iphoneನಲ್ಲಿ ಲೈಬ್ರರಿ ನೋಟಿಫಿಕೇಶನ್ ಬ್ಯಾಡ್ಜ್‌ಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

|

ಜನಪ್ರಿಯ ಆಪಲ್ ಸಂಸ್ಥೆಯು ಇತ್ತೀಚಿಗಷ್ಟೆ ಐಫೋನ್ ಐಒಎಸ್ 14 ಅಪರೇಟಿಂಗ್ ಸಿಸ್ಟಮ್ ಅನಾವರಣ ಮಾಡಿದೆ. ಆಪಲ್‌ ತನ್ನ ಹೊಸ ಐಒಎಸ್ 14 ನವೀಕರಣದೊಂದಿಗೆ ಹೊಸ ಅಪ್ಲಿಕೇಶನ್ ಲೈಬ್ರರಿ ಫೀಚರ್ಸ್‌ಅನ್ನು ಪರಿಚಯಿಸಿತು. ಇದು ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಸಂಘಟಿಸಲು ಈ ಫೀಚರ್ಸ್‌ ಅನ್ನು ಬಳಸುತ್ತಿದ್ದರೆ, ಅಧಿಸೂಚನೆ ಬ್ಯಾಡ್ಜ್‌ಗಳನ್ನು ಸಹ ಕಾಣಬಹುದಾಗಿದೆ. ಇನ್ನು ನೀವು ಅಪ್ಲಿಕೇಶನ್ ಲೈಬ್ರರಿಗಾಗಿ ನೊಟೀಫೀಕೇಷನ್‌ ಬ್ಯಾಡ್ಜ್‌ಗಳನ್ನು ಸಕ್ರಿಯಗೊಳಿಸಿದಾಗ, ಬಾಕಿ ಇರುವ ಅಧಿಸೂಚನೆಗಳಿಗೆ ಫೋಲ್ಡರ್‌ನ ಅಪ್ಲಿಕೇಶನ್ ಐಕಾನ್ ಮೇಲೆ ಬಬಲ್ ಅನ್ನು ಕಾಣಬಹುದಾಗಿದೆ.

ಆಪಲ್

ಹೌದು, ಆಪಲ್‌ ಸಂಸ್ಥೆ ಐಒಎಸ್ 14 ಅಪರೇಟಿಂಗ್ ಸಿಸ್ಟಮ್ ಅನ್ನು ಪರಿಚಯಿಸಿದ ನಂತರ ಐಫೋನ್‌ನಲ್ಲಿ ಸಾಕಷ್ಟು ಬದಲಾವನೆಗಳನ್ನ ಕಾಣಬಹುದಾಗಿದೆ. ಇದರಲ್ಲಿ ನೋಟೀಫಿಕೇಷನ್‌ ಬ್ಯಾಡ್ಜ್‌ಗಳು ಕುಡ ಒಂದಾಗಿದೆ. ಇದು ಐಫೋನ್‌ನಲ್ಲಿ ಲಭ್ಯವಿರುವುದರಿಂದ ನೀವು ಓದದ 100 ಇಮೇಲ್‌ಗಳನ್ನು ಹೊಂದಿದ್ದರೆ, ಅದು ಅಪ್ಲಿಕೇಶನ್ ಐಕಾನ್ ಅಥವಾ ಫೋಲ್ಡರ್ ಒಳಗೆ ಅಪ್ಲಿಕೇಶನ್ ಇರಿಸಿದ್ದರೆ ಫೋಲ್ಡರ್ ಮೇಲೆ "100" ಎಂಬ ಸಂಖ್ಯೆಯ ಎಣಿಕೆಯನ್ನು ತೋರಿಸುತ್ತದೆ. ಇದು ನೊಟೀಫಿಕೇಷನ್‌ ಮಾದರಿಯಲ್ಲಿ ಬರುವುದರಿಂದ ಈ ನೋಟಿಫಿಕೇಶನ್ ಕಿರಿಕಿರಿ ತಪ್ಪಿಸಿಕೊಳ್ಳಲು ನಿಮಗೆ ಅವಕಾಶ ಕೂಡ ಇದೆ. ಅದು ಹೇಗೆ ಮಾಡುವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೈಬ್ರರಿ

ಲೈಬ್ರರಿ

ಆಪ್ ಲೈಬ್ರರಿ ಫೋನಿನಲ್ಲಿ ಒಂದೇ ರೀತಿಯ ಅಪ್ಲಿಕೇಶನ್‌ಗಳ ಗುಂಪುಗಳಂತೆ ವರ್ತಿಸುವ ಅಪ್ಲಿಕೇಶನ್ ಲೈಬ್ರರಿ ಅನ್ನು ಓಎಸ್14 ಒದಗಿಸಿದೆ. ಸಲಹೆಗಳು ಹಾಗೂ ಇತ್ತೀಚಿಗೆ ಸೇರಿಸಲಾದ ಆಪ್ಸ್‌ಗಳ ಸಂಗ್ರಹಕ್ಕೆ AI ಬಳಕೆ ಮಾಡಲಾಗುತ್ತದೆ. ಆಪ್ಸ್‌ ಹುಡುಕಾಟ ಪ್ರಕ್ರಿಯೆಯು ಸುಲಭವಾಗಿರಲಿದೆ. ಇದರಲ್ಲಿ ನೋಟೀಫಿಕೇಷನ್‌ ಅನ್ನು ಸಹ ನೀಡಲಾಗಿದೆ. ನೀವು ಐಒಎಸ್ 14 ಅನ್ನು ಚಲಾಯಿಸುತ್ತಿದ್ದರೆ ನಿಮ್ಮ ಐಫೋನ್‌ನಲ್ಲಿನ ಅಧಿಸೂಚನೆ ಬ್ಯಾಡ್ಜ್‌ಗಳನ್ನು ಸುಲಭವಾಗಿ ನಿಷ್ಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಸಿಕೊಡ್ತಿವಿ ಓದಿರಿ.

ಆಪಲ್‌ನ ಅಪ್ಲಿಕೇಶನ್ ಲೈಬ್ರರಿ ನೋಟಿಫಿಕೇಶನ್ ಬ್ಯಾಡ್ಜ್‌ಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ

ಆಪಲ್‌ನ ಅಪ್ಲಿಕೇಶನ್ ಲೈಬ್ರರಿ ನೋಟಿಫಿಕೇಶನ್ ಬ್ಯಾಡ್ಜ್‌ಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ

ಹಂತ 1: ಮೊದಲನೆಯದಾಗಿ, ನಿಮ್ಮ ಐಫೋನ್‌ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಹೋಮ್ ಸ್ಕ್ರೀನ್" ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 3: ಈಗ, "Show In App Library" ಆಯ್ಕೆಗಾಗಿ ಟಾಗಲ್ ಬಟನ್ ಅನ್ನು ಹುಡುಕಿ. ಅಧಿಸೂಚನೆ ಬ್ಯಾಡ್ಜ್‌ಗಳನ್ನು ನಿಷ್ಕ್ರಿಯಗೊಳಿಸಲು, ಆಯ್ಕೆಯನ್ನು ಟಾಗಲ್ ಮಾಡಿ.

Best Mobiles in India

Read more about:
English summary
how to easily disable the notification badges on your iPhone if you are running iOS 14.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X