Subscribe to Gizbot

ಸರಕಾರೀ ಮಾಹಿತಿ ಕದಿಯುವ ಹ್ಯಾಕರ್‌ಗಳಿಗೆ ಕೈತುಂಬಾ ಹಣ

Written By:

ನಿಮ್ಮ ಇಂಟರ್ನೆಟ್‌ನ ಪ್ರತಿಯೊಂದು ಗೌಪ್ಯ ಮಾಹಿತಿಯೂ ಹೊರಬೀಳುವ ಸಾಧ್ಯತೆ ಇದ್ದು ಅದಕ್ಕಾಗಿ ಹ್ಯಾಕರ್‌ಗಳಿಗೆ ನಗದು ಬಹುಮಾನವನ್ನು ಐಎಸ್‌ಐಎಸ್ ಘೋಷಿಸುತ್ತಿದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಫೇಸ್‌ಬುಕ್ ಮತ್ತು ಟ್ವಿಟ್ಟರ್ ಅನ್ನು ಇದಕ್ಕಾಗಿ ಪ್ರಮುಖ ವೇದಿಕೆಯನ್ನಾಗಿ ಬಳಸಿಕೊಂಡು ಐಎಸ್‌ಐಎಸ್ ತನ್ನ ಕುಟಿಲ ಯೋಜನೆಯನ್ನು ರೂಪಿಸುತ್ತಿದೆ.

ಓದಿರಿ: ಭಾರತೀಯ ಸೇನೆಯ ಮೇಲೆ ಪಾಕಿಸ್ತಾನಿ ಹ್ಯಾಕರ್ ದಾಳಿ

ಹ್ಯಾಕರ್‌ಗಳಿಗಾಗಿ ಇದಕ್ಕೆ $10,000 ಅನ್ನು ನೀಡುವುದಾಗಿ ಸಂಸ್ಥೆ ಘೋಷಿಸಿದೆ. ಹ್ಯಾಕಿಂಗ್ ಸಮುದಾಯದಲ್ಲಿ ಈ ಮೊಬಲಗು ಹೆಚ್ಚು ಮೊತ್ತಾದ್ದಾಗಿದೆ ಎಂಬುದಾಗಿ ವರದಿ ತಿಳಿಸಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ಹೆಚ್ಚುವರಿ ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸರಕಾರೀ ಡೇಟಾ

ಹ್ಯಾಕರ್‌ಗಳೊಂದಿಗೆ ಸಂಪರ್ಕ

ನಿತ್ಯವೂ ಹ್ಯಾಕರ್‌ಗಳೊಂದಿಗೆ ಸಂಪರ್ಕದಲ್ಲಿರುವ ಆನ್‌ಲೈನ್ ಸಂಪರ್ಕದಾರಿಗಳಿದ್ದು ಇವರುಗಳು ನಿತ್ಯವೂ ಸಂಪರ್ಕದಲ್ಲಿರುತ್ತಾರೆ. ಕಳೆದ ಅರು ತಿಂಗಳಿನಿಂದ, ಸರಕಾರೀ ಡೇಟಾವನ್ನು ಕದಿಯುತ್ತಿರುವಾಗಿ ಮಾಹಿತಿ ದೊರಕಿದ್ದು ಇದಕ್ಕಾಗಿ ಅವರಿಗೆ ಹೆಚ್ಚಿನ ಮೊಬಲಗನ್ನು ಕೂಡ ನೀಡಲಾಗುತ್ತಿದೆ.

ಮುಖ್ಯ ಯೋಜನೆ

ಐಎಸ್‌ಐಎಸ್

ಪ್ರತೀ ದೇಶದಲ್ಲಿರುವ ಹ್ಯಾಕರ್‌ಗಳಿಗೆ ಐಎಸ್‌ಐಎಸ್ ಹಣವನ್ನು ಇದಕ್ಕಾಗಿ ನೀಡುತ್ತಿದೆ ಎಂಬುದಾಗಿ ಮೂಲಗಳು ತಿಳಿಸಿದೆ. ಸೈಬರ್ ಕ್ರೈಮ್ ಪರಿಣಿತರು ಹೆಚ್ಚಿನ ಭದ್ರತಾ ಏಜೆನ್ಸಿಗಳೊಂದಿಗೆ ಈ ಸಲುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರೀ ದಾಖಲೆಗಳನ್ನು ಕದಿಯುವುದು ಐಎಸ್‌ಐಎಸ್ ಮುಖ್ಯ ಯೋಜನೆಯಾಗಿದೆ.

ಪ್ರಮುಖ ಆಯುಧ

ಸಾಮಾಜಿಕ ತಾಣ

ಸಾಮಾಜಿಕ ತಾಣವನ್ನು ತನ್ನ ಪ್ರಮುಖ ಆಯುಧವನ್ನಾಗಿ ಬಳಸಿಕೊಂಡು ಯುವಜನಾಂಗವನ್ನು ಲಕ್ಷ್ಯವಾಗಿರಿಸಿಕೊಂಡಿದೆ. ಹೆಚ್ಚಿನ ಹ್ಯಾಕರ್‌ಗಳು ಐಎಸ್‌ಐಎಸ್ ನೀಡುತ್ತಿರುವ ಮೊತ್ತವನ್ನು ಸ್ವೀಕರಿಸುತ್ತಿದ್ದು ನಿಯೋಜಿತ ಹ್ಯಾಕರ್‌ಗಳು ಸ್ಕೈಪ್, ಸೈಲೆಂಟ್ ಸರ್ಕಲ್, ಟೆಲಿಗ್ರಾಮ್, ವಾಟ್ಸಾಪ್ ಅನ್ನು ಬಳಸುತ್ತಿದ್ದಾರೆ.

ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ತಾಣ

ಹ್ಯಾಕರ್‌ಗಳ ದಾಳಿ

ಕಳೆದ ಕೆಲವು ತಿಂಗಳಿನಿಂದ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ತಾಣಗಳು ಹ್ಯಾಕರ್‌ಗಳ ದಾಳಿಗೆ ತುತ್ತಾಗುತ್ತಿವೆ. ಭಾರತದ ದಕ್ಷಿಣ ಭಾಗ, ಮಹಾರಾಷ್ಟ್ರ, ರಾಜಸ್ಥಾನ, ಕಾಶ್ಮೀರದಲ್ಲಿ ಇಂತಹ ಬಳಕೆದಾರರು ಕಂಡುಬಂದಿದ್ದಾರೆ.

ಬೇರೆ ಬೇರೆ ಭಾಷೆ ಬಳಸಿ

ನಿಯೋಜಿತ ಹ್ಯಾಕರ್‌

ನಿಯೋಜಿತ ಹ್ಯಾಕರ್‌ಗಳು ಬೇರೆ ಬೇರೆ ಭಾಷೆಗಳನ್ನು ಬಳಸಿ ತಮ್ಮ ಪ್ರೇಕ್ಷಕರ ಸಂಪರ್ಕದಲ್ಲಿದ್ದುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಯುವಕರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ಗಣರಾಜ್ಯೋತ್ಸವದಂದು ದಾಳಿ ಮಾಡುವ ಯೋಜನೆ

12 ಶಂಕಿತರನ್ನು ಭದ್ರತಾ ಏಜೆನ್ಸಿ

ಸಿರಿಯಾದಲ್ಲಿರುವ ಐಎಸ್‌ಐಎಸ್ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದ 12 ಶಂಕಿತರನ್ನು ಭದ್ರತಾ ಏಜೆನ್ಸಿಗಳು ಬಂಧಿಸಿದ್ದಾರೆ. ಗಣರಾಜ್ಯೋತ್ಸವದಂದು ದಾಳಿ ಮಾಡುವ ಯೋಜನೆಯನ್ನು ಅವರಯ ಇಟ್ಟುಕೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ.

ವೀಡಿಯೊ

ಧಾರ್ಮಿಕ ಸಂವಾದ

ಕೆಲವು ಜನರು ಐಎಸ್‌ಐಎಸ್ ಸದಸ್ಯರನ್ನು ಸಾಮಾಜಿಕ ತಾಣಗಳ ಮೂಲಕ ಸಂಪರ್ಕಿಸುತ್ತಿದ್ದು ಧಾರ್ಮಿಕ ಸಂವಾದಗಳನ್ನು ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ ಅಂತೆಯೇ ಅವರನ್ನು ಬಂಧಿಸಿದ ನಂತರ ಅವರು ಹಂಚಿಕೊಂಡಿದ್ದರು ಎನ್ನಲಾದ ವೀಡಿಯೊಗಳು ದೊರಕಿವೆ.

ವಿಶಾಲ ಪ್ರೇಕ್ಷಕರ ಸಂಪರ್ಕ

ಜನಪ್ರಿಯ ಕೀವರ್ಡ್ಸ್ ಮತ್ತು ಹ್ಯಾಶ್‌ಟ್ಯಾಗ್‌

ತಮ್ಮ ಸಂದೇಶಗಳನ್ನು ಜನಪ್ರಿಯ ಕೀವರ್ಡ್ಸ್ ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಪಸರಿಸುತ್ತಿದ್ದು ಇದರಿಂದ ವಿಶಾಲ ಪ್ರೇಕ್ಷಕರ ಸಂಪರ್ಕದಲ್ಲಿರುವುದು ಇದವರಿಗೆ ಸಾಧ್ಯವಾಗುತ್ತಿದೆ ಎನ್ನಲಾಗಿದೆ.

ತನಿಖೆ ಆರಂಭ

ಭದ್ರತಾ ಏಜೆನ್ಸಿ

ಭದ್ರತಾ ಏಜೆನ್ಸಿಗಳು ಈಗಾಗಲೇ ತನಿಖೆಯನ್ನು ಆರಂಭಿಸಿದ್ದು ಇಂಟರ್ನೆಟ್‌ನಲ್ಲಿದ್ದ ಐಎಸ್‌ಐಎಸ್ ಮಾಹಿತಿಗಳನ್ನು ಪಡೆದುಕೊಂಡಿದೆ.

94 ವೆಬ್‌ಸೈಟ್‌ ಬ್ಲಾಕ್

ಐಎಸ್‌ಐಎಸ್ ಸಂಪರ್ಕ

ಐಎಸ್‌ಐಎಸ್ ಸಂಪರ್ಕದಲ್ಲಿತ್ತು ಎನ್ನಲಾದ 94 ವೆಬ್‌ಸೈಟ್‌ಗಳನ್ನು ಈಗಾಗಲೇ ಮಹಾರಾಷ್ಟ್ರ ಏಟಿಎಸ್ ಬ್ಲಾಕ್ ಮಾಡಿದೆ. ಅಂತೆಯೇ ಕೆಲವೊಂದು ಸೈಟ್‌ಗಳನ್ನು ಬ್ಯಾನ್ ಮಾಡಲಾಗಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಓದಿರಿ: ಬಜೆಟ್ ಬೆಲೆಯಲ್ಲಿ 3 ಜಿಬಿ RAM ಫೋನ್ಸ್
ಓದಿರಿ: ವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳು
ಓದಿರಿ: ಫೇಸ್‌ಬುಕ್ ಯಶಸ್ಸಿಗೆ ಈ ರಹಸ್ಯಗಳೇ ಕಾರಣ!!
ಓದಿರಿ: ಫೋನ್ ಸಂರಕ್ಷಣೆಗಾಗಿ 15 ವಿಧಾನಗಳು ಜಸ್ಟ್ ಟ್ರೈ ಮಾಡಿ!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
ISIS is willing to pay Indian hackers thousands of dollars to hack into government websites and gain access to sensitive documents.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot