Home
ಸುದ್ದಿಜಾಲ

ಪೇಟೆಂಟ್‌ ವಿವಾದ:ಸ್ಯಾಮ್‌ಸಂಗ್‌ ಸಾಧನಗಳಿಗೆ ಅಮೆರಿಕದಲ್ಲಿ ನಿಷೇಧ ಇಲ್ಲ

By Ashwath

ಅಮೆರಿಕದಲ್ಲಿ ಈ ಹಿಂದೆ ಬಿಡುಗಡೆಯಾಗಿದ್ದ ಸ್ಯಾಮ್‌ಸಂಗ್‌ ಸಾಧನಗಳ ಮಾರಾಟವನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಆಪಲ್‌ ಸಲ್ಲಿಸಿದ್ದ ಅರ್ಜಿ‌ಯನ್ನು ಕ್ಯಾಲಿಪೋರ್ನಿ‌ಯಾ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.

ತಾನು ಅಭಿವೃದ್ಧಿ ಪಡಿಸಿದ್ದ ವಿಶೇಷತೆಗಳ ಮೇಲೆ ಪಡೆದಿದ್ದ ಪೇಟೆಂಟ್‌ನ್ನುಉಲ್ಲಂಘಿಸಿ,ಸ್ಯಾಮ್‌ಸಂಗ್‌ ತನ್ನ 23 ಸಾಧನಗಳಿಗೆ ಆ ವಿಶೇಷತೆಗಳನ್ನು ನೀಡಿದೆ.ತನ್ನ ಪೇಟೆಂಟ್‌ ಉಲ್ಲಂಘಿಸಿದ್ದಕ್ಕಾಗಿ ಸ್ಯಾಮ್‌ಸಂಗ್‌ ಕಂಪೆನಿಯ ಈ ಸಾಧನಗಳನ್ನು ಶಾಶ್ವತವಾಗಿ ಅಮೆರಿಕದಲ್ಲಿ ನಿಷೇಧಿಸಬೇಕು ಎಂದು ಆಪಲ್‌ ಕ್ಯಾಲಿಫೋರ್ನಿ‌ಯಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ಪೇಟೆಂಟ್‌ ಉಲ್ಲಂಘಿಸಿರುವ ಸಾಧನಗಳ ಖರೀದಿಗೆ ಗ್ರಾಹಕರಿಂದ ಬೇಡಿಕೆ ಇದೆ ಎಂದು ನಿರೂಪಿಸುವಲ್ಲಿ ಆಪಲ್‌ ವಿಫಲವಾಗಿದೆ.ಗ್ರಾಹಕರ ಬೇಡಿಕೆ ಬಗ್ಗೆ ಸರಿಯಾದ ಸಾಕ್ಷ್ಯಾಧಾರವಿಲ್ಲದ ಕಾರಣ ಈ ಸಾಧನಗಳ ‌ ಮಾರಾಟವನ್ನು ಅಮೆರಿಕದಲ್ಲಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಪೇಟೆಂಟ್‌ ಉಲ್ಲಂಘನೆ ಮಾಡಿದ ಕಾರಣಕ್ಕೆ ಸ್ಯಾಮ್‌ಸಂಗ್‌ಗೆ ಹೊಸದಾಗಿ ಕೋರ್ಟ್‌ 93 ಕೋಟಿ ಡಾಲರ್‌ ದಂಡವನ್ನು ವಿಧಿಸಿದ್ದಾರೆ.

ಪೇಟೆಂಟ್‌ ವಿವಾದ:ಸ್ಯಾಮ್‌ಸಂಗ್‌ ಸಾಧನಗಳಿಗೆ ಅಮೆರಿಕದಲ್ಲಿ ನಿಷೇಧ ಇಲ್ಲ

ಆಪಲ್‌ ಸ್ಯಾಮ್‌ಸಂಗ್‌ ಪೇಟೆಂಟ್‌ ವಿಚಾರವಾಗಿ ಕಳೆದ ಮೂರು ವರ್ಷ‌ಗಳಿಂದ ಕಾನೂನು ಸಮರ ನಡೆಸುತ್ತಿವೆ.ಆನ್‌ ಸ್ಕ್ರೀನ್‌ ನ್ಯಾವಿಗೇಶನ್‌,ಪಿಂಚ್‌ ಟು ಝೂಮ್‌,ಬೌನ್ಸ್‌ ಬ್ಯಾಕ್‌ ಎಫೆಕ್ಟ್‌‌ ಮತ್ತು ಐಫೋನ್‌ ಆನ್‌ ಸ್ಕ್ರೀನ್‌ ಐಕಾನ್‌ ವಿನ್ಯಾಸದ ಆಪಲ್‌ ಪೇಟೆಂಟ್‌ಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಕಳೆದ ನವೆಂಬರ್‌‌ನಲ್ಲಿ ಕೋರ್ಟ್‌ 29 ಕೋಟಿ ಡಾಲರ್‌ ದಂಡವನ್ನು ವಿಧಿಸಿತ್ತು.

ವಿಶ್ವದ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಸ್ಯಾಮ್‌ಸಂಗ್‌ ನಂಬರ್‌ ಒನ್‌ ಸ್ಥಾನದಲ್ಲಿದ್ದು ಆಪಲ್‌ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ‌ ಸ್ಯಾಮ್‌ಸಂಗ್ 31 ಕೋಟಿ ಸ್ಮಾರ್ಟ್‌ಫೋನ್‌ ಮಾರಾಟ ಮಾಡಿದ್ದರೆ,ಆಪಲ್‌ 15 ಕೋಟಿ ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿತ್ತು.

ಇದನ್ನೂ ಓದಿ: ಕ್ರಾಸ್‌ ಲೈಸೆನ್ಸ್‌ ಪೇಟೆಂಟ್‌ ಒಪ್ಪಂದಕ್ಕೆ ಗೂಗಲ್‌ ಸ್ಯಾಮ್‌ಸಂಗ್‌ ಸಹಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+