ನವೆಂಬರ್‌ನಲ್ಲಿ ಭಾರತದ ಮಾರುಕಟ್ಟೆಗೆ ಆಪಲ್‌ನ ಎರಡು ಐಫೋನ್‌ಗಳು
ಭಾರತದಲ್ಲಿರುವ ಆಪಲ್ ಅಭಿಮಾನಿಗಳಿಗೆ ಗುಡ್‌ನ್ಯೂಸ್. ಆಪಲ್‌ನ ದುಬಾರಿ ಬೆಲೆಯ ಐಫೋನ್ 5 ಎಸ್ ಮತ್ತು ಕಡಿಮೆ ಬೆಲೆಯ ಐಫೋನ್ 5 ಸಿ ಭಾರತದ ಮಾರುಕಟ್ಟೆಗೆ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಮಾಧ್ಯಮಗಳು ವರದಿ ಮಾಡಿರುವಂತೆ ನವೆಂಬರ್ ಒಂದರಂದು ಈ ಎರಡು ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಬಿಡುಗಡೆಯಾಗಿರುವ ದೇಶಗಳಲ್ಲಿ ಹಾಟ್ ಕೇಕ್‌ನಂತೆ ಖರೀದಿಯಾಗುತ್ತಿರುವ ಈ ಸ್ಮಾರ್ಟ್‌ಫೋನ್‌ಗಳು ಭಾರತದ ಗ್ರೇ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಪಲ್ ಈ ವರ್ಷದೊಳಗೆ ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗುತ್ತಿದೆ.
ಆಪಲ್ ಐಫೋನ್‌ಗಳ ದರವನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ ಐಫೋನ್ 5 ಎಸ್ ಬೆಲೆ 95,000 ರೂಪಾಯಿ, ಅಗ್ಗದ ಐಫೋನ್‌ಗೆ 40 ಸಾವಿರ ರೂಪಾಯಿ ನಿಗದಿ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಐಫೋನ್ 5 ಎಸ್
ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್ ಸ್ಕ್ರೀನ್(1136*640 ಪಿಕ್ಸೆಲ್,326 ppi)
ಐಓಎಸ್ 7
112 ಗ್ರಾಂ ತೂಕ
A7 ಪ್ರೊಸೆಸರ್ 64 ಬಿಟ್ ಅರ್ಕಿಟೆಕ್ಚರ್
M7 ಮೋಷನ್ ಪ್ರೊಸೆಸರ್
16/32/64GB ಆಂತರಿಕ ಮೆಮೋರಿ
ಜಿಪಿಎಸ್,ಗ್ಲೋನಾಸ್,ಡಿಜಿಟಲ್ ಕಂಪಾಸ್, ವೈಫೈ
ಸೆಲ್ಯೂಲರ್,ಬ್ಲೂಟೂತ್,ಸಿರಿ
8 ಎಂಪಿ ಐಸೈಟ್ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಐಫೋನ್ 5 ಸಿ
ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್ ಸ್ಕ್ರೀನ್(1136*640 ಪಿಕ್ಸೆಲ್,326 ppi)
ಐಓಎಸ್ 7
A6 ಪ್ರೊಸೆಸರ್
16/32GB ಆಂತರಿಕ ಮೆಮೋರಿ
ಜಿಪಿಎಸ್,ಗ್ಲೋನಾಸ್,ಡಿಜಿಟಲ್ ಕಂಪಾಸ್,
ವೈಫೈ,ಸೆಲ್ಯೂಲರ್,ಬ್ಲೂಟೂತ್,ಸಿರಿ
8 ಎಂಪಿ ಐಸೈಟ್ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಇದನ್ನೂ ಓದಿ: ಒಂದೇ ವಿಡಿಯೋದಲ್ಲಿ ಎಲ್ಲಾ ಐಫೋನ್‌ಗಳ ಕೆಲಸ ನೋಡಿ!


Click it and Unblock the Notifications