ಕ್ರಾಸ್‌ ಲೈಸೆನ್ಸ್‌ ಪೇಟೆಂಟ್‌ ಒಪ್ಪಂದಕ್ಕೆ ಗೂಗಲ್‌ ಸ್ಯಾಮ್‌ಸಂಗ್‌ ಸಹಿ

Posted By:

ವಿಶ್ವದ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಆಪಲ್‌ ಕಂಪೆನಿಯ ಪ್ರಭಾವ ತಗ್ಗಿಸಲು ಇಂಟರ್‌ನೆಟ್‌ ದಿಗ್ಗಜ ಗೂಗಲ್‌ ಮತ್ತು ಸ್ಮಾರ್ಟ್‌‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಜಂಟಿಯಾಗಿ ಕ್ರಾಸ್‌ ಲೈಸನ್ಸ್‌ ಪೇಟೆಂಟ್‌ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಕ್ರಾಸ್‌ ಲೈಸೆನ್ಸ್‌ ಪೇಟೆಂಟ್‌(ಹಕ್ಕುಸ್ವಾಮ್ಯ) ಒಪ್ಪಂದ ಯಾವ ಉತ್ಪನ್ನಗಳಿಗೆ ಅನ್ವಯವಾಗುತ್ತದೆ ಎನ್ನುವುದನ್ನು ಈ ಎರಡು ಕಂಪೆನಿಗಳು ಇನ್ನೂ ಸ್ಪಷ್ಟಪಡಿಸಿಲ್ಲ. ಈ ಕ್ರಾಸ್‌ ಲೈಸೆನ್ಸ್‌ ಪೇಟೆಂಟ್‌ ಹತ್ತು ವರ್ಷದ ಅವಧಿಯಾಗಿದ್ದು, ಟೆಕ್ನಾಲಜಿ ಮತ್ತು ಬುಸಿನೆಸ್‌ ಕ್ಷೇತ್ರ ಸಂಬಂಧಿಸಿದ ವಿಚಾರ ಕ್ರಾಸ್‌ ಲೈಸೆನ್ಸ್‌ ಪೇಟೆಂಟ್‌ನಲ್ಲಿದೆ ಎಂದು ಸ್ಯಾಮ್‌ಸಂಗ್‌ ಹೇಳಿದೆ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಸ್ಯಾಮ್‌ಸಂಗ್‌ ಮತ್ತು ಆಪಲ್‌ ಕಂಪೆನಿ ಗಳು ಪೇಟೆಂಟ್‌ ವಿಚಾರವಾಗಿ ಕಾನೂನು ಸಮರ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಈ ಪೇಟೆಂಟ್‌ ಸಮಸ್ಯೆ ಸೃಷ್ಟಿಯಾಗದಿರಲು ಸ್ಯಾಮ್‌ಸಂಗ್‌,ಗೂಗಲ್‌ ಜೊತೆಗೂಡಿ ಈ ಒಪ್ಪಂದ ನಡೆಸಿದೆ ಎನ್ನಲಾಗಿದೆ.

ಗೂಗಲ್‌ ಬಹಳಷ್ಟು ಕಂಪೆನಿಗಳನ್ನು ಖರೀದಿಸಿದ್ದು, ಈ ಕಂಪೆನಿಗಳು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನದ ಪೇಟೆಂಟ್‌ ಹಕ್ಕು‌ ಗೂಗಲ್‌ನಲ್ಲಿದೆ. ಸ್ಯಾಮ್‌ಸಂಗ್‌ ಈಗಾಗಲೇ ಗೃಹಬಳಕೆ ಸ್ಮಾರ್ಟ್‌ಫೋನ್‌ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಆ ಉತ್ಪನ್ನಗಳ ಪೇಟೆಂಟ್‌ ಸ್ಯಾಮ್‌ಸಂಗ್‌ನಲ್ಲಿದೆ. ಈ ಕಾರಣಕ್ಕಾಗಿ ಈ ಎರಡು ಕಂಪೆನಿಗಳು ತಂತ್ರಜ್ಞಾನವನ್ನು ಯಾವುದೇ ಸಮಸ್ಯೆ ಇಲ್ಲದೇ ಪರಸ್ಪರ ಬದಲಾಯಿಸಿ, ಮಾರುಕಟ್ಟೆಯಲ್ಲಿ ಆಪಲ್‌ ಪ್ರಾಬಲ್ಯವನ್ನು ಕಡಿಮೆ ಮಾಡಲು ಜಂಟಿಯಾಗಿ ಒಪ್ಪಂದಕ್ಕೆ ಈ ಕಂಪೆನಿಗಳು ಸಹಿ ಹಾಕಿದೆ ಎಂದು ಹೇಳಲಾಗುತ್ತಿದೆ.

 ಕ್ರಾಸ್‌ ಲೈಸೆನ್ಸ್‌ ಪೇಟೆಂಟ್‌ ಒಪ್ಪಂದಕ್ಕೆ ಗೂಗಲ್‌ ಸ್ಯಾಮ್‌ಸಂಗ್‌ ಸಹಿ

ಗೂಗಲ್‌ ಇತ್ತೀಚಿಗೆ ವೈಫೈ ಮೂಲಕ ನಿಯಂತ್ರಣ ಮಾಡಬಹುದಾದ ಥರ್ಮೋಸ್ಟಾಟ್‌ ಮತ್ತು ಹೊಗೆ ಗುರುತಿಸುವ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವ ನೆಸ್ಟ್‌ ಲ್ಯಾಬ್ಸ್‌ ಕಂಪೆನಿ ಖರೀದಿಸಿದೆ. ಸ್ಯಾಮ್‌ಸಂಗ್‌ ಈಗಾಗಲೇ ಗೃಹಪಯೋಗಿ ಉತ್ಪನ್ನಗಳನ್ನು ತಯಾರಿಸುತ್ತಿರುವ ಹಿನ್ನೆಲೆಯಲ್ಲಿ  ಮುಂದಿನ ದಿನಗಳಲ್ಲಿ ನೆಸ್ಟ್‌ ಲ್ಯಾಬ್ಸ್‌ ಕಂಪೆನಿಯ ತಂತ್ರಜ್ಞಾನ ಸ್ಯಾಮ್‌ಸಂಗ್‌ ಉತ್ಪನ್ನಗಳಲ್ಲಿ ಬಳಕೆಯಾಗುವ ಸಾಧ್ಯತೆಯಿದೆ ಕೆಲವೊಂದು ಮಧ್ಯಮಗಳು ವರದಿ ಮಾಡಿವೆ.

ಗೂಗಲ್‌ ಈ ಹಿಂದೆ ತಮ್ಮ ಉತ್ಪನ್ನವನ್ನು ತಯಾರಿಸಲು ಬೇರೆ ಬೇರೆ ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಬಿಡುಗಡೆಯಾದ ಪ್ರಥಮ ಸ್ಮಾರ್ಟ್‌ಫೋನ್ ನೆಕ್ಸಸ್‌ 5 ನ್ನು ಎಲ್‌ಜಿ ಕಂಪೆನಿ ತಯಾರಿಸಿದ್ದರೆ, ಗೂಗಲ್‌‌ ನೆಕ್ಸಸ್‌ 7 ಟ್ಯಾಬ್ಲೆಟ್‌‌ ಏಸಸ್‌‌ ಕಂಪೆನಿ ತಯಾರಿಸಿತ್ತು

ಇದನ್ನೂ ಓದಿ: ವಿಂಡೋಸ್‌ ಫೋನ್‌ ತಯಾರಿಸಲು ಮೈಕ್ರೋಸಾಫ್ಟ್‌‌ನಿಂದ ಧನ ಸಹಾಯ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot