ಹೊಸ ಕಾಂಡೋಮ್‌ ಬಗ್ಗೆ ಐಡಿಯಾ ಹೇಳಿ, 55 ಲಕ್ಷಬಹುಮಾನ ಗೆಲ್ಲಿ

Posted By:

ಹೊಸ ಯುಗದ ಕಾಂಡೋಮ್‌ ಬಗ್ಗೆ ನಿಮ್ಮಲ್ಲಿ ಏನಾದ್ರೂ ಐಡಿಯಾ ಇದೆಯಾ? ಆ ಐಡಿಯಾ ಸದ್ಯ ಈಗ ಇರುವ ಕಾಂಡೋಮ್‌ಗಿಂತಲೂ ಸಖತ್‌ ಪವರ್‌ಪುಲ್‌ ಇದೆಯಾ ? ಒಂದು ವೇಳೆ ಪವರ್‌ಫುಲ್‌ ಇದ್ರೆ ಈವಾಗ್ಲೇ ನಿಮ್ಮ ಐಡಿಯಾವನ್ನು ಬಿಲ್‌ಗೇಟ್ಸ್‌ ಫೌಂಡೇಶನ್‌ಗೆ ಕಳುಹಿಸಿ 55 ಲಕ್ಷ ರೂ. ಬಹುಮಾನ ಗೆಲ್ಲಿ.

ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಜಗತ್ತಿನ ಬಡ ರಾಷ್ಟಗಳ ಅಭಿವೃದ್ಧಿಗೆ ಮುಂದಾಗಿರುವ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಫೌಂಡೇಶನ್‌ ಇದೀಗ, ಹೊಸ ಯುಗದ ಕಾಂಡೋಮ್‌ ಆವಿಷ್ಕಾರಕ್ಕೆ ಭಾರೀ ಬಹುಮಾನ ಘೋಷಿಸಿದೆ.

ಹೊಸ ಕಾಂಡೋಮ್‌ ಬಗ್ಗೆ ಐಡಿಯಾ ಹೇಳಿ, 55 ಲಕ್ಷಬಹುಮಾನ ಗೆಲ್ಲಿ

ಹೀಗಾಗಿ ಫೌಂಡೇಶನ್‌ ಕಡಿಮೆ ದರದ, ಬಳಸಲು ಹೆಚ್ಚು ಸುಲಭವಾಗಿರುವ,ಲೈಂಗಿಕ ತೃಪ್ತಿಯನ್ನು ಹೆಚ್ಚಿಸುವ ತೀರ್ಮಾನಕ್ಕೆ ಗೇಟ್ಸ್‌ ಫೌಂಡೇಶನ್‌ ಬಂದಿದ್ದು, ವಿದ್ಯಾರ್ಥಿಗಳು,ವಿಜ್ಞಾನಿಗಳು ತಮ್ಮ ಐಡಿಯಾಗಳ ಪ್ರಬಂಧ ರೂಪದಲ್ಲಿ ಬರೆದು ಆನ್‌ಲೈನ್‌ಲ್ಲಿ ಕಳುಹಿಸಿಕೊಡಿ ಎಂದು ಫೌಂಡೇಶನ್‌ ವಿನಂತಿಸಿದೆ.

ಒಂದು ವೇಳೆ ಐಡಿಯಾ ತಜ್ಞರಿಗೆ ಮೆಚ್ಚುಗೆಯಾದ್ರೆ , ಕಾಂಡೋಮ್‌ ಉತ್ಪಾದನೆಗಾಗಿ 55ಲಕ್ಷ ರೂಪಾಯಿ ಅನುದಾನವನ್ನು ಫೌಂಢೇಶನ್ ನೀಡಲಿದೆ. ಇಷ್ಟೇ ಅಲ್ಲದೇ ಈ ಯೋಜನೆಗೆ ಇನ್ನು ಅಗತ್ಯವಿದ್ದರೇ 5.5 ಕೋಟಿ.ರೂವರಗೆ ಅನುದಾನ ನೀಡುತ್ತೇವೆ ಎಂದು ಹೇಳಿದೆ.

ಯಾಕೆ ಬಹುಮಾನ ?
ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡರಾಷ್ಟ್ರಗಳಲ್ಲಿ ಲೈಂಗಿಕ ರೋಗ ಮತ್ತು ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಗರ್ಭನಿರೋಧಕ ಮತ್ತು ಕಾಂಡೋಮ್‌ ಬಳಕೆ ಮಾಡದೇ ಇರುವುದೇ ಇವುಗಳು ಹೆಚ್ಚಾಗಲು ಪ್ರಮುಖ ಕಾರಣ. ಕಾಂಡೋಮ್‌ ಧರಿಸದೇ ನಡೆಸುವ ಲೈಂಗಿಕ ಕ್ರಿಯೆ ನೀಡುವ ತೃಪ್ತಿಯು ಕಾಂಡೋಮ್‌ ಹಾಕಿಕೊಂಡು ನಡೆಸುವ ಕ್ರಿಯೆಯಿಂದ ಸಿಗದು ಎನ್ನುವ ಕಲ್ಪನೆ ಬಹಳಷ್ಟು ಜನರಲ್ಲಿದೆ.

ಇನ್ನು ಮಹಿಳೆಯರ ಬಳಸುವ ಕಾಂಡೋಮ್‌ಗಳು ದುಬಾರಿಯಾಗಿರುವ ಜೊತೆ ಅವುಗಳನ್ನು ಬಳಸುವ ಬಗ್ಗೆಯೇ ಬಹಳಷ್ಟು ಜನರಿಗೆ ಅರಿವೇ ಇಲ್ಲ. ಇಂತಹ ಕಾರಣಗಳಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ರಾಷ್ಟ್ರಗಳಲ್ಲಿ ಕಾಂಡೋಮ್‌ ಬಳಕೆ ಪ್ರಮಾಣ ಬಹಳಷ್ಟು ಕುಸಿದಿರುವ ಹಿನ್ನೆಲೆಯಲ್ಲಿ ಫೌಂಡೇಶನ್‌ ಈ ನಿರ್ಧಾರಕ್ಕೆ ಬಂದಿದೆ.

ಲಿಂಕ್ : ಫೇಸ್‌ಬುಕ್‌ನಲ್ಲಿ ಏನು ಶೇರ್‌ ಮಾಡಬೇಕು ಏನು ಶೇರ್ ಮಾಡಬಾರದು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot