ಭಾರತದಲ್ಲಿ ಲೆನೊವೊ ಲೀಜನ್‌ ಸರಣಿಯ 3 ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!

|

ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಕಂಪೆನಿ ಲೆನೊವೊ ತನ್ನ ಹೊಸ ಲೆನೊವೊ ಲೀಜನ್ 7I, ಲೀಜನ್ 5PI ಮತ್ತು ಲೀಜನ್ 5I ಲ್ಯಾಪ್‌ಟಾಪ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಲ್ಯಾಪ್‌ಟಾಪ್‌ಗಳು 10 ನೇ ತಲೆಮಾರಿನ ಇಂಟೆಲ್ ಕೋರ್ ಸಿಪಿಯು ಮತ್ತು ಎನ್‌ವಿಡಿಯಾ ಜೀಫೋರ್ಸ್ RTX GPU ಕಂಟ್ರೋಲ್‌ ಅನ್ನು ಹೊಂದಿವೆ. ಇನ್ನು ಲೆನೊವೊದ ಲೀಜನ್ ಶ್ರೇಣಿಯ ಲ್ಯಾಪ್‌ಟಾಪ್‌ಗಳು ಗೇಮಿಂಗ್ ಮತ್ತು productivityಯ ಕಡೆಗೆ ಹೆಚ್ಚಿನ ಗಮನ ನೀಡಿದ್ದು, ಈ ಸರಣಿಯ ಲ್ಯಾಪ್‌ಟಾಪ್‌ಗಳು ಹೆಚ್ಚಿನ ರಿಫ್ರೆಶ್ ರೇಟ್‌ ಡಿಸ್‌ಪ್ಲೇಯನ್ನು ಹೊಂದಿವೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ತನ್ನ ಲೀಜನ್‌ ಸರಣಿಯಲ್ಲಿ ಹೊಸ ಮಾದರಿಯ ಮೂರು ಲ್ಯಾಪ್‌ಟಾಪ್‌ಗಳನ್ನ ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ಗಳು ಹಿಂದಿನ ಪೀಳಿಗೆಯ ಮಾದರಿಗಳಿಗಿಂತ ಕೆಲವು ಹೊಸ ಆಪ್ಡೇಟ್‌ಗಳನ್ನು ಹೊಂದಿವೆ. ಅದರಲ್ಲೂ ವಿಶೇಷವಾಗಿ ಕೂಲಿಂಗ್ ಮತ್ತು ಕೀಬೋರ್ಡ್ ವಿಷಯದಲ್ಲಿ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿವೆ. ಇನ್ನು ಲೆನೊವೊ ಲೀಜನ್ 7I, ಲೀಜನ್ 5PI ಮತ್ತು ಲೀಜನ್ 5I ಅನ್ನು ಒಂದೇ ಕಲರ್‌ ಆಯ್ಕೆಯಲ್ಲಿ ಲಭ್ಯವಾಗಲಿವೆ. ಇನ್ನುಳಿದಂತೆ ಲೆನೊವೊ ಲೀಜನ್‌ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಲೆನೊವೊ ಲೀಜನ್ 7i

ಲೆನೊವೊ ಲೀಜನ್ 7i

ಲೆನೊವೊ ಲೀಜನ್ 7i ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್ 10 ಅನ್ನು ಪ್ರಿ-ಇನ್‌ಸ್ಟಾಲ್‌ ಮಾಡಲಾಗಿದೆ. ಇದು 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 15.6 ಇಂಚಿನ ಫುಲ್ ಹೆಚ್‌ಡಿ IPS ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 144Hz ವರೆಗಿನ ರಿಫ್ರೆಶ್ ರೇಟ್‌ಅನ್ನು ಹೊಂದಿದೆ. ಜೊತೆಗೆ ಇದು 300 ನಿಟ್ಸ್ ಮತ್ತು 500 ನಿಟ್ಸ್ ಗರಿಷ್ಠ ಬ್ರೈಟ್‌ನೆಶ್‌ ಆಯ್ಕೆಯನ್ನು ಹೊಂದಿದೆ. ಇದಲ್ಲದೆ 1MS ರೆಸ್ಪಾನ್ಸ್‌ ಟೈಂ ಅನ್ನು ಒಳಗೊಂಡ ಸ್ಕ್ರೀನ್ ಅನ್ನು ಹೊಂದಿದೆ. ಇನ್ನು ಲೀಜನ್ 7i 10 ನೇ ತಲೆಮಾರಿನ ಇಂಟೆಲ್ ಕೋರ್ ಐ 9 ಎಚ್-ಸೀರಿಸ್ ಪ್ರೊಸೆಸರ್ ಮತ್ತು ಎನ್‌ವಿಡಿಯಾ ಜೀಫೋರ್ಸ್ RTX2080 ಸೂಪರ್ ಮ್ಯಾಕ್ಸ್-ಕ್ಯೂ GPU 8 GB VRM ಅನ್ನು ಹೊಂದಿದೆ. ಇದರಲ್ಲಿ ನೀವು 32 GB RAM ಮತ್ತು 1TB PCIE SSD ವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಡ್ಯುಯಲ್ ಡ್ರೈವ್ ಕಾನ್ಫಿಗರೇಶನ್‌ಗಳು ಸಹ ಲಭ್ಯವಿದೆ.

ಲ್ಯಾಪ್‌ಟಾಪ್‌

ಇದಲ್ಲದೆ ಈ ಲ್ಯಾಪ್‌ಟಾಪ್‌ನಲ್ಲಿ ಆಡಿಯೋಗಾಗಿ ಎರಡು 2W ಡಾಲ್ಬಿ ಅಟ್ಮೋಸ್ ಸ್ಪೀಕರ್‌ಗಳನ್ನು ನೀಡಲಾಗಿದೆ. ಅಲ್ಲದೆ ಇದು 80Wh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಇದು 8 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಲೆನೊವೊ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 6, ಬ್ಲೂಟೂತ್ V5.0, ಯುಎಸ್‌ಬಿ 3.1 ಜನ್ 1 ಟೈಪ್-ಎ ಪೋರ್ಟ್, ಎರಡು ಯುಎಸ್‌ಬಿ 3.1 ಜನ್ 2 ಪೋರ್ಟ್‌, HDMI 2.0 ಪೋರ್ಟ್, RJ45 ಈಥರ್ನೆಟ್, ಥಂಡರ್ಬೋಲ್ಟ್ 3 ಪೋರ್ಟ್, ಡಿಸ್‌ಪ್ಲೇಪೋರ್ಟ್ 1.4 ಬೆಂಬಲದೊಂದಿಗೆ ಯುಎಸ್‌ಬಿ 3.1 ಜನ್ 1 ಟೈಪ್-ಸಿ ಪೋರ್ಟ್, ಮತ್ತು ಹೆಡ್‌ಫೋನ್ / ಮೈಕ್ ಕಾಂಬೊ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಲೆನೊವೊ ಲೀಜನ್ 5PI

ಲೆನೊವೊ ಲೀಜನ್ 5PI

ಇನ್ನು ಲೆನೊವೊ ಲೀಜನ್ 5PI ಲ್ಯಾಪ್‌ಟಾಪ್‌ ಫುಲ್‌ ಹೆಚ್‌ಡಿ IPS ಡಿಸ್‌ಪ್ಲೇಯನ್ನು ಹೊಂದಿದ್ದು, 100% SRGB ಬಣ್ಣ ನಿಖರತೆ ಮತ್ತು 144Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಅಲ್ಲದೆ ಈ ಲ್ಯಾಪ್‌ಟಾಪ್‌ ಕೂಡ 10 ನೇ ತಲೆಮಾರಿನ ಇಂಟೆಲ್ ಕೋರ್ I7-10750H ಪ್ರೊಸೆಸರ್ ಮತ್ತು ಎನ್‌ವಿಡಿಯಾ ಜೀಫೋರ್ಸ್ RTX2060 GPUವರೆಗೆ ಕಾರ್ಯನಿರ್ವಹಿಸುತ್ತದೆ. ಇದು ಹರ್ಮನ್ ಕಾರ್ಡನ್ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಅಟ್ಮೋಸ್ ವಾಯ್ಸ್‌ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಕೂಡ 80Wh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 8 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ.

ಲೆನೊವೊ ಲೀಜನ್ 5i

ಲೆನೊವೊ ಲೀಜನ್ 5i

ಲೆನೊವೊ ಲೀಜನ್‌ 5i ಲ್ಯಾಪ್‌ಟಾಪ್‌ ಹೆಚ್ಚು ಬಜೆಟ್ ಸ್ನೇಹಿ ಆಗಿದೆ. ಈ ಲ್ಯಾಪ್‌ಟಾಪ್‌ ಕೂಡ ವಿಂಡೋಸ್ 10 ಅನ್ನು ಪ್ರೀ-ಇನ್‌ಸ್ಟಾಲ್‌ ಪಡೆದುಕೊಂಡಿದೆ. ಅಲ್ಲದೆ ಇದು 15.6-ಇಂಚಿನ ಫುಲ್‌-ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 144Hz ವರೆಗೆ ರಿಫ್ರೆಶ್ ರೇಟ್‌ಅನ್ನು ಹೊಂದಿದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ I7-10750H ಪ್ರೊಸೆಸರ್ ಮತ್ತು 6GB VRM ಹೊಂದಿರುವ ಎನ್‌ವಿಡಿಯಾ ಜೀಫೋರ್ಸ್ RTX2060 GPUವರೆಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಲೀಜನ್ 5i 80Wh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 6,, ಬ್ಲೂಟೂತ್ 5.0, ಯುಎಸ್‌ಬಿ-A3. 1 ಜನ್ 1 ಪೋರ್ಟ್, ಮೂರು ಯುಎಸ್‌ಬಿ-ಎ 3.1 ಜನ್ 1 ಪೋರ್ಟ್‌ಗಳು, ಯುಎಸ್‌ಬಿ ಟೈಪ್-ಸಿ 3.1 ಪೋರ್ಟ್, HDMI 2.0 ಪೋರ್ಟ್, RJ45 ಈಥರ್ನೆಟ್, ಮತ್ತು ಹೆಡ್‌ಫೋನ್ / ಮೈಕ್ ಕಾಂಬೊ ಜ್ಯಾಕ್ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲೆನೊವೊ ಲೀಜನ್ 7I ಲೆನೊವೊ ಕಂಪನಿಯ ಟಾಪ್-ಎಂಡ್ ಗೇಮಿಂಗ್ ಲ್ಯಾಪ್‌ಟಾಪ್ ಆಗಿದ್ದು, ಇದರ ಬೆಲೆ 1,99,990 ರೂ.ಆಗಿದೆ. ಇದು ಸ್ಲೇಟ್ ಗ್ರೇ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಲೆನೊವೊ ಲೀಜನ್ 5PI ಲ್ಯಾಪ್‌ಟಾಪ್‌ ಬೆಲೆ 1,34,990 ರೂ ಆಗಿದ್ದು, ಇದು ಐರನ್ ಗ್ರೇ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಅಲ್ಲದೆ ಲೆನೊವೊ ಲೀಜನ್ 5i ಬೆಲೆ 79,990 ರೂ ಆಗಿದ್ದು, ಇದು ಫ್ಯಾಂಟಮ್ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಲೆನೊವೊ ಇಂಡಿಯಾ ವೆಬ್‌ಸೈಟ್ ಮೂಲಕ ಲೆನೊವೊ ಲೀಜನ್ 7I ಮತ್ತು ಲೀಜನ್ 5I ಖರೀದಿಗೆ ಲಭ್ಯವಿದೆ.

Best Mobiles in India

English summary
Lenovo Legion 7i is the top-end model and starts at Rs. 1,99,990. It can be equipped with up to Intel Core i9 H-series processor.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X