Subscribe to Gizbot

ಒದ್ದೆ ಫೋನ್‌ಗೆ ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಹೇಗೆ?

Written By:

ನೀವು ಎಷ್ಟು ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಖರೀದಿಸುತ್ತೀರಿ ಎಂಬುದು ಮುಖ್ಯವಲ್ಲ ಅದರ ನಿರ್ವಹಣೆಯಲ್ಲಿ ನೀವು ಯಾವ ಕ್ರಮಗಳನ್ನು ಕೈಗೊಳ್ಳುತ್ತೀರಿ ಎಂಬುದು ಅತಿ ಮುಖ್ಯವಾದುದು. ಫೋನ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸಿ, ಫ್ಲಿಪ್ ಕವರ್ ಹಾಕಿ ಈ ರೀತಿಯಾಗಿ ನಿಮ್ಮ ಫೋನ್‌ನ ರಕ್ಷಣೆಯನ್ನು ನೀವು ಮಾಡುತ್ತೀರಿ. ಫೋನ್‌ನ ಸುದೀರ್ಘ ಬಾಳ್ವಿಕೆಗೆ ಅಗತ್ಯವಾಗಿರುವ ಎಲ್ಲಾ ಅಂಶಗಳನ್ನು ನೀವು ಪಾಲಿಸುತ್ತೀರಿ.

ಓದಿರಿ: ಚಾರ್ಜರ್ ಬಳಸದೆಯೇ ಫೋನ್ ಚಾರ್ಜ್ ಮಾಡಲು ಟಾಪ್ ವಿಧಾನಗಳು

ಆದರೂ ಫೋನ್ ಒಮ್ಮೊಮ್ಮೆ ಅಪಘಾತಕ್ಕೆ ಒಳಗಾಗುತ್ತದೆ. ಆ ಅಪಘಾತಗಳಿಗೆ ನೀವು ಶೀಘ್ರ ಪರಿಹಾರವನ್ನು ಕಂಡುಕೊಂಡಲ್ಲಿ ನಿಮಗೆ ಇದು ಹೆಚ್ಚು ಲಾಭವನ್ನುಂಟು ಮಾಡುವುದು. ಸಣ್ಣ ಅಪಘಾತಗಳು ಅಂದರೆ ಮಳೆಗಾಲದಲ್ಲಿ ಫೋನ್ ಒದ್ದೆಯಾಗುವುದು ಇಲ್ಲವೇ ಅಕಸ್ಮಾತ್ತಾಗಿ ನೀರಿಗೆ ಫೋನ್ ಬೀಳುವುದು ಇಂತಹ ಅಪಘಾತಗಳಿಂದ ನಿಮ್ಮ ಫೋನ್ ಅನ್ನು ಸುಲಭವಾಗಿ ಸಂರಕ್ಷಿಸಬಹುದಾಗಿದೆ. ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ವಿಚ್ ಆಫ್ ಮಾಡಿ

ಹಂತ: 1

ಮೊದಲಿಗೆ ಫೋನ್ ಅನ್ನು ಆಫ್ ಮಾಡಿ ಮತ್ತು ಅದನ್ನು ತಲೆಕೆಳಗಾಗಿ ಇರಿಸಿ.

ಎಸ್‌ಡಿ ಕಾರ್ಡ್ ಮತ್ತು ಸಿಮ್ ಕಾರ್ಡ್‌ ಹೊರತೆಗೆಯಿರಿ

ಹಂತ: 2

ಫೋನ್ ಕೇಸ್ ಬೇರ್ಪಡಿಸಿ, ಎಸ್‌ಡಿ ಕಾರ್ಡ್ ಮತ್ತು ಸಿಮ್ ಕಾರ್ಡ್‌ಗಳನ್ನು ಹೊರತೆಗೆಯಿರಿ.

ಬ್ಯಾಟರಿ ಹೊರತೆಗೆಯಿರಿ

ಹಂತ: 3

ಫೋನ್‌ನ ಹಿಂಭಾಗವನ್ನು ತೆರೆದು ಬ್ಯಾಟರಿ ಹೊರತೆಗೆಯಿರಿ. ಕೆಲವೊಂದು ಫೋನ್‌ಗಳಲ್ಲಿ ಇದು ಸಾಧ್ಯವಿಲ್ಲ ಎಂಬುದು ನೆನಪಿರಲಿ. ಆದ್ದರಿಂದ ಬ್ಯಾಟರಿ ಹೊರತೆಗೆಯಬಹುದಾದ ಫೋನ್‌ನಲ್ಲಿ ಹೀಗೆ ಮಾಡಿ.

ಬಟ್ಟೆ ಬಳಸಿ

ಹಂತ: 4

ಬಟ್ಟೆಯಿಂದ ಫೋನ್ ಅನ್ನು ಚೆನ್ನಾಗಿ ಒರೆಸಿ. ಆದಷ್ಟು ನೀರು ಒಣಗುವಂತೆ ಚೆನ್ನಾಗಿ ಒರೆಸಿ.

ವಾಕ್ಯುಮ್

ಹಂತ: 5

ಇನ್ನು ನೀರು ಫೋನ್‌ನ ಆಳವಾದ ಜಾಗವನ್ನು ಪ್ರವೇಶಿಸಿದೆ ಎಂದಾದಲ್ಲಿ ವಾಕ್ಯುಮ್ ಅನ್ನು ಬಳಸಿ ನೀರು ಹೀರುವಂತೆ ಮಾಡಿ.

ಅಕ್ಕಿ

ಹಂತ: 6

ಒದ್ದೆ ಫೋನ್‌ಗೆ ಸರಿಯಾದ ಮದ್ದು ಎಂದರೆ ಅದು ಅಕ್ಕಿಯಾಗಿದೆ. ಒಂದು ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಸ್ವಲ್ಪ ಅಕ್ಕಿ ತೆಗೆದುಕೊಂಡು ಅದರಲ್ಲಿ ಫೋನ್ ಅನ್ನು ಹುದುಗಿಸಿಡಿ. ಫೋನ್‌ನಲ್ಲಿರುವ ನೀರನ್ನು ಅಕ್ಕಿ ಹೀರಿಕೊಳ್ಳುತ್ತದೆ.

ಡ್ರೈಯಿಂಗ್ ಪೌಚ್

ಹಂತ: 7

ಫೋನ್ ಡ್ರೈಯಿಂಗ್ ಪೌಚ್ ಅನ್ನು ನೀವು ಹೊಂದಿದ್ದಲ್ಲಿ ಅದನ್ನು ಬಳಸಿ. ಇಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಇದು ಲಭ್ಯವಿರುತ್ತದೆ.

ಇನ್ನೊಂದು ಫೋನ್ ಬಳಸಿ

ಹಂತ: 8

ಫೋನ್ ಆದಷ್ಟು ಒಣಗಲಿ. ಆ ಸಮಯದಲ್ಲಿ ಇನ್ನೊಂದು ಫೋನ್ ಅನ್ನು ಬಳಸಿ.

 ಪರಿಶೀಲಿಸಿ

ಹಂತ: 9

ಒಂದು ಅಥವಾ ಎರಡು ದಿನಗಳ ನಂತರ, ಬ್ಯಾಟರಿಯನ್ನು ಫೋನ್‌ಗೆ ಸೇರಿಸಿ ಆನ್ ಮಾಡಿ. ಈ ಸಮಯದಲ್ಲಿ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಗಮನಿಸಿ. ಸ್ಪೀಕರ್ ಮತ್ತು ಟಚ್ ಸ್ಕ್ರೀನ್ ಅನ್ನು ಪರಿಶೀಲಿಸಿಕೊಳ್ಳಿ.

ಫೋನ್ ರಿಪೇರಿ

ಹಂತ: 10

ಇನ್ನು ಫೋನ್ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಬ್ಯಾಟರಿಗೆ ಸಮಸ್ಯೆಯುಂಟಾಗಿದೆ ಎಂಬುದನ್ನು ಮನಗಾಣಿ. ಈ ಸಮಯದಲ್ಲಿ ಬೇರೆ ಬ್ಯಾಟರಿಯನ್ನು ಬಳಸಿ. ಇನ್ನೂ ಈ ಸಲಹೆಗಳು ಕಾರ್ಯನಿರ್ವಹಿಸಿಲ್ಲ ಎಂದಾದಲ್ಲಿ ವೃತ್ತಿನಿರತ ಫೋನ್ ರಿಪೇರಿದಾರರನ್ನು ನೀವು ಸಂಪರ್ಕಿಸಬೇಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
In this article you can get better solution for your wet phone. These steps are very easy to follow and give you better solution for your wet phone...Rice, Vacuam cleaner are the best method to protect your wet phone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot