ಎಲ್‌ಜಿ ಜಿ2 ಪಡೆದುಕೊಳ್ಳಲಿದೆ ಆಂಡ್ರಾಯ್ಡ್ 5.1.1
ಎಲ್‌ಜಿಯ ಇತ್ತೀಚಿನ ಫ್ಲ್ಯಾಗ್‌ಶಿಪ್ ಫೋನ್‌ಗಳು ಆಂಡ್ರಾಯ್ಡ್ 5.1.1 ಲಾಲಿಪಪ್ ಓಎಸ್ ಅನ್ನು ಎರಡು ತಿಂಗಳಲ್ಲಿ ಪಡೆದುಕೊಳ್ಳಲಿದೆ ಎಂದು ವರದಿ ತಿಳಿಸಿದೆ. ಎಲ್‌ಜಿ ಜಿ2 ನ ಎಲ್ಲಾ ಮಾಲೀಕರು ಈ ಓಎಸ್ ಅನ್ನು ಪಡೆದುಕೊಳ್ಳಲಿದ್ದಾರೆ ಎಂದು ಕೊರಿಯಾ ಮೂಲಗಳು ತಿಳಿಸಿದ್ದು, ಆಂಡ್ರಾಯ್ಡ್ 5.1.1 ಜಿ2 ನಲ್ಲಿ ಸ್ಥಾಪಿಸುವುದಕ್ಕಾಗಿ ಎಲ್‌ಜಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಎರಡು ತಿಂಗಳಲ್ಲೇ ಡಿವೈಸ್‌ಗಳಲ್ಲಿ ಇದು ಬಿಡುಗಡೆ ಭಾಗ್ಯವನ್ನು ಕಾಣಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಓದಿರಿ: ದೆವ್ವಗಳನ್ನು ಪತ್ತೆಹಚ್ಚುವ ಟಾಪ್ ಅಪ್ಲಿಕೇಶನ್ಸ್

ಜಿ2 ನಲ್ಲಿ ಆಂಡ್ರಾಯ್ಡ್ 5.1.1 ಚಾಲನೆಯಾಗುತ್ತಿರುವ ಸ್ಕ್ರೀನ್‌ಶಾಟ್ ಅನ್ನು ಈ ಸುದ್ದಿ ಹೊರತಂದಿದೆ. ಎಲ್‌ಜಿಯ ಇತ್ತೀಚಿನ ಯುಎಕ್ಸ್ 4.0 ಯೂಸರ್ ಇಂಟರ್ಫೇಸ್ ಅನ್ನು ಇದು ಪಡೆದುಕೊಂಡಿದ್ದು, ಲಾಲಿಪಪ್ ಸ್ಟೈಲ್ ವರ್ಚುವಲ್ ಬಟನ್‌ಗಳನ್ನು ಇದು ಹೊಂದುವ ನಿರೀಕ್ಷೆ ಇದೆ.
ಓದಿರಿ: ಒದ್ದೆ ಫೋನ್‌ಗೆ ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಹೇಗೆ?

ಈ ನವೀಕರಣದೊಂದಿಗೆ ಜಿ4 ನ ಹೊಸ ವಿಶೇಷತೆಗಳನ್ನು ಜಿ2 ಪಡೆದುಕೊಳ್ಳಲಿದ್ದು ಯಾವುದು ಮೊದಲು ಲಾಂಚ್ ಅನ್ನು ಸ್ವೀಕರಿಸಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆಂಡ್ರಾಯ್ಡ್ 5.1.1 ನಲ್ಲಿ ಎಲ್ಲಾ ವಿಶೇಷತೆಗಳು ಮತ್ತು ಸುಧಾರಣೆಗಳನ್ನು ಕಾಣಬಹುದಾಗಿದೆ.
ಓದಿರಿ: ಈ ವೀಡಿಯೋಗಳನ್ನು ನೋಡಲು ಗುಂಡಿಗೆ ಗಟ್ಟಿಮಾಡಿಕೊಳ್ಳಿ

ಗೆಸ್ಟ್ ಯೂಸರ್ ಮೋಡ್, ವೈಫೈ ಆನ್ ಮಾಡುವಿಕೆ, ಬ್ಲ್ಯೂಟೂತ್ ಸಂಪರ್ಕ ಜೊತೆಗೆ ಕ್ವಿಕ್ ಸೆಟ್ಟಿಂಗ್ಸ್ ಮೆನು, ಆಂಟಿ - ಥೆಪ್ಟ್ ಪ್ರೊಟೆಕ್ಶನ್ ಫೀಚರ್ ಇದರಲ್ಲಿದೆ.


Click it and Unblock the Notifications








