Home
ಸುದ್ದಿಜಾಲ

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!

By Ashwath

ಏಕಮುಖ ಮಂಗಳಯಾನಕ್ಕೆ ಈಗಾಗಲೇ ವಿಶ್ವದ ಒಂದು ಲಕ್ಷಕ್ಕೂ ಅಧಿಕ ಮಂದಿ ಅರ್ಜಿ‌ ಸಲ್ಲಿಸಿದ್ದಾರೆ.ಆದರೆ ಇವರ ಪ್ರಯಾಣಕ್ಕೆ ಹಿನ್ನಡೆಯಾಗುವ ಸುದ್ದಿಯೊಂದು ಇದೀಗ ಪ್ರಕಟವಾಗಿದೆ.

ನಾಸಾದ ಕ್ಯೂರಿಯಾಸಿಟಿ ರೋವರ್‌ ನೌಕೆ ಕಳೆದ ಒಂದು ವರ್ಷದಿಂದ ಅಲ್ಲಿ ಅಧ್ಯಯನ ಮಾಡಿ,ಫೋಟೋಗಳನ್ನು ನಾಸಾಗೆ ಕಳುಹಿಸುತ್ತಿದೆ.ಆದರೆ ಇದುವರೆಗೂ ಅಲ್ಲಿರುವ ಸೂಕ್ಷಾಣು ಜೀವಿಗಳು ಸುಳಿವಿನ ಬಗ್ಗೆ ಕ್ಯೂರಿಯಾಸಿಟಿ ಮಾಹಿತಿ ಕಳುಹಿಸಿಲ್ಲ ಎನ್ನುವ ವಾದವನ್ನು ವಿಜ್ಞಾನಿಗಳು ಮಂಡಿಸಲು ಆರಂಭಿಸಿದ್ದಾರೆ.

ಮಂಗಳ ಗ್ರಹದಲ್ಲಿ ಮೀಥೇನ್‌ ಗ್ಯಾಸ್‌ ಸಿಕ್ಕಿದ್ದರೆ,ಅಲ್ಲಿ ಸೂಕ್ಷಾಣು ಜೀವಿಗಳಿವೆ ಎಂದು ಹೇಳಬಹುದಿತ್ತು.ಆದರೆ ಕ್ಯೂರಿಯಾಸಿಟಿ ರೋವರ್‌ ನೌಕೆ ಇದುವರೆಗೂ ಮಿಥೇನ್‌ ಗ್ಯಾಸ್‌ ಇರುವಿಕೆಯನ್ನು ಪತ್ತೆ ಮಾಡಿಲ್ಲ ಎನ್ನುವ ವಿಷಯವುಳ್ಳ ಲೇಖನ ಜರ್ನ‌ಲ್‌ ಸೈನ್ಸ್‌ನಲ್ಲಿ ಪ್ರಕಟಗೊಂಡಿದೆ.

ಆದರೆ ಮಂಗಳ ಗ್ರಹದಲ್ಲಿ ಜೀವಿಗಳು ವಾಸ ಮಾಡಬಹುದು ಎಂದು ಸಮರ್ಥಿ‌ಸುವ ವಿಜ್ಞಾನಿಗಳು ಈ ವಾದವನ್ನು ಅಲ್ಲಗೆಳೆದಿದ್ದಾರೆ.ಮಂಗಳನಲ್ಲಿ ಮೀಥೇನ್‌ ಗ್ಯಾಸ್‌ ಇಲ್ಲ ಎನ್ನುವ ಕಾರಣಕ್ಕೆ ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸಲು ಸಾಧ್ಯವೇ ಇಲ್ಲ ಎಂದು ಹೇಳುವುದು ಕಷ್ಟ.ಭೂಮಿ ಮೇಲೆ ಮೀಥೇನ್‌‌ ಗ್ಯಾಸ್‌ ಹೊರ ಸೂಸದ ಜೀವಿಗಳು ಇದೆ. ಇದೇ ರೀತಿ ಮಂಗಳ ಗ್ರಹದಲ್ಲಿ ಇರುವ ಸಾಧ್ಯತೆ ಇದೆ ಎನ್ನುವ ವಾದವನ್ನು ಮಂಡಿಸಲಾರಂಭಿಸಿದ್ದಾರೆ.

ಈ ಹಿಂದೆ ಕ್ಯೂರಿಯಾಸಿಟಿ ರೋವರ್‌ ನೌಕೆ ತನ್ನ ಕ್ಯಾಮೆರದಲ್ಲಿ ತೆಗೆದಿರುವ ಫೋಟೋವೊಂದು ವಿಜ್ಞಾನಿಗಳ ಮಧ್ಯೆ ಭಾರೀ ಚರ್ಚೆಗೆ ಕಾರಣವಾಗಿತ್ತು. 2012ರ ಸೆ.28ರಂದು ರಾಕ್‌ನೆಸ್ಟ್‌ ಎಂಬ ಸ್ಥಳದಿಂದ ಬಂಡೆಕಲ್ಲುಗಳ ಮಧ್ಯೆ ಕಿತ್ತಳೆ ಬಣ್ಣದ ಇಲಿಯನ್ನೇ ಹೋಲುವ ಆಕೃತಿಯನ್ನು ಕ್ಯೂರಿಯಾಸಿ ಸೆರೆಹಿಡಿದಿತ್ತು. ಇಲಿಯನ್ನೇ ಹೋಲುವ ಆಕೃತಿ ಮಂಗಳ ಗ್ರಹದಲ್ಲಿರುವ ಇಲಿಯೇ ಅಗಿದೆ ಎಂದು ufosightingsdaily ಸಂಪಾದಕ ಸ್ಕಾಟ್‌ವೇರಿಂಗ್‌ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು.

ಈ ಚರ್ಚೆ‌ಗಳ ಮಧ್ಯೆ ಯುರೋಪಿಯನ್‌ ಸ್ಪೇಸ್‌ ಎಜೆನ್ಸಿ(ESA) ಸಂಶೋಧಕರು ಈಗ ಮಂಗಳ ಗ್ರಹದ ಹೆಚ್ಚಿನ ಅಧ್ಯಯನ ನಡೆಸಲು ಸ್ನೇಕ್‌ ರೊಬೊಟ್‌‌ನ್ನು ಅಭಿವೃದ್ಧಿಪಡಿಸಿದ್ದಾರೆ. ನಾಸಾ ಈಗಾಗಲೇ ಕ್ಯೂರಿಯಾಸಿಟಿ ರೋವರ್‌‌ನ್ನು ಮಂಗಳ ಗ್ರಹಕ್ಕೆ ಕಳುಹಿಸಿದೆ.ಆದರೆ ಈ ವಾಹನದಲ್ಲಿ ಚಕ್ರಗಳಿದ್ದು,ಇದರ ಮೂಲಕ ರೋವರ್‌‌ ಚಲಿಸುತ್ತಿದೆ.

ರೋವರ್‌ ಮಂಗಳ ಗ್ರಹದ ದೂರದ ಪ್ರದೇಶಗಳ ಮಾಹಿತಿ,ಫೋಟೋವನ್ನು ಕಳುಹಿಸುತ್ತಿದ್ದರೂ,ಮಂಗಳ ಗ್ರಹದ ನೆಲದ ಬಗ್ಗೆ ಅಧ್ಯಯನ ಮಾಡಲು ಈ ಕ್ಯೂರಿಯಸಿಟಿ ರೋವರ್‌‌ ಅಷ್ಟೇನು ಸಾಮರ್ಥ್ಯ ಹೊಂದಿಲ್ಲವಂತೆ ಹೀಗಾಗಿ ಈ ಹೊಸ ಸ್ನೇಕ್‌ ರೊಬೊಟ್‌‌ನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.ಈ ಯೋಜನೆಗೆ ExoMars ಎನ್ನುವ ಹೆಸರನ್ನಿಟ್ಟಿದ್ದು ಈ ಸಂಶೋಧನೆ ಯಶಸ್ವಿಯಾದಲ್ಲಿ 2018ರಲ್ಲಿ ಸ್ನೇಕ್ ರೊಬೊಟ್‌ ಮಂಗಳ ಗ್ರಹಕ್ಕೆ ಹಾರಲಿದೆ.

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!

ನಾಸಾದಿಂದ ಕಳುಹಿಸಿರುವ ಈ ರೋವರ್‌ ನೌಕೆ 2011 ನವೆಂಬರ್‌ನಲ್ಲಿ ಉಡಾವಣೆಯಾಗಿ, 3,500 ಲಕ್ಷ ಮೈಲು ಕ್ರಮಿಸಿ 2012ರ ಅಗಸ್ಟ್‌ನಲ್ಲಿ ಮಂಗಳ ಗ್ರಹದ ಗೇಲ್‌ ಕೇಟರ್‌ನಲ್ಲಿ ಇಳಿದಿತ್ತು.

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!

900 ಕೆ ಜಿ. ತೂಕ ಹೊಂದಿರುವ ಈ ಉಪಗ್ರಹಕ್ಕೆ 2.5 ಬಿಲಿಯನ್‌ ಡಾಲರ್‌ನ್ನು ಅಮೆರಿಕ ಖರ್ಚು ಮಾಡಿದೆ.

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!

ರೋವರ್‌ ನೌಕೆ ಕಳುಹಿಸಿರುವ ಮಂಗಳ ಗ್ರಹದ ಚಿತ್ರ

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!


ರೋವರ್‌ ನೌಕೆ ಕಳುಹಿಸಿರುವ ಮಂಗಳ ಗ್ರಹದ ಚಿತ್ರ

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!

ರೋವರ್‌ ನೌಕೆ ಕಳುಹಿಸಿರುವ ಮಂಗಳ ಗ್ರಹದ ಚಿತ್ರ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+