Subscribe to Gizbot

ಶೀಘ್ರವೇ ಭಾರತದಲ್ಲಿ ಆನ್ ಲೈನ್ ಸ್ಟೋರ್ ತೆರೆಯಲಿರುವ ಆಪಲ್: ಇದಕ್ಕೆ ಕಾರಣವೇನು ಗೊತ್ತಾ..?

By: Precilla Dias

ಸದ್ಯ ಭಾರತೀಯ ಮೊಬೈಲ್ ಮಾರುಕಟ್ಟೆ ತನ್ನ ವಿಸ್ತಾರ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳಿಗೆ ಚೀನಾವನ್ನು ಬಿಟ್ಟರೇ ಭಾರತವೇ ಅತೀ ದೊಡ್ಡ ಮಾರುಕಟ್ಟೆಯಾಗುತ್ತಿದೆ. ಹಾಗಾಗಿ ಹಲವು ಕಂಪನಿಗಳು ಭಾರತದಲ್ಲೇ ಮೊಬೈಲ್ ತಯಾರಿಕೆಯನ್ನು ಆರಂಭಿಸಿವೆ. ಇದೇ ಮಾದರಿಯಲ್ಲಿ ಆಪಲ್ ಸಹ ಭಾರತದಲ್ಲೇ ತಯಾರಿಕೆಯನ್ನು ಶುರು ಮಾಡಿದೆ.

ಶೀಘ್ರವೇ ಭಾರತದಲ್ಲಿ ಆನ್ ಲೈನ್ ಸ್ಟೋರ್ ತೆರೆಯಲಿರುವ ಆಪಲ್

ಭಾರತದಲ್ಲಿ ತಯಾರಿಕೆಯನ್ನು ಆರಂಭಿಸಿರುವ ಮಾದರಿಯಲ್ಲೇ ಭಾರತದಲ್ಲಿ ತನ್ನ ಫೋನ್ ಗಳನ್ನು ಮಾರಾಟ ಮಾಡಲು ಆನ್ ಲೈನ್ ಸ್ಟೋರ್ ತೆರೆಯಲು ಆಪಲ್ ಚಿಂತನೆ ನಡೆಸಿದ್ದು, ಶೀಘ್ರವೇ ಈ ಕಾರ್ಯವನ್ನು ನೆರವೇರಿಸಲಿದೆ ಎನ್ನಲಾಗಿದೆ. ಈಗಾಗಲೇ ಈ ಕಾರ್ಯ ಚಾಲುವಾಗಿದೆ.

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಆಪಲ್ ನಮ್ಮ ದೇಶದಲ್ಲಿ ಆನ್ ಲೈನ್ ಸ್ಟೋರ್ ಅನ್ನು ಈ ವರ್ಷದ ಅಂತ್ಯದ ವೇಳೆಗೆ ತೆರೆಯಲಿದ್ದು, ಭಾರತದಲ್ಲಿ ತಯಾರಾಗುವ ಐಫೋನ್ ಎಸ್ಈ ಫೋನನ್ನು ಮೊದಲಿಗೆ ಮಾರಾಟ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮಾತನಾಡಿರುವ ಆಪಲ್ ಇಂಡಿಯಾದ ಅಧಿಕಾರಿಯೊಬ್ಬರು, ಈಗಾಗಲೇ ಭಾರತದಲ್ಲಿ ಆನ್ ಲೈನ್ ಸ್ಟೋರ್ ಓಪನ್ ಮಾಡಲು ಭಾರತ ಸರಕಾರದೊಡನೆ ಮಾತುಕತೆ ಮುಗಿದಿದ್ದು, ಇದಕ್ಕಾಗಿ ಅನುಮತಿಯೂ ದೊರೆತಿದೆ. ಐಫೋನ್ ಎಸ್ಈ ತಯಾರಿಕೆ ಪೂರ್ಣವಾದ ನಂತರ ನಮ್ಮ ಸ್ಟೋರಿನಲ್ಲಿ ಮಾರಾಟ ಶುರುವಾಗಲಿದೆ ಎಂದಿದ್ದಾರೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಫೋನ್ ಗಳು ಆನ್ ಲೈನಿನಲ್ಲಿಯೇ ಹೆಚ್ಚು ಮಾರಾಟವಾಗುತ್ತಿದೆ. ಇದನ್ನು ನೋಡಿದರೆ ಆಪಲ್ ಹೆಚ್ಚು ಜನರನ್ನು ತಲುಪುವ ಸಲುವಾಗಿ ಆನ್ ಲೈನ್ ಮಾರುಕಟ್ಟೆಯ ಮೇಲೆ ಹೆಚ್ಚಿನ ಗಮನವನ್ನು ಹರಿಸಲಿದೆ. ಅಲ್ಲದೇ ಆನ್ ಲೈನಿನಲ್ಲಿ ಆರಂಭಿಕ ಬೆಲೆಯ ಸ್ಮಾರ್ಟ್ ಫೋನ್ ಗಳು ಹೆಚ್ಚು ಮಾರಾಟ ವಾಗುತ್ತಿರುವುದು ಇದಕ್ಕೆ ಕಾರಣ ಇರಬಹುದು.

ಏಕೆಂದರೆ ಸದ್ಯ ಆಪಲ್ ಬಿಡುಗಡೆ ಮಾಡುತ್ತಿರುವ ಐಫೋನ್ ಎಸ್ಈ ಸಹ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಇದನ್ನು ಹೆಚ್ಚಾಗಿ ಆನ್ ಲೈನಿನಲ್ಲೇ ಮಾರಾಟ ಮಾಡಲು ಆಪಲ್ ನಿರ್ಧರಿಸಿದಂತೆ ಕಾಣುತ್ತಿದೆ. ಇದರೊಂದಿಗೆ ಆರಂಭಿಕ ಕೊಡುಗೆಯೂ ದೊರೆಯಲಿದೆ.

ಈಗಾಗಲೇ ಆಪಲ್ ಭಾರತದಲ್ಲಿ ತನ್ನ ಐಫೋನ್ ಗಳನ್ನು ಜೋಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು ಇನ್ನೇರಡು ತಿಂಗಳಲ್ಲಿ ಈ ಫೋನ್ ಗಳು ತಯಾರಾಗಿ ಮಾರುಕಟ್ಟೆಯ್ಲಿ ಪ್ರವೇಶಿಸಲಿದೆ ಎನ್ನುವ ಮಾಹಿತಿಯೂ ಮೂಲಗಳಿಂದ ಲಭ್ಯವಾಗಿದೆ.

Read more about:
English summary
Apple is likely to launch its online store in the country by the end of this year. The company will sell iPhone SE initially. It is expected that the company will also sell some accessories which will be sourced from India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot