ನಿಮ್ಮ ಜಿಮೇಲ್ ಖಾತೆ ಎಷ್ಟು ಸುರಕ್ಷಿತ ಬಲ್ಲಿರಾ?

By Suneel
|

ಬದಲಾದ ಸಂಧರ್ಭದಲ್ಲಿ ಇಂದು ಟೆಕ್ನಾಲಜಿಯನ್ನು ದುರ್ಬಳಕೆಗಾಗಿ ಬಳಸಲು ಮುಂದಾಗುತ್ತಿದ್ದಾರೆ. ಉದಾಹರಣೆಗೆ ಇಂದು ನೀವು ವಯಕ್ತಿಕ ಸಂವಹನಕ್ಕಾಗಿ ಬಳಸುವ ಜಿಮೇಲ್‌ ಖಾತೆಯನ್ನು ಹ್ಯಾಕ್ ಮಾಡುವಲ್ಲಿ ಕೆಲವು ನಿಪುಣರು ಮುಂದಾಗುತ್ತಿದ್ದಾರೆ. ಸಾಮಾನ್ಯವಾಗಿ ಖಾಸಗಿ ವಿಷಯಗಳನ್ನು, ಮಾಹಿತಿಗಳನ್ನು ಸಂವಹಿಸುವ ಜಿಮೇಲ್‌ ಖಾತೆಯನ್ನು ಎಲ್ಲರೂ ಸಹ ಸುರಕ್ಷಿತವಾಗಿ ನಿರ್ವಹಿಸಲೇ ಬೇಕು. ಹಾಗಾದರೆ ನಿರ್ವಹಿಸುವುದು ಹೇಗೆ ಎಂಬ ಸಂಶಯವನ್ನು ಗಿಜ್‌ಬಾಟ್‌ನ ಈ ಲೇಖನ ಓದಿ ತಿಳಿದುಕೊಳ್ಳಿ.

ಓದಿರಿ: ಗೂಗಲ್‌ನಿಂದ 1 TB ಸ್ಟೋರೇಜ್‌ ಉಚಿತವಾಗಿ ಪಡೆಯಿರಿ

ಗೂಗಲ್‌ 2 ಸ್ಟೆಪ್‌ ವೇರಿಫಿಕೇಶನ್

ಗೂಗಲ್‌ 2 ಸ್ಟೆಪ್‌ ವೇರಿಫಿಕೇಶನ್

ಗೂಗಲ್‌ನಿಂದ ಎರಡು ಬಾರಿ ಮೊಬೈಲ್‌ಗೆ ವೇರಿಫೀಕೇಶನ್‌ ಕೋಡ್‌ ಪಡೆದು ಸುರಕ್ಷತೆಗೊಳಿಸಿ.

ಗೂಗಲ್‌ ಸ್ಪಾಮ್‌ ಫೋಲ್ಡರ್‌ನಿಂದ ಹೊರಗಿರಿ.

ಗೂಗಲ್‌ ಸ್ಪಾಮ್‌ ಫೋಲ್ಡರ್‌ನಿಂದ ಹೊರಗಿರಿ.

ಕೆಲವು ಸ್ಪಾಮ್‌ ಇಮೇಲ್‌ಗಳನ್ನು ಕ್ಲಿಕ್‌ ಮಾಡದೇ ಹಾಗೆ ಬಿಡಿ ಅಥವಾ ಡಿಲೀಟ್‌ಮಾಡಿ. ಉದಾಹರಣೆಗೆ ಕೆಳಗಿನ ಟೈಟಲ್ ಹೊಂದಿರುವ ಇಮೇಲ್‌ಗಳಿಂದ ಎಚ್ಚರ ವಹಿಸಿ.
* your money is waiting
* get back to me
* if you don't read this now you'll hate yourself

ನಿಮ್ಮ ಪಾಸ್‌ವರ್ಡ್‌ ನೀಡದಿರಿ.

ನಿಮ್ಮ ಪಾಸ್‌ವರ್ಡ್‌ ನೀಡದಿರಿ.

ನಿಮ್ಮ ಖಾತೆ ರಚಿಸಿದ ನಂತರ ಯಾವಾಗಲಾದರೂ ಗೂಗಲ್‌ ವೆಬ್‌ ಪಾಸ್‌ವರ್ಡ್‌ ಕೇಳಿದರೂ ಸಹ ನೀಡದಿರಿ.
ಈ ಕೆಳಗಿನ ವೆಬ್‌ ವಿಳಾಸ ಹೊರತು ಪಡಿಸಿ ಬೇರೆ ಯಾವುದೇ ವೆಬ್‌ಗಳಿಗೂ ನಿಮ್ಮ ಪಾಸ್‌ವರ್ಡ್‌ ನೀಡದಿರಿ.
*http://www.gmail.com
*accounts.google.com/ServiceLogin

ಖಾತೆ ರಿಕವರಿ

ಖಾತೆ ರಿಕವರಿ

ನಿಮ್ಮ ಖಾತೆ ಸುರಕ್ಷಿತವಾಗಿಡಲು ಅಪ್‌ಡೇಟ್‌ ಮಾಡುತ್ತಿರಿ. ಅಲ್ಲದೇ ಪ್ರಸ್ತುತ ಮೊಬೈಲ್‌ ನಂಬರ್ ಬಳಕೆಯಲ್ಲಡಿ. ಕಾರಣ ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ಪ್ರವೇಶಿಸಿದಾಗ ರಕ್ಷಿಸಲು ಗೂಗಲ್‌ ನಿಮಗೆ ಖಾತೆ ಸುರಕ್ಷಿಸಲು ಸೆಕ್ಯುರಿಟಿ ಕೋಡ್‌ ಕಳುಹಿಸುತ್ತದೆ.

ಇಮೇಲ್‌ ವಿಳಾಸ ರಿಕವರಿ

ಇಮೇಲ್‌ ವಿಳಾಸ ರಿಕವರಿ

ನೀವು ಪಾಸ್‌ವರ್ಡ್ ಮರೆತಾಗ ಗೂಗಲ್‌ ಇಮೇಲ್‌ ವಿಳಾಸ ರಿಕವರಿ ಕೇಳುತ್ತದೆ. ಆದ್ದರಿಂದ ಇಮೇಲ್‌ ವಿಳಾಸ ರಿಕವರಿ ಅಪ್‌ಡೇಟ್‌ ಮುಖ್ಯವಾಗಿರುತ್ತದೆ.

ಸೆಕೆಂಡರಿ ಇಮೇಲ್‌ ವಿಳಾಸ.

ಸೆಕೆಂಡರಿ ಇಮೇಲ್‌ ವಿಳಾಸ.

ನಿಮ್ಮ ಇಮೇಲ್‌ ರಿಕವರಿಗಾಗಿ ಕೆಲವೊಮ್ಮೆ ಸೆಕೆಂಡರಿ ಇಮೇಲ್‌ ವಿಳಾಸ ನೀಡಿ ಜಿಮೇಲ್‌ಗೆ ಲಾಗಿನ್‌ ಆಗಬೇಕಿರುತ್ತದೆ. ಆದರೆ ನೀವು ಮೊದಲನೇ ಜಿಮೇಲ್‌ ವಿಳಾಸವನ್ನೇ ಮತ್ತೇ ನೀಡಿ.

ಸುರಕ್ಷತೆಯ ಸಂಪರ್ಕ ಬಳಸಿ.

ಸುರಕ್ಷತೆಯ ಸಂಪರ್ಕ ಬಳಸಿ.

ಜಿಮೇಲ್‌ ಸಂಪರ್ಕ ಸುರಕ್ಷಿತವಾಗಿಡಲು ಸೆಟ್ಟಿಂಗ್ಸ್>>ಜೆನೆರಲ್>>ಬ್ರೌಸರ್‌ ಕನೆಕ್ಷನ್‌ ನಲ್ಲಿ ವೆಬ್‌ ವಿಳಾಸದಲ್ಲಿ URL ಮೊದಲು HTTPS ಎಂದು ನೀಡಿ ಸೆಟ್‌ ಮಾಡಿ.

 ಸ್ಟ್ರಾಂಗ್ ಪಾಸ್‌ವರ್ಡ್‌

ಸ್ಟ್ರಾಂಗ್ ಪಾಸ್‌ವರ್ಡ್‌

ಡಿಕ್ಷನರಿಗಳಲ್ಲಿ ಇರಬಹುದಾದಂತಹ ಪದಗಳನ್ನು ಬಳಸದೇ ಸ್ಟ್ರಾಂಗ್ ಪಾಸ್‌ವರ್ಡ್‌ ಬಳಸಿ. ಅವುಗಳು ನಾನ್‌ ಸೆನ್ಸ್‌ ಪದಗಳಾಗಿದ್ದರು ಪರವಾಗಿಲ್ಲ.

ಇನ್‌ಕಾಗ್ನಿಟೋ

ಇನ್‌ಕಾಗ್ನಿಟೋ

ನೀವು ಪಬ್ಲಿಕ್‌ ಹಾಗೂ ಹೋಟೆಲ್‌ಗಳಲ್ಲಿ ನಿಮ್ಮ ಖಾತೆಯನ್ನು ಬಳಸಿದೇ ಆದಲ್ಲಿ ಬ್ರೌಸರ್‌ ಇತಿಹಾಸವನ್ನು ಡಿಲೀಟ್ ಮಾಡಿ. ಹೀಗೆ ಮಾಡದಿದ್ದರೇ ನಿಮ್ಮ ಖಾತೆಯ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಕಂಡುಹಿಡಿಯಬಹುದು ಮತ್ತು ನಿಮ್ಮ ಹಲವು ಮಾಹಿತಿಗಳನ್ನು ಕದಿಯಬಹುದು.

ಆಗಾಗ ಅಪ್‌ಡೇಟ್‌ ಮಾಡಿ

ಆಗಾಗ ಅಪ್‌ಡೇಟ್‌ ಮಾಡಿ

ನಿಮ್ಮ ಸಿಸ್ಟಮ್‌ಗಳನ್ನು ವೈರಸ್‌ಗಳಿಂದ ಸುರಕ್ಷತೆ ಗೊಳಿಸಿ ಆಗಾಗ ಅಪ್‌ಡೇಟ್‌ ಮಾಡಿ.

Best Mobiles in India

English summary
Protecting your Gmail account means you must activate some tools that Google offers, and you must increase your scam savvy intelligence in order to spot phishing scams. If you do both, you can have a very well protected Gmail account.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X