ಲೆನೊವೊ ತೆಕ್ಕೆಗೆ ಗೂಗಲ್‌ ಮಾಲೀಕತ್ವದ ಮೋಟರೋಲಾ ಕಂಪೆನಿ

Posted By:

ಗೂಗಲ್‌ ಮಾಲೀಕತ್ವದ ಮೋಟರೋಲಾ ಮೊಬಿಲಿಟಿ ಸದ್ಯದಲ್ಲೇ ಚೀನಾದ ಸ್ಮಾರ್ಟ್‌ಫೋನ್‌ ತಯಾರಕ ಲೆನೊವೊ ಕಂಪೆನಿಯ ಪಾಲಾಗಲಿದೆ. ಗೂಗಲ್‌ ಈ ಸಂಬಂಧ ಅಧಿಕೃತವಾಗಿ ಈ ವಿಚಾರವನ್ನು ಪ್ರಕಟಿಸಿದ್ದು ಮೋಟರೋಲಾವನ್ನು ಕಂಪೆನಿಯನ್ನು 2.91 ಶತಕೋಟಿ ಡಾಲರ್‌ಗೆ ಲೆನೊವೊ ಕಂಪೆನಿಗೆ ಮಾರಾಟ ಮಾಡಲಿದ್ದೇವೆ ಎಂದು ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.

ಎರಡು ದಿನಗಳ ಹಿಂದೆಯಷ್ಟೇ ಸ್ಯಾಮ್‌ಸಂಗ್‌ ಕಂಪೆನಿಯ ಜೊತೆ ಕ್ರಾಸ್‌ಲೈಸೆನ್ಸ್‌ ಪೇಟೆಂಟ್‌ ವಿಚಾರ ಸಂಬಂಧ ಜಂಟಿಯಾಗಿ ಸಹಿ ಹಾಕಿ ಸುದ್ದಿಯಾಗಿದ್ದ ಗೂಗಲ್‌ ಈಗ ಮೋಟರೋಲಾವನ್ನು ಮಾರಾಟ ಮಾಡುವ ಸುದ್ದಿಯನ್ನು ಪ್ರಕಟಿಸುವ ಮೂಲಕ ಟೆಕ್‌ ವಲಯದಲ್ಲಿ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.

ಹಾರ್ಡ್‌ವೇರ್‌ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಗಳಿಸುತ್ತಿರುವ ಲೆನೊವೊ ಇತ್ತೀಚಿನ ಐಡಿಸಿ ವರದಿ ಪ್ರಕಾರ ಕಳೆದ ವರ್ಷದ ವಿಶ್ವದ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ನಾಲ್ಕನೇಯ ಸ್ಥಾನ ಪಡೆದುಕೊಂಡಿದೆ.

ಲೆನೊವೊ ತೆಕ್ಕೆಗೆ ಗೂಗಲ್‌ ಮಾಲೀಕತ್ವದ ಮೋಟರೋಲಾ ಕಂಪೆನಿ

ಗೂಗಲ್‌ ಸ್ಮಾರ್ಟ್‌‌ಫೋನ್‌ ಹಾರ್ಡ್‌‌ವೇರ್‌ ಕ್ಷೇತ್ರಕ್ಕಿಂತ ಆಂಡ್ರಾಯ್ಡ್‌ ಸಾಫ್ಟ್‌ವೇರ್‌ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದೆ.ಈ ಕಾರಣಕ್ಕಾಗಿ ಮೋಟರೋಲಾವನ್ನು ಮಾರಾಟ ಮಾಡಲು ಮುಂದಾಗಿದ್ದೇವೆ ಎಂದು ಗೂಗಲ್‌ ಸಂಸ್ಥಾಪಕ ಲಾರಿ ಪೇಜ್‌ ಗೂಗಲ್‌ ಬ್ಲಾಗ್‌ನಲ್ಲಿ ಹೇಳಿದ್ದಾರೆ.

ಈ ಕಾರಣದ ಜೊತೆಗೆ ಕಳೆದ ವರ್ಷ‌ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಯಲ್ಲಿ ಮೋಟರೋಲಾ ಕಂಪೆನಿಯ ಸ್ಮಾರ್ಟ್‌‌ಫೋನ್‌ಗಳು ನಿರೀಕ್ಷಿಸಿದ್ದಷ್ಟು ಹೆಚ್ಚಿನ ಯಶಸ್ಸು ಗಳಿಸದ ಹಿನ್ನೆಲೆಯಲ್ಲಿ ಗೂಗಲ್‌ ಮಾರಾಟದ ಒಪ್ಪಂದಕ್ಕ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಗೂಗಲ್‌ 2012ರಲ್ಲಿ ಮೋಟರೋಲಾವನ್ನು ಕೆಲವೊಂದು ಪೇಟೆಂಟ್‌ಗಳಿಗಾಗಿ 12.5 ಶತಕೋಟಿ ಡಾಲರ್‌ ನೀಡಿ ಖರೀದಿಸಿತ್ತು.ಗೂಗಲ್‌ ಕಳೆದ ವರ್ಷ‌ ಮೋಟರೋಲಾ ಕಂಪೆನಿಯ ಲೋಗೋವನ್ನು ಸಹ ಬದಲಾಯಿಸಿತ್ತು.ಗೂಗಲ್‌ ತೆಕ್ಕೆಗೆ ಬಿದ್ದ ಬಳಿಕ ಮೋಟರೋಲಾ ಮೋಟೋ ಎಕ್ಸ್‌ ಮತ್ತು ಮೋಟೋ ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು.ಕಡಿಮೆ ಬೆಲೆಯ ಮೋಟರೋಲಾ ಸ್ಮಾರ್ಟ್‌ಫೋನ್‌ ಮೋಟೋ ಜಿ ಇದೇ ಫೆಬ್ರವರಿಯಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಮೋಟರೋಲಾ ಸ್ಮಾರ್ಟ್‌ಫೋನ್‌ ಹಾರ್ಡ್‌ವೇರ್‍ ಕ್ಷೇತ್ರದ ಹೊರತಾಗಿ ಪಾಸ್‌ವರ್ಡ್ ಕ್ಷೇತ್ರದಲ್ಲೂ ಸಂಶೋಧನೆ ನಡೆಸುತ್ತಿದೆ.ಈಗ ಇರುವ ಪಾಸವರ್ಡ್ ಬದಲಿಗೆ ಎಲೆಕ್ಟ್ರಾನಿಕ್ ಟ್ಯಾಟೋ ಅಥವಾ ಬಯೋಸ್ಟ್ಯಾಂಪ್‌ ಪಾಸ್‌ವರ್ಡ್ ಬಳಸುವ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತಿದೆ.

<blockquote class="twitter-tweet blockquote" lang="en"><p>Official News: Motorola to join Lenovo <a href="http://t.co/NzLN81X6gs">http://t.co/NzLN81X6gs</a></p>— Motorola Mobility (@Motorola) <a href="https://twitter.com/Motorola/statuses/428651511501963264">January 29, 2014</a></blockquote> <script async src="//platform.twitter.com/widgets.js" charset="utf-8"></script>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot