Home
ಸುದ್ದಿಜಾಲ

19 ರ ಭಾರತದ ಯುವಕನಿಂದ ಎಲೆಕ್ಟ್ರಾನಿಕ್‌ ಕಂಪನಿ ಹ್ಯಾಕ್: 60 ಲಕ್ಷ ನಷ್ಟ

By Suneel

ಕೇವಲ 19 ವರ್ಷದ ಹುಡುಗ, ಇಂಗ್ಲೀಷ್‌ ಅಷ್ಟೇನು ಬರೋದಿಲ್ಲ, ಆದ್ರೂ ಕೇವಲ ಈತ ಬಳಸುತ್ತಿದ್ದ ಸ್ಮಾರ್ಟ್‌ಫೋನ್‌ನಿಂದ ಹ್ಯಾಕಿಂಗ್‌ ಕಲೆಯನ್ನು ಕಲಿತುಕೊಂಡ. ಭಾರತದವನೇ ಆದ ಈ ಹುಡುಗ ಎಲೆಕ್ಟ್ರಿಕ್‌ ಕಂಪನಿಯೊಂದನ್ನು ಹ್ಯಾಕ್‌ ಮಾಡಿ ಸುಮಾರು 60 ಲಕ್ಷದಷ್ಟು ಹಣವನ್ನು ಕಂಪನಿಗೆ ನಷ್ಟಗೊಳಿಸಿದ್ದಾನೆ. ಜನರಿಗೆ ಉಚಿತ ಟೆಲಿಫೋನ್‌ ಕರೆ ಮಾಡುವಂತೆ ಹೇಳಿ ಕಂಪನಿಯನ್ನು ಹ್ಯಾಕ್‌ ಮಾಡಿದ್ದಾನೆ. ನಂತರದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾನೆ. ಆದರೆ ಈತ ಕಂಪನಿಯನ್ನು ಹ್ಯಾಕ್‌ ಮಾಡಿದ್ದು ಹೇಗೆ, ಎಂಬ ಮಾಹಿತಿ ಮಾತ್ರ ತುಂಬ ಕುತೂಹಲಕಾರಿಯಾಗಿದೆ. ಅದು ಹೇಗೆ ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಪ್ರಪಂಚದ ಟಾಪ್‌ 10 ಅಪಾಯಕಾರಿ ಹ್ಯಾಕರ್‌ಗಳು ಯಾರು ಗೊತ್ತೇ?

1

1

ಯುವಕನ ಹೆಸರು ಹಿಮಾಲಯ ಮೊಹಾಂತಿ. ಈತ ಓರಿಸ್ಸಾದ ಬಾಲಸೋರ್ ಜಿಲ್ಲೆಯ ಶಿವಪುರ ಗ್ರಾಮದ ನಿವಾಸಿಯಾಗಿದ್ದು ತನ್ನ 3 ಇಂಚಿನ ಸ್ಮಾರ್ಟ್‌ಫೋನ್‌ನಿಂದ "ಲಾಯ್ಡ್ ಎಲೆಕ್ಟ್ರಿಕಲ್ಸ್ ಮತ್ತು ಎಂಜಿನಿಯರಿಂಗ್ ಲಿಮಿಟೆಡ್"ನ EPABX ಟೋಲ್ ಫ್ರೀ ಸಂಖ್ಯೆಯನ್ನು ಹ್ಯಾಕ್‌ ಮಾಡಿದ್ದಾನೆ. ನಂತರ ಲಾಯ್ಡ್‌ ಟಾಲ್‌ ಫ್ರೀ ಸಂಖ್ಯೆಯನ್ನು ಕೋಡ್‌ ಸಹಿತ ವೆಬ್‌ಸೈಟ್‌ಗೆ ಅಪ್‌ಲೊಡ್‌ ಮಾಡಿದ್ದಾನೆ. ಈತ ಅಪ್‌ಲೋಡ್‌ ಮಾಡಿದ ಟಾಲ್‌ ಫ್ರೀ ನಂಬರ್‌ ಉಚಿತ ಫೋನ್‌ ಕರೆ ಮಾಡಲು ಅವಕಾಶ ನೀಡಿದೆ.

2

2

ಮೊಹಾಂತಿ ಇಂಗ್ಲೀಷ್‌ನಲ್ಲಿ ಹೆಚ್ಚು ಪರಿಣಿತನಲ್ಲ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಐಟಿಐ ಕೋರ್ಸ್‌ ಮುಗಿಸಿದ್ದಾನೆ. ಈತ 'ಡಿಬೇಟ್ಸ್ ಆನ್‌ಲೈನ್‌"ಗೆ ಸೇರುವುದರ ಮೂಲಕ ಹ್ಯಾಕಿಂಗ್ ಕೌಶಲ್ಯ ಕಲಿತಿದ್ದಾನೆ. ವಿಶೇಷ ಅಂದ್ರೆ ತನ್ನ 3 ಇಂಚಿನ ಮೊಬೈಲ್‌ನಿಂದಲೇ ವೈಫೈ ರೂಟರ್‌, ಫೇಸ್‌ಬುಕ್‌, ಇಮೇಲ್‌ಗಳನ್ನು ಹ್ಯಾಕ್‌ ಮಾಡುವ ಸ್ಕಿಲ್‌ ಹೊಂದಿದ್ದಾನೆ.

3

3

"ಜನರು ಈತನನ್ನು ಫೋನ್‌ ಬಳಸಲು ಹೇಳಿದಾಗ, ಅವರ ಫೋನ್‌ಗೆ ಟ್ರೋಜನ್‌(ವೈರಸ್‌) ಕಳುಹಿಸುವ ಮೂಲಕ ಅವರ ಪತ್ರಿಯೊಂದು ಚಟುವಟಿಕೆಯನ್ನು ಹ್ಯಾಕ್‌ ಮಾಡುತ್ತಿದ್ದ. ಈ ಎಲ್ಲಾ ಚಟುವಟಿಕೆಗಳು ಯಾವುದೇ ಹಣವನ್ನು ಗಳಿಸದೇ ಮೊಹಾಂತಿಯಿಂದ ನಡೆದಿದೆ" ಎಂದು ಪೊಲೀಸರು ಹೇಳಿದ್ದಾರೆ.

4

4

"ಮೊಹಾಂತಿ ಲಾಯ್ಡ್‌ ಸಿಸ್ಟಮ್‌ ಹ್ಯಾಕ್‌ ಮಾಡುವ ಮೂಲಕ ಉಚಿತ ಕರೆ ಮಾಡುವ ಆಯ್ಕೆಯನ್ನು ಎನೇಬಲ್‌ ಮಾಡುತ್ತಿದ್ದ. ಈತ ಲಾಯ್ಡ್‌ ಲಿಂಕ್‌ ಅನ್ನು ಕೋಡ್‌ ಸಹಿತ ಅಪ್‌ಲೋಡ್ ಮಾಡಿದ್ದ, ಟಾಲ್‌ ಫ್ರೀ ನಂಬರ್‌ ಡಯಲ್‌ ಮಾಡಿದ ನಂತರ ಬಳಕೆದಾರರು ಎಂಟರ್‌ ಮಾಡಿದಾಗ ಅದೇ ನಂಬರ್‌ ಬಳಸಿ ಈತ ಕರೆ ಉಚಿತ ಕರೆ ಮಾಡುತ್ತಿದ್ದ" ಎಂದು ಸೈಬರ್‌ ಕ್ರೈಮ್‌ ಇನ್ಸ್‌ಪೆಕ್ಟರ್‌ ರಿಯಾಜುದ್ದಿನ್‌ STOI ಗೆ ಹೇಳಿದ್ದಾರೆ.

5

5

ಮೊಹಾಂತಿ ತನ್ನ ಕಡಿಮೆ ಇಂಗ್ಲೀಷ್‌ ಜ್ಞಾನದಿಂದ ಹ್ಯಾಕರ್‌ ವೇದಿಕೆ ಮತ್ತು ವೆಬ್‌ಸೈಟ್‌ಗಳಲ್ಲಿ ರಿಜಿಸ್ಟರ್‌ ಮಾಡಿಕೊಂಡಿದ್ದಾನೆ. ಅಲ್ಲದೇ ಆನ್‌ಲೈನ್‌ನಲ್ಲಿ ಭಾಷಾಂತರ ಸಾಫ್ಟ್‌ವೇರ್‌ ಮೂಲಕ ಚಾಟಿಂಗ್‌ ಸಹ ಮಾಡುತ್ತಾನೆ.

6

6

ನವೆಂಬರ್‌ ತಿಂಗಳಲ್ಲಿ ಲಾಯ್ಡ್‌ ಕಂಪನಿ 60 ಲಕ್ಷ ರೂಪಾಯಿ ಟೆಲಿಫೋನ್‌ ಬಿಲ್‌ ಅನ್ನು ಸ್ವೀಕರಿಸಿದೆ. ಆದರೆ ಲಾಯ್ಡ್‌ ಎಲೆಕ್ಟ್ರಾನಿಕ್‌ ಕಂಪನಿಯ ಪ್ರತಿ ತಿಂಗಳ ಸಾಮನ್ಯ ಟೆಲಿಫೋನ್‌ ಬಿಲ್‌ 1 ಲಕ್ಷ. ಮೊಹಾಂತಿ ಕೇವಲ ತನ್ನ ಹಳೆಯ 3 ಇಂಚಿನ ಸ್ಮಾರ್ಟ್‌ಫೋನ್‌ನಿಂದ ಕಂಪನಿ ಹ್ಯಾಕ್ ಮಾಡಿ 60 ಲಕ್ಷ ರೂಪಾಯಿ ನಷ್ಟಗೊಳಿಸಿದ್ದಾನೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Indian Teen Hacks Electrical Company, Causes Rs 60 lak Loss To The Company. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+