Subscribe to Gizbot

ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!

Posted By:

ವಿಜ್ಞಾನಿಗಳಲ್ಲಿ ಮಂಗಳ ಗ್ರಹದ ಕುತೂಹಲ ದಿನೆ ದಿನೇ ಹೆಚ್ಚಾಗುತ್ತಿದೆ. ಕ್ಯೂರಿಯಾಸಿಟಿ ನೌಕೆ ಈಗಾಗಲೇ ಮಂಗಳ ಗ್ರಹದ ಚಿತ್ರಗಳನ್ನು ಕಳುಹಿಸುತ್ತಿದೆ.ಇನ್ನೊಂದು ಕಡೆ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಯೋಜನೆ ಆರಂಭವಾಗಿದೆ ಈ ಮಧ್ಯೆ ಮಂಗಳ ಗ್ರಹಕ್ಕೆ ಹೊಸ ಸ್ನೇಕ್‌ ರೊಬೊಟ್‌ ಕಳುಹಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ.

ಯುರೋಪಿಯನ್‌ ಸ್ಪೇಸ್‌ ಎಜೆನ್ಸಿ(ESA) ಸಂಶೋಧಕರು ಈಗ ಮಂಗಳ ಗ್ರಹದ ಹೆಚ್ಚಿನ ಅಧ್ಯಯನ ನಡೆಸಲು ಸ್ನೇಕ್‌ ರೊಬೊಟ್‌‌ನ್ನು ಅಭಿವೃದ್ಧಿಪಡಿಸಿದ್ದಾರೆ.ನಾಸಾ ಈಗಾಗಲೇ ಕ್ಯೂರಿಯಾಸಿಟಿ ರೋವರ್‌‌ನ್ನು ಮಂಗಳ ಗ್ರಹಕ್ಕೆ ಕಳುಹಿಸಿದೆ. ಆದರೆ ಈ ವಾಹನದಲ್ಲಿ ಚಕ್ರಗಳಿದ್ದು,ಇದರ ಮೂಲಕ ರೋವರ್‌‌ ಚಲಿಸುತ್ತಿದೆ. ರೋವರ್‌ ಮಂಗಳ ಗ್ರಹದ ದೂರದ ಪ್ರದೇಶಗಳ ಮಾಹಿತಿ, ಫೋಟೋವನ್ನು ಕಳುಹಿಸುತ್ತಿದ್ದರೂ,ಮಂಗಳ ಗ್ರಹದ ನೆಲದ ಬಗ್ಗೆ ಅಧ್ಯಯನ ಮಾಡಲು ಈ ಕ್ಯೂರಿಯಸಿಟಿ ರೋವರ್‌‌ ಅಷ್ಟೇನು ಸಾಮರ್ಥ್ಯ ಹೊಂದಿಲ್ಲವಂತೆ. ಹೀಗಾಗಿ ಈ ಹೊಸ ಸ್ನೇಕ್‌ ರೊಬೊಟ್‌‌ನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.

ಹಾವಿನಂತೆ ಸ್ನೇಕ್‌ ರೊಬೊಟ್‌ ನೆಲದಲ್ಲಿ ತೆವಳಿಕೊಂಡು ಹೋಗುವುದರಿಂದ ಮಂಗಳ ಗ್ರಹದ ನೆಲದಲ್ಲಿರುವ ಮಣ್ಣು ಶಿಲೆ,ಬಗ್ಗೆ ಅಧ್ಯಯನ ಮಾಡಲು ಈ ಸ್ನೇಕ್‌ ರೊಬೊಟ್‌ ಉತ್ತಮ ಎನ್ನುವ ಅಭಿಪ್ರಾಯವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.ಈ ಸ್ನೇಕ್ ರೊಬೊಟ್‌‌ನ್ನು ರೋವರ್‌ಗೆ ಕೇಬಲ್‌ ಮೂಲಕ ಕನೆಕ್ಟ್‌‌ ಮಾಡಿ ಸಂವಹನ ಮಾಡಲು ಸಾಧ್ಯವಾಗುವಂತಹ ಯೋಜನೆಯನ್ನು ಸಂಶೋಧಕರು ರೂಪಿಸುತ್ತಿದ್ದಾರೆ.

ಈ ಯೋಜನೆಗೆ ExoMars ಎನ್ನುವ ಹೆಸರನ್ನಿಟ್ಟಿದ್ದು ಈ ಸಂಶೋಧನೆ ಯಶಸ್ವಿಯಾದಲ್ಲಿ 2018ರಲ್ಲಿ ಸ್ನೇಕ್ ರೊಬೊಟ್‌ ಮಂಗಳ ಗ್ರಹಕ್ಕೆ ಹಾರಲಿದೆ.

ಇದನ್ನೂ ಓದಿ: ಮಂಗಳ ಗ್ರಹದ ಪ್ರಯಾಣ ಹೀಗೆ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!

ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!

ಸ್ನೇಕ್ ರೊಬೊಟ್‌

 ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!

ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!


ಸ್ನೇಕ್ ರೊಬೊಟ್‌

 ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!

ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!


ಸ್ನೇಕ್ ರೊಬೊಟ್‌

 ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!

ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!


ಸ್ನೇಕ್ ರೊಬೊಟ್‌

 ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!

ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!

ಕ್ಯೂರಿಯಾಸಿಟಿ ರೋವರ್‌

 ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!

ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!

ಕ್ಯೂರಿಯಾಸಿಟಿ ರೋವರ್‌

 ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!

ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್‌!


ಕ್ಯೂರಿಯಾಸಿಟಿ ರೋವರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot