Subscribe to Gizbot

ಭಾರತದಲ್ಲಿ ತಯಾರಾಗುವ ಐಫೋನ್ ಬೆಲೆ ಕಡಿಮೆ ಇರಲಿದೆ: ಅದಕ್ಕೂ ಕಾರಣ ಇದೆ...!

Written By:

ಇದೇ ಮೊದಲ ಬಾರಿಗೆ ಮೆಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಸ್ಮಾರ್ಟ್‌ಫೋನ್ ಲೋಕದ ಅಧಿಪತಿ ಎಂದೇ ಕರೆಸಿಕೊಂಡಿರುವ ಆಪಲ್ ತನ್ನ ಐಫೋನ್‌ಗಳನ್ನು ಭಾರತದಲ್ಲಿಯೇ ತಯಾರಿಸಲು ಮುಂದಾಗಿದೆ. ಇದರಿಂದಾಗಿ ಭಾರತದಲ್ಲಿ ಐಫೋನ್ ಬೆಲೆಗಳು ಕಡಿಮೆ ಇರಲಿದೆ. ಆದರೆ ಕಾರಣ ಇದೊಂದೇ ಅಲ್ಲ.

ಭಾರತದಲ್ಲಿ ತಯಾರಾಗುವ ಐಫೋನ್ ಬೆಲೆ ಕಡಿಮೆ ಇರಲಿದೆ: ಅದಕ್ಕೂ ಕಾರಣ ಇದೆ...!

ಭಾರತದಲ್ಲಿ ನಿರ್ಮಾಣವಾಗುವ ಐಫೋನ್‌ಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಈಗಾಗಲೇ ಆಪಲ್ ಕೇಂದ್ರ ಸರಕಾರಕ್ಕೆ ಅರ್ಜಿಯನ್ನು ಸಲ್ಲಿಸಿದೆ. ಕೇಂದ್ರ ಸರಕಾರವು ಇದನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಐಫೋನ್ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬರಲಿದೆ.

ಆದರೆ ತೆರೆಗೆ ವಿನಾಯಿತಿಯನ್ನು ನೀಡಲು ಕೇಂದ್ರ ಸರಕಾರವೂ ಒಂದು ಷರತ್ತು ವಿಧಿಸಿದೆ. ಆಪಲ್ ಉದ್ಯೋಗ ಸೃಷ್ಟಿ ಮತ್ತು ಹೂಡಿಕೆಗೆ ಬದ್ಧವಾಗಿರಬೇಕು ಎಂದು ಕಂಪೆನಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಅಲ್ಲದೇ ಆಪಲ್ ಸೃಷ್ಟಿಸುವ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದೆ. ಒಂದು ವೇಳೆ ಆಪಲ್ ನೀಡುವ ಮಾಹಿತಿ ಸರಕಾರಕ್ಕೆ ತೃಪ್ತಿದಾಯಕವಾಗಿದ್ದರೇ ತೆರಿಗೆ ವಿನಾಯಿತಿ ದೊರೆಯಲಿದೆ.

ಭಾರತದಲ್ಲಿ ತಯಾರಾಗುವ ಐಫೋನ್ ಬೆಲೆ ಕಡಿಮೆ ಇರಲಿದೆ: ಅದಕ್ಕೂ ಕಾರಣ ಇದೆ...!

ಈಗಾಗಲೇ ಆಪಲ್ ಬೆಂಗಳೂರಿನಲ್ಲಿ ಘಟಕ ತೆರೆದಿದ್ದು, ಮೊದಲ ಹಂತದ ಐಫೋನ್ ತಯಾರಿಯನ್ನು ಈಗಾಗಲೇ ಆರಂಭಿಸಿದೆ ಎನ್ನಲಾಗಿದ್ದು, ಇಲ್ಲಿ ತಯಾರದ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಆಪಲ್ ತಯಾರಿ ನಡೆಸಿದ್ದು, ಈ ಬೆಳವಣಿಗೆಯಿಂದ ಐಫೋನ್ ಬೆಲೆಯಲ್ಲಿ ಭಾರೀ ವ್ಯತ್ಯಾಸವಾಗಲಿದೆ. ಒಮ್ಮೆ ತೆರಿಗೆ ವಿನಾಯಿತಿ ದೊರೆತರೆ ಸಾಮಾನ್ಯರ ಕೈನಲ್ಲಿಯೂ ಐಫೋನ್ ನೋಡಬಹುದಾಗಿದೆ.

Read more about:
English summary
India wants Apple Inc. to commit to investment and creation of jobs before it will consider the company’s plea for tax concessions for manufacturing iPhones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot