗಳ ಹಾರ್ಡ್‌ವೇರ್‌ ಭಾಗಗಳನ್ನು ಒಂದು ಕಂಪೆನಿ ತಯಾರಿಸಿದ್ದರೆ ಆ ಸಾಧನಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್‌ನ್ನು ಗೂಗಲ್‌ ತಯಾರಿಸುತ್ತದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

ಇನ್‌‌ಫೋಗ್ರಾಫಿಕ್‌:ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌‌ಫೋನ್‌ ಬೆಳವಣಿಗೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot