ಇನ್‌‌ಫೋಗ್ರಾಫಿಕ್‌:ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌‌ಫೋನ್‌ ಬೆಳವಣಿಗೆ

By Ashwath
|

ಆಂಡ್ರಾಯ್ಡ್‌‌ ಸ್ಮಾರ್ಟ್‌‌ಫೋನ್‌ ಖರೀದಿಸುವಲ್ಲಿ ಕೆಲವರು ಗೂಗಲ್‌ನ ನೆಕ್ಸಸ್‌ ಸ್ಮಾರ್ಟ್‌‌ಫೋನ್‌ ಖರೀದಿಸಲು ಹೆಚ್ಚು ಇಷ್ಟಪಡುತ್ತಾರೆ. ಗೂಗಲ್‌ ಬ್ರ್ಯಾಂಡ್‌ ಕಂಪೆನಿ ಎನ್ನುವ ಹೆಸರಿಗೆ ಮಾತ್ರ ಖರೀದಿಸದೇ ನೆಕ್ಸಸ್‌ ಸ್ಮಾರ್ಟ್‌‌‌‌‌‌‌ಫೋನ್‌ಲ್ಲಿರುವ ಶುದ್ಧವಾದ ಓಎಸ್‌ಗಾಗಿ (Pure OS)ಖರೀದಿಸುತ್ತಾರೆ.

ಗೂಗಲ್‌ ಎಲ್ಲಾ ಕಂಪೆನಿಯಂತೆ ನೆಕ್ಸಸ್‌ ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌ ತಯಾರಿಸುವುದಿಲ್ಲ.ನೆಕ್ಸಸ್‌ ಹಾರ್ಡ್‌ವೇರ್‌ನ್ನು ಒಂದು ಕಂಪೆನಿ ತಯಾರಿಸಿದರೆ ಸಾಫ್ಟ್‌ವೇರ್‌ ಭಾಗವನ್ನು ಗೂಗಲ್‌ ತಯಾರಿಸುತ್ತದೆ. ಇಲ್ಲಿಯವರಗೆ ನೆಕ್ಸಸ್‌ ಸರಣಿಯಲ್ಲಿ ಐದು ಸ್ಮಾರ್ಟ್‌ಫೋನ್‌‌ಗಳು ಬಿಡುಗಡೆಯಾಗಿದೆ. ಎಚ್‌ಟಿಸಿ ಕಂಪೆನಿ ನೆಕ್ಸಸ್‌ ಒನ್‌, ನೆಕ್ಸಸ್‌ ಎಸ್‌ ಮತ್ತು ಗೆಲಾಕ್ಸಿ ನೆಕ್ಸಸ್‌ ಸ್ಮಾಟ್‌‌ಫೋನ್‌ ಸ್ಯಾಮ್‌ಸಂಗ್‌ನಲ್ಲಿ ತಯಾರಾದರೆ, ನೆಕ್ಸಸ್‌ 4 ಮತ್ತು ನೆಕ್ಸಸ್‌5 ಸ್ಮಾರ್ಟ್‌ಫೋನ್‌ಗಳನ್ನುಎಲ್‌ಜಿ ತಯಾರಿಸಿದೆ.

ತನ್ನ ಹೊಸ ನೆಕ್ಸಸ್‌ ಸ್ಮಾರ್ಟ್‌ಫೋನ್‌ಗಳಿಗೆ ಗೂಗಲ್‌ ಯಾವಾಗಲೂ ಹೊಸ ವಿಶೇಷತೆಗಳನ್ನು ಸೇರಿಸಿ ಬಿಡುಗಡೆ ಮಾಡಿಕೊಂಡು ಬಂದಿದೆ. ಬೆಲೆ ಸ್ವಲ್ಪ ದುಬಾರಿಯಾದರೂ ಆಂಡ್ರಾಯ್ಡ್‌ ಅಭಿಮಾನಿಗಳು ಯಾವಾಗಲೂ ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌‌ಫೋನ್‌ ಖರೀದಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ.

ಹೀಗಾಗಿ ಮುಂದಿನ ಪುಟದಲ್ಲಿ ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಜನ ಯಾಕೆ ಖರೀದಿಸುತ್ತಾರೆ? ಮತ್ತು ಇಲ್ಲಿಯವರೆಗೆ ಬಿಡುಗಡೆಯಾದ ನೆಕ್ಸಸ್ ಸ್ಮಾರ್ಟ್‌‌ಫೋನ್‌ಗಳ ವಿಶೇಷತೆಗಳ ಮಾಹಿತಿಯನ್ನು ತೋರಿಸುವ ಇನ್‌ಫೋಗ್ರಾಫಿಕ್‌‌‌ ಇದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

1

1

ಆಂಡ್ರಾಯ್ಡ್‌ ಓಪನ್‌ ಸೋರ್ಸ್‌‌ ಓಎಸ್‌ ಆಗಿರುವುದರಿಂದ ಸ್ಯಾಮ್‌ಸಂಗ್‌,ಎಚ್‌ಟಿಸಿ,ಸೋನಿ,ಎಲ್‌ಜಿ ಕಂಪೆನಿಗಳು ಆಂಡ್ರಾಯ್ಡ್‌‌ನಲ್ಲೇ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದ್ದರೂ, ಅವರದ್ದೇ ಅದ ಯೂಸರ್‌ ಇಂಟರ್‌ಫೇಸ್‌‌ಗಳನ್ನು ಈ ಆಂಡ್ರಾಯ್ಡ್ ಓಎಸ್‌ಗೆ ಸೇರಿಸಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಾರೆ. ಹೀಗಾಗಿ ಪ್ಯೂರ್‌ ಆಂಡ್ರಾಯ್ಡ್‌ ಓಎಸ್‌ ಬೇಕಿದ್ದಲ್ಲಿ ಗೂಗಲ್‌‌ನ ನೆಕ್ಸಸ್‌ ಮತ್ತು ಮೋಟರೋಲಾ ಕಂಪೆನಿಯ ಸ್ಮಾರ್ಟ್‌‌ಫೋನ್‌ಗಳನ್ನು ಗ್ರಾಹಕರು ಖರೀಸಬೇಕಾಗುತ್ತದೆ.

2

2


ಸ್ಯಾಮ್‌ಸಂಗ್‌ ಮತ್ತು ಎಚ್‌ಟಿಸಿ ಕಂಪೆನಿಗಳು ಅವರದ್ದೇ ಆದ ಯೂಸರ್‌ ಫೇಸ್‌ ಹೊಂದಿರುವ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವುದರ ಜೊತೆಗೆ
ಶುದ್ಧವಾದ ಆಂಡ್ರಾಯ್ಡ್‌ ಓಎಸ್‌‌ನಲ್ಲಿ ಸ್ಮಾರ್ಟ್‌‌ಫೋನ್‌ಗಳು ಬಿಡುಗಡೆ ಮಾಡಿವೆ. ಗೆಲಾಕ್ಸಿ ಎಸ್‌4 ಮತ್ತು ಎಚ್‌ಟಿಸಿ ಒನ್‌ ಸ್ಮಾರ್ಟ್‌ಫೋನ್‌ಗಳು ಜೆಲ್ಲಿ ಬೀನ್‌ ಓಎಸ್‌ನಲ್ಲಿ ಬಿಡುಗಡೆಯಾಗಿದ್ದರೂ ಭಾರತದ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲ. ಅಮೆರಿಕ ಸೇರಿದಂತೆ ಬೇರೆ ದೇಶಗಳ ಪ್ಲೇ ಸ್ಟೋರ್‌ನಲ್ಲಿ ಈ ಸ್ಮಾರ್ಟ್‌‌ಫೋನ್‌ ಲಭ್ಯವಿದ್ದು ಜೆಲ್ಲಿ ಬೀನ್‌ಲ್ಲಿ ಬಿಡುಗಡೆಯಾಗಿದ್ದರೂ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಡೇಟ್‌ ಮಾಡಬಹುದಾಗಿದೆ.

3

3


ಲೆನೊವೊ ಕಂಪೆನಿ ಮೋಟರೋಲಾ ಕಂಪೆನಿಯನ್ನು ಖರೀದಿಸುವ ಮೊದಲು ಗೂಗಲ್‌ ತೆಕ್ಕೆಯಲ್ಲಿದ್ದರಿಂದ ಮೋಟೋ ಜಿ ಮತ್ತು ಮೋಟೋ ಎಕ್ಸ್‌ ಶುದ್ಧವಾದ ಆಂಡ್ರಾಯ್ಡ್‌ ಓಎಸ್‌ನಲ್ಲಿ ಬಿಡುಗಡೆಯಾಗಿದೆ.

4

4


ನೆಕ್ಸಸ್‌ ಸ್ಮಾರ್ಟ್‌‌‌ಫೊನ್‌ ಟ್ಯಾಬ್ಲೆಟ್‌ ಮತ್ತು ಇಲ್ಲಿಯವರಗೆ ಬಿಡುಗಡೆಯಾದ ಮೋಟರೋಲಾ ಸ್ಮಾರ್ಟ್‌‌ಫೋನ್‌ಲ್ಲಿ ಶುದ್ಧವಾದ ಆಂಡ್ರಾಯ್ಡ್‌ಓಎಸ್‌ ಇರುವುದರಿಂದ ಆಗುವ ಇನ್ನೊಂದು ಲಾಭ ಬೇಗನೇ ಓಎಸ್‌ ಅಪ್‌ಡೇಟ್‌ ಮಾಡಬಹುದಾಗಿದೆ. ಹೀಗಾಗಿಯೇ ಮೋಟೋ ಜಿ ಭಾರತದಲ್ಲಿ ಬಿಡುಗಡೆಯಾದ ತಕ್ಷಣ ಕಿಟ್‌ಕ್ಯಾಟ್‌ ಓಎಸ್‌ ಅಪ್‌ಗ್ರೇಡ್‌ ಆಗುತ್ತಿದೆ.

5

5


ಬಿಡುಗಡೆಯಾದ ವರ್ಷ 2010(ಜನವರಿ)

6

6


ಬಿಡುಗಡೆಯಾದ ವರ್ಷ‌ 2010(ಡಿಸೆಂಬರ್‌)

7

7


ಬಿಡುಗಡೆಯಾದ ವರ್ಷ‌ 2011 (ಅಕ್ಟೋಬರ್‌)

8

8


ಬಿಡುಗಡೆಯಾದ ವರ್ಷ‌ 2012(ಅಕ್ಟೋಬರ್‌)

9

9


ಬಿಡುಗಡೆಯಾದ ವರ್ಷ‌ 2013(ಅಕ್ಟೋಬರ್‌)

10

10


ನೆಕ್ಸಸ್‌ ಸ್ಮಾರ್ಟ್‌‌ಫೋನ್‌ಗಳ ಗಾತ್ರ

11

11


ಹಾರ್ಡ್‌ವೇರ್‌ ವಿಶೇಷತೆ

ಇನ್‌ಫೋಗ್ರಾಫಿಕ್‌ ಕೃಪೆ:visual.ly

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X