ಮಂಗಳ ಗ್ರಹದ ಪ್ರಯಾಣ ಹೀಗೆ..

Posted By:

ಮಂಗಳ ಗ್ರಹದ ಪ್ರಯಾಣದ ನೋಂದಣಿಗೆ ಸುಮಾರು 8 ಸಾವಿರ ಭಾರತೀಯರು ಸಹಿ ಹಾಕಿದ್ದಾರೆ. ಈ ಮೂಲಕ ಮಾರ್ಸ್‌ ಒನ್‌ ಪ್ರಾಜೆಕ್ಟ್‌ಗೆ ನೋಂದಣಿ ಮಾಡಿಕೊಂಡ ರಾಷ್ಟ್ರಗಳ ಪೈಕಿ ಭಾರತ 4ನೇ ಸ್ಥಾನ ಪಡೆದಿದೆ.

2011 ಜನವರಿಯಿಂದ ಆರಂಭಗೊಂಡ ಈ ಮಾರ್ಸ್‌ ಒನ್‌ ಪ್ರಾಜೆಕ್ಟ್‌ ಈ ವರ್ಷದ ಮೇ ತಿಂಗಳಿನಲ್ಲಿ 78 ಸಾವಿರ ಜನರು ಸಹಿ ಹಾಕಿದ್ದರು. ನಂತರ ಈ ಪ್ರಾಜೆಕ್ಟ್‌ ಸುದ್ದಿ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗಿಜನರು ಈ ಪ್ರಾಜೆಕ್ಟ್‌ ಸಹಿ ಹಾಕಲು ಆರಂಭಿಸಿದ್ದರು. ಅಗಸ್ಟ್‌ 31 ಸಹಿ ಹಾಕಲು ಅಂತಿಮ ದಿನವಾಗಿದ್ದು, ಈ ಡೆಡ್‌ ಲೈನ್ ಸಮೀಪಿಸುತ್ತಿದ್ದಂತೆ, ಇದುವರೆಗೂ ಒಟ್ಟು 140 ದೇಶಗಳಿಂದ 1.65 ಲಕ್ಷ ಮಂದಿ ಈ ಯೋಜನೆಗೆ ಸಹಿ ಹಾಕಿದ್ದಾರೆ.

ಪ್ರಾಜೆಕ್ಟ್‌ಗೆ ನೋಂದಣಿ ಮಾಡಿಕೊಂಡ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲ ಸ್ಥಾನ ಪಡೆದಿದೆ.ಅಮೆರಿಕದಿಂದ 37,852 ಮಂದಿ,ಚೀನಾ(13,124), ಬ್ರೆಜಿಲ್ (8686), ರಷ್ಯಾ(7138),ಬ್ರಿಟನ್ (6999),ಮೆಕ್ಸಿಕೋ(6771),ಕೆನಡಾ(6593),ಸ್ಪೇನ್(3621),ಫಿಲಿಪ್ಪೀನ್(3516) ಈವರೆಗೆ ನೋಂದಣಿ ಮಾಡಿಕೊಂಡಿದ್ದಾರೆ2023ರ ವೇಳೆಗೆ ಮಂಗಳನಲ್ಲಿ ಕಾಯಂ ಕಾಲೋನಿ ನಿರ್ಮಿ‌ಸಲು ಕಾಲೋನಿ ನಿರ್ಮಿಸಲು ಉದ್ದೇಶಿಸಿ 'ಮಾರ್ಸ್ ಒನ್‌' ಪ್ರಾಜೆಕ್ಟ್ ಹಮ್ಮಿಕೊಳ್ಳಲಾಗಿದೆ. ಇದು ಒನ್ ವೇ ಟ್ರಿಪ್ ಆಗಿದ್ದು, ಅಲ್ಲಿ ಹೋದವರು ಮರಳಿ ಭೂಮಿಗೆ ಬರುವಂತಿಲ್ಲ.18 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರು ಏಕಮುಖ ಮಂಗಳಯಾನಕ್ಕೆ ಅರ್ಜಿ ಸಲ್ಲಿಸಿದ್ದು,ಯೋಜನೆಯ ಮೊದಲ ಯಾನಕ್ಕೆ 600 ಕೋಟಿ ಡಾಲರ್ ವೆಚ್ಚವಾಗಲಿದೆ ಎಂದು ಮಾರ್ಸ್‌ ಒನ್ ಸಿಇಒ ಲಾನ್ಸ್‌ಡ್ರಾಪ್ ತಿಳಿಸಿದ್ದಾರೆ.

ಬಂದಿರುವ ಅರ್ಜಿ‌ಯನ್ನು ಪರಿಶೀಲಿಸಿ ವಿವಿಧ ರಾಷ್ಟ್ರಗಳ 40 ಜನರನ್ನು ಈ ಯಾನಕ್ಕೆ ಆರಿಸಲಾಗುವುದು. ನಂತರ ಈ 40 ಜನರನ್ನು,ನಾಲ್ಕು ಜನರಿರುವ ಹತ್ತು ತಂಡಗಳಾಗಿ ವಿಂಗಡಿಸಿ ಅಂತಿಮ ಹೆಸರನ್ನು 'ಮಾರ್ಸ್ ಒನ್‌' ಪ್ರಾಜೆಕ್ಟ್ ತಂಡ ಆಯ್ಕೆ ಮಾಡಲಿದೆ.

ಈ ನಾಲ್ಕು ಮಂದಿಯಲ್ಲಿ ತಲಾ ಇಬ್ಬರು ಪುರುಷರು ಮತ್ತು ಮಹಿಳೆಯರು 2022ರ ಸೆಪ್ಟೆಂಬರ್‌ನಲ್ಲಿ ಪ್ರಯಾಣ ಆರಂಭಿಸಲಿದ್ದು, 2023ರ ಏಪ್ರಿಲ್‌ನಲ್ಲಿ ಮಂಗಳನಲ್ಲಿ ಇಳಿಯುವಂತೆ ವೇಳಾಪಟ್ಟಿ ತಯಾರಾಗಿದೆ.

ಹೀಗಾಗಿ ಇಲ್ಲಿ ಇದರ ಟೈಮ್‌ ಲೈನ್‌ ಹೇಗಿದೆ ಎನ್ನುವುದಕ್ಕೆ ಇಲ್ಲಿ ಕೆಲವು ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ:ಮಂಗಳ ಗ್ರಹದಲ್ಲಿ ಇಲಿ ಪತ್ತೆ !

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 2011

2011

ಮಂಗಳ ಗ್ರಹದ ಪ್ರಯಾಣ ಹೀಗೆ..

ಮಾರ್ಸ್‌ ಮಾರ್ಸ್ ಒನ್‌ ಪ್ರಾಜೆಕ್ಟ್ ಸ್ಥಾಪನೆ

 2013

2013

ಮಂಗಳ ಗ್ರಹದ ಪ್ರಯಾಣ ಹೀಗೆ..


ಏಪ್ರಿಲ್‌ನಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳಿಂದ ಗಗನಯಾತ್ರಿ ಆಯ್ಕೆಯ ಬಗ್ಗೆ ಅರ್ಜಿ ಆಹ್ವಾನ

 2015

2015

ಮಂಗಳ ಗ್ರಹದ ಪ್ರಯಾಣ ಹೀಗೆ..


ಆಯ್ಕೆಯಾದ ಜನರಿಗೆ ತರಬೇತಿ ಆರಂಭ

2016

2016

ಮಂಗಳ ಗ್ರಹದ ಪ್ರಯಾಣ ಹೀಗೆ..


ಮಂಗಳ ಮತ್ತು ಭೂಮಿ ನಡುವೆ ಸಂವಹನಕ್ಕಾಗಿ ಉಪಗ್ರಹ ಉಡಾವಣೆ

 2018

2018

ಮಂಗಳ ಗ್ರಹದ ಪ್ರಯಾಣ ಹೀಗೆ..


ರೋವರ್‌ ಉಪಗ್ರಹ ಉಡಾವಣೆ

 2020

2020

ಮಂಗಳ ಗ್ರಹದ ಪ್ರಯಾಣ ಹೀಗೆ..


ಯಾನಿಗಳು ಮಂಗಳ ಗ್ರಹದಲ್ಲಿ ವಾಸ ಮಾಡಲು ಎರಡುಎರಡು ಲೈಫ್ ಸಪೋರ್ಟ್ ಸಿಸ್ಟಮ್ಸ್, ಎರಡು ಸರಬರಾಜು ಘಟಕಗಳು( Life Support Systems, and two Supply Units) ಮೇ ತಿಂಗಳಿನಲ್ಲಿನೌಕೆಯ ಮೂಲಕ ಕಳುಹಿಸಲಾಗುತ್ತದೆ. 2021ಕ್ಕೆ ಮಂಗಳ ಗ್ರಹದಲ್ಲಿ ಈ ನೌಕೆ ಇಳಿಯಲಿದೆ.

 2022

2022

ಮಂಗಳ ಗ್ರಹದ ಪ್ರಯಾಣ ಹೀಗೆ..


ಏಪ್ರಿಲ್‌ನಲ್ಲಿ ಮಂಗಳ ಗ್ರಹಕ್ಕೆ ತೆರಳಲು ಭೂಮಿಯಿಂದ ಮಾನವರ ಪ್ರಯಾಣ ಆರಂಭ.

 2023

2023

ಮಂಗಳ ಗ್ರಹದ ಪ್ರಯಾಣ ಹೀಗೆ..


ಮಂಗಳ ಗ್ರಹದಲ್ಲಿ ಇಳಿಯಲಿರುವ ಮಾನವರು

2024

2024

ಮಂಗಳ ಗ್ರಹದ ಪ್ರಯಾಣ ಹೀಗೆ..


ಅಕ್ಟೋಬರ್‌ನಲ್ಲಿ ಎರಡನೇ ತಂಡದಿಂದ ಮಂಗಳ ಗ್ರಹಕ್ಕೆ ಪ್ರಯಾಣ ಆರಂಭ

ಮಂಗಳ ಗ್ರಹದ ಪ್ರಯಾಣ ಹೀಗೆ..

ಮಂಗಳ ಗ್ರಹದ ಪ್ರಯಾಣ ಹೀಗೆ..

ವೀಡಿಯೋ ವೀಕ್ಷಿಸಿ

ಮಂಗಳ ಗ್ರಹದ ಪ್ರಯಾಣ ಹೀಗೆ..

ಮಂಗಳ ಗ್ರಹದ ಪ್ರಯಾಣ ಹೀಗೆ..


ವೀಡಿಯೋ ವೀಕ್ಷಿಸಿ

ಮಂಗಳ ಗ್ರಹದ ಪ್ರಯಾಣ ಹೀಗೆ..

ಮಂಗಳ ಗ್ರಹದ ಪ್ರಯಾಣ ಹೀಗೆ..

ಮಂಗಳ ಗ್ರಹದ ಪ್ರಯಾಣ ಹೀಗೆ..


ಮಾರ್ಸ್ ಒನ್‌ ಪ್ರಾಜೆಕ್ಟ್ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ:www.mars-one.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot