Subscribe to Gizbot

ಶತಕ ಬಾರಿಸಿದ ಇಸ್ರೋ ಮಾರ್ಸ್ ಆರ್ಬಿಟರಿ ಮಿಷನ್‌

Posted By:

ಭಾರತದ ಮೊದಲ ಮಂಗಳಯಾನ ನೌಕೆ ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಇಂದಿಗೆ(ಫೆ.12) ನೂರನೇ ದಿನದ ಪ್ರಯಾಣವನ್ನು ಮುಗಿಸಿದೆ.

ಭಾರತದ ಮಂಗಳಯಾನ ನೌಕೆಯ ಪ್ರಯಾಣ ನವೆಂಬರ್‌ 5ರಂದು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಆರಂಭಗೊಂಡಿದ್ದು ಈಗಾಗಲೇ ಭೂಮಿಯಿಂದ 16 ಕೋಟಿ ಕಿ.ಮೀ ದೂರ ಕ್ರಮಿಸಿದೆ. ನೌಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಸರಿಯಾದ ಪಥದಲ್ಲಿ ಕ್ರಮಿಸಿಸುತ್ತಿದೆ ಎಂದು ಇಸ್ರೋ ತಿಳಿಸಿದೆ.

ನೌಕೆ ಇನ್ನು 210 ದಿನದಲ್ಲಿ 49 ಕೋಟಿ ದೂರ ಸಾಗಬೇಕಾಗಿದ್ದು,ಸೆಪ್ಟೆಂಬರ್‌ 24ಕ್ಕೆ ಮಂಗಳ ಗ್ರಹವನ್ನು ತಲುಪುವಂತೆ ಇಸ್ರೋ ಯೋಜನೆ ರೂಪಿಸಿದೆ.

ಉಡಾವಣೆಯಾದ ಒಂದು ವಾರದಲ್ಲಿ'ಮಾರ್ಸ್ ಆರ್ಬಿಟರಿ ಮಿಷನ್'  ಸಣ್ಣ ತೊಂದರೆಯಲ್ಲಿ ಸಿಲುಕಿಕೊಂಡಿತ್ತು.ಉಪಗ್ರಹವನ್ನುಎತ್ತರಕ್ಕೆ ಏರಿಸಲು ಇಸ್ರೋ ಕಾರ್ಯಾಚರಣೆ ತಾಂತ್ರಿಕ ದೋಷದಿಂದಾಗಿ ವೈಫ‌ಲ್ಯ ಅನುಭವಿಸಿತ್ತು. ಉಪಗ್ರಹದ ಎತ್ತರವನ್ನು ಹಂತಹಂತವಾಗಿ ಏರಿಸುತ್ತಿದ್ದ ಇಸ್ರೋದ ಮೂರು ಹಂತದ ಕಾರ್ಯಾಚರಣೆ ಯಶಸ್ವಿಯಾಗಿ, ನಾಲ್ಕನೇಯ ಹಂತದ ಕಾರ್ಯಾಚರಣೆಯ ವೇಳೆ ಇಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಂಡದ್ದರಿಂದ ಉಪಗ್ರಹ ವೇಗ ಕಡಿಮೆಯಾಗಿ ಕ್ರಮಿಸಿಸಬೇಕಾಗಿದ್ದ ದೂರವನ್ನು ತಲುಪಲು ವಿಫಲವಾಗಿತ್ತು.

ಈ ಸಮಸ್ಯೆ ಸೃಷ್ಟಿಯಾದರೂ ಇಸ್ರೋ ವಿಜ್ಞಾನಿಗಳು ಉಪಗ್ರಹವನ್ನು ಹಂತಹಂತವಾಗಿ ಎತ್ತರಕ್ಕೆ ಏರಿಸಿ ಮಂಗಳನ ಕಕ್ಷಗೆ ನೂಕುವಲ್ಲಿ ಯಶಸ್ವಿಯಾಗಿದ್ದರು.ಇಸ್ರೋದ ಮಂಗಳಯಾನ ನೌಕೆ ಡಿಸೆಂಬರ್‌1ರಂದು ಭೂಮಿಯ ಕಕ್ಷೆಯನ್ನು ತೊರೆದು ಮಂಗಳ ಗ್ರಹದತ್ತ ತನ್ನ ಪ್ರಯಾಣವನ್ನು ಆರಂಭಿಸಿತ್ತು.

Post by ISRO's Mars Orbiter Mission.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot