ಮಣಿಪಾಲ ವಿದ್ಯಾರ್ಥಿ‌ ನೋಕಿಯಾ ಸಿಇಒ?

Posted By:

ಮಣಿಪಾಲದಲ್ಲಿ ಓದಿದ್ದ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌‌ನ ಸಿಇಒ ಆಗಿ ಆಯ್ಕೆಯಾದ ಬೆನ್ನಲ್ಲೆ, ನೋಕಿಯಾ ಕಂಪನಿಯ ನೂತನ ಸಿಇಒ ಆಗಿ ಮತ್ತೊಬ್ಬ ಮಣಿಪಾಲದ ಎಂಜಿನಿಯರಿಂಗ್‌ ವಿದ್ಯಾರ್ಥಿ ನೇಮಕವಾಗುವ ಸಾಧ್ಯತೆ ಇದೆ.

ಎಂಐಟಿ ಮಣಿಪಾಲ್‌ನಲ್ಲಿ ಇಲೆಕ್ಟ್ರಾನಿಕ್ಸ್‌ ಆ್ಯಂಡ್‌ ಟೆಲಿಕಮ್ಯುನಿಕೇಷನ್ಸ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದ ರಾಜೀವ್‌ ಸೂರಿ ಸಿಇಒ ಆಗಲಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ನೋಕಿಯಾ ಮೈಕ್ರೋಸಾಫ್ಟ್‌‌ ಖರೀದಿ ಒಪ್ಪಂದ ಇದೇ ಮಾರ್ಚ್‌ ಅಂತ್ಯಕ್ಕೆ ಅಂತ್ಯಗೊಳ್ಳಲಿದ್ದು ಆ ಬಳಿಕ ಹಾಲಿ ನೋಕಿಯಾ ಸಿಇಒ ಆಗಿರುವ ಸ್ಟೀಫ‌ನ್‌ ಇಲೋಪ್‌ ಉತ್ತರಾಧಿಕಾರಿಯಾಗಿ ಮೈಕ್ರೋಸಾಫ್ಟ್‌ ನೋಕಿಯಾ ಕಂಪೆನಿಗಳು ರಾಜೀವ್‌ ಸೂರಿ ಅವರನ್ನು ಆಯ್ಕೆಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಣಿಪಾಲ ವಿದ್ಯಾರ್ಥಿ‌ ನೋಕಿಯಾ ಸಿಇಒ?

ರಾಜೀವ್‌ ಸೂರಿ ಸದ್ಯ ಯಂತ್ರೋಪಕರಣದ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವ‌ಹಿಸುತ್ತಿದ್ದು,ಈ ಹಿಂದೆ ನೋಕಿಯಾ ಸೊಲ್ಯುಷನ್‌ ಮತ್ತು ನೆಟ್‌ವರ್ಕ್ಸ್ (ಎಎಸ್‌ಎನ್‌) ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.ಈ ವಿಭಾಗವನ್ನು ಮುನ್ನಡೆಸಿ ನೋಕಿಯಾಗೆ ಲಾಭ ತಂದುಕೊಡುವಲ್ಲಿ ರಾಜೀವ್‌ ಸೂರಿ ಯಶಸ್ವಿಯಾಗಿದ್ದರು.

ನೋಕಿಯಾ ಕಂಪೆನಿಯಲ್ಲಿ19 ವರ್ಷ‌ಗಳಿಂದ ವಿವಿಧ ಹುದ್ದೆಗಳ ನಿರ್ವ‌ಹಿಸಿದ ರಾಜೀವ್‌ ಸೂರಿ,ನೋಕಿಯಾದ ಕೇಂದ್ರ ಕಚೇರಿ ಇರುವ ಫಿನ್ಲೆಂಡ್‌ನಲ್ಲಿ ಪತ್ನಿ ಎರಡು ಮಕ್ಕಳೊಂದಿಗೆ ನೆಲೆಸಿದ್ದಾರೆ.ಎಂಬಿಎ ಪದವಿಗಳಿಸದೇ ಕಾರ್ಪೋರೇಟ್‌ ಕಂಪೆನಿಯಲ್ಲಿ ಉನ್ನತ ಹುದ್ದೆಯನ್ನು ಏರಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ರಾಜೀವ್‌ ಸೂರಿ ಒಬ್ಬರು.

ಇದನ್ನೂ ಓದಿ: ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot