ಹೊಸ ಆಪಲ್ ಐಎಸ್ಓ 11 ನಲ್ಲಿ ಏನೇನು ಇರಲಿದೆ..? ಇಲ್ಲಿದೇ ವಿವರ..!!
ಆಪಲ್ ವಾರ್ಷಿಕ ಸಮಾವೇಶದಲ್ಲಿ ತನ್ನ ಹೊಸ ಆಪಲ್ ಐಎಸ್ಓ 11 ಬಗ್ಗೆ ವಿವರಗಳನ್ನು ನೀಡಿದೆ. ಇದು ಐಪ್ಯಾಡ್ ಮತ್ತು ಐಫೋನ್‌ಗಳಿಗೆ ದೊರೆಯಲಿದೆ.
ಆಪಲ್ ವಾರ್ಷಿಕ ಸಮಾವೇಶದಲ್ಲಿ ತನ್ನ ಹೊಸ ಆಪಲ್ ಐಎಸ್ಓ 11 ಬಗ್ಗೆ ವಿವರಗಳನ್ನು ನೀಡಿದೆ. ಇದು ಐಪ್ಯಾಡ್ ಮತ್ತು ಐಫೋನ್‌ಗಳಿಗೆ ದೊರೆಯಲಿದ್ದು, ತನ್ನ ಬಳಕೆದಾರರಿಗೆ ಯಾವಾಗಲು ಬೆಸ್ಟ್ ಅನ್ನು ನೀಡಿರುವ ಆಪಲ್ ಈ ಬಾರಿ ಅದನ್ನು ಮುಂದುವರೆಸಿಕೊಂಡು ಹೋಗಿದೆ ಎಂದರೆ ತಪ್ಪಾಗುವುದಿಲ್ಲ.

ಆಪಲ್ ಐಎಸ್ಓ 11ನಲ್ಲಿ ಹಲವಾರು ಬದಲಾವಣೆಯನ್ನು ಮಾಡಿದೆ. ಇದರಲ್ಲಿ ಸಿರಿ ಆಪ್‌ಡೇಟ್ ಆಗಿದೆ. ಬದಲಾಗಿರುವ ಸಿರಿ ಭಾಷೆಗಳನ್ನು ಟ್ರಾನ್ಸ್‌ಲೇಟ್ ಮಾಡಲಿದೆ. ಅಲ್ಲದೇ ಇನಟರ್ ಫೇಸ್ ನಲ್ಲಿ ವಿಷ್ಯೂಯಲ್ ಕಾಣಿಸಿಕೊಂಡಿದ್ದು ಸಾಕಷ್ಟು ಬದಲಾವಣೆಯನ್ನು ಕಂಡಿದ್ದು ಬಳಕೆದಾರರಿಗೆ ಉತ್ತಮ ಅನುಭವನ್ನು ನೀಡಲಿದೆ.
ಇದಲ್ಲದೇ ಆಪಲ್ ಐಎಸ್ಓ 11ನಲ್ಲಿ 'ಡು ನಾಟ್ ಡಿಸ್ಟರ್ಬ್ ವೆಲ್ ಡ್ರೈವಿಂಗ್' ಎನ್ನುವ ಹೊಸ ಆಯ್ಕೆಯನ್ನು ಹೊಂದಿರಲಿದೆ. ಅದಲ್ಲದೇ ಆಪಲ್ ಮ್ಯಾಪ್ ಸಹ ಅಪ್‌ಗ್ರೆಡ್ ಹೊಂದಿದೆ. ಮ್ಯಾಪ್ ನಲ್ಲಿ ರಸ್ತೆಯ ಸ್ಪೀಡ್ ಲಿಮಿಟ್ ಸಹ ತೋರಿಸಲಿದೆ. ಇದು ನಿಮ್ಮ ಡ್ರೈವಿಂಗ್ ಮಾದರಿಯನ್ನು ಬದಲಾಯಿಸಲಿದೆ.

ಈಗಾಗಲೇ ಆಂಡ್ರಾಯ್ಡ್ ಹೊಸ ಆಪ್‌ಡೇಟ್ ನಲ್ಲಿ ನೂತನ ಆಯ್ಕೆಗಳನ್ನು ನೀಡುತ್ತಿದ್ದು, ಅದಕ್ಕಿಂತ ಬೆಸ್ಟ್ ನೀಡಬೇಕು ಎನ್ನುವುದು ಆಪಲ್ ಗುರಿಯಾಗಿದೆ. ಈ ಹೊಸ ಬದಲಾವಣೆಗಳು ಆಪಲ್ ಬಳಕೆದಾರಿಗೆ ಉತ್ತಮ ಅನುಭವನ್ನು ನೀಡಲಿದೆ. ಈಗಾಗಲೇ ಹೊಸ ಐಪೋನ್ ಗಳನ್ನು ಮಾರುಕಟ್ಟೆಗೆ ಬಿಡಲು ತಯಾರಿ ನಡೆಸಿರುವ ಆಪಲ್ ಆದಕ್ಕಾಗಿಯೇ ತನ್ನ ಐಎಸ್ಓನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಂಡಿದೆ.


Click it and Unblock the Notifications