ಭಾರತದಲ್ಲಿ ಶಿಯೋಮಿ ಸಂಸ್ಥೆಯಿಂದ ಮಿ ಪವರ್ ಬ್ಯಾಂಕ್ 3i ಬಿಡುಗಡೆ!

|

ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾದಂತೆ ಸ್ಮಾರ್ಟ್‌ಫೋನ್‌ ಪವರ್ ದಾಹ ನೀಗಿಸುವ ಪವರ್‌ ಬ್ಯಾಂಕ್‌ಗಳು ಕೂಡ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಖಾಲಿಯಾಗದಂತೆ ನೋಡಿಕೊಳ್ಳುವುದಕ್ಕೆ ಪವರ್‌ಬ್ಯಾಂಕ್‌ ಗಳ ಅವಶ್ಯಕತೆ ಇದೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿಭಿನ್ನ ಸಾಮರ್ಥ್ಯದ ಪವರ್‌ಬ್ಯಾಂಕ್‌ಗಳನ್ನ ಪರಿಚಯಿಸಿವೆ. ಇದೀಗ ಶಿಯೋಮಿ ಸಂಸ್ಥೆ 10,000mAh ಮತ್ತು 20,000mAh ಸಾಮರ್ಥ್ಯ ಹೊಂದಿರುವ ಮಿ ಪವರ್ ಬ್ಯಾಂಕ್ 3i ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಮಿ ಪವರ್ ಬ್ಯಾಂಕ್ 3i

ಹೌದು, ಶಿಯೋಮಿ ಸಂಸ್ಥೆ ತನ್ನ ಹೊಸ ಮಿ ಪವರ್ ಬ್ಯಾಂಕ್ 3i ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ 10,000mAh ಮತ್ತು 20,000mAh ಎರಡೂ ಪವರ್ ಬ್ಯಾಂಕ್ ರೂಪಾಂತರಗಳನ್ನ ಪರಿಚಯಿಸಲಾಗಿದೆ. ಇನ್ನು ಈ ಎರಡು ಪವರ್‌ಬ್ಯಾಂಕ್‌ಗಳು USB ಟೈಪ್-ಸಿ ಮತ್ತು ಮೈಕ್ರೋ-USB ಪೋರ್ಟ್‌ಗಳ ಮೂಲಕ ಡ್ಯುಯಲ್ ಇನ್‌ಪುಟ್ ಅನ್ನು ಹೊಂದಿವೆ. ಈ ಪವರ್ ಬ್ಯಾಂಕುಗಳು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಅಲ್ಲದೆ ಮತ್ತು ಸುಧಾರಿತ 12-ಲೇಯರ್ ಸರ್ಕ್ಯೂಟ್ ಪ್ರೊಟೆಕ್ಷನ್ ಜೊತೆಗೆ ಸ್ಮಾರ್ಟ್ ಪವರ್ ಮ್ಯಾನೇಜ್ಮೆಂಟ್ ಫೀಚರ್ಸ್‌ ಹೊಂದಿವೆ. ಇದಲ್ಲದೆ ಇನ್ನು ಯಾವ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿ ಪವರ್ ಬ್ಯಾಂಕ್ 3i

ಮಿ ಪವರ್ ಬ್ಯಾಂಕ್ 3i ಡ್ಯುಯಲ್ ಇನ್‌ಫುಟ್ ಪೋರ್ಟ್‌ಗಳನ್ನು ಒಳಗೊಂಡಿದ್ದು, ಮೈಕ್ರೋ-ಯುಎಸ್‌ಬಿ ಮತ್ತು ಯುಎಸ್‌ಬಿ ಟೈಪ್-ಸಿ ಅನ್ನು ಹೊಂದಿದೆ. ಇನ್ನು ಯುಎಸ್‌ಬಿ ಟೈಪ್-ಸಿ ಯಿಂದ ಯುಎಸ್‌ಬಿ ಟೈಪ್-ಸಿ ಕೇಬಲ್‌ಗೆ ಬರುವ ಸ್ಮಾರ್ಟ್‌ಫೋನ್‌ಗಳ output ಮೂಲವಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಗೆ ದ್ವಿಗುಣಗೊಳ್ಳುತ್ತದೆ. ಅಲ್ಲದೆ ಈ ಎರಡೂ ಪವರ್ ಬ್ಯಾಂಕುಗಳು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಇನ್ನು 20,000mAh ಸಾಮರ್ಥ್ಯ ಹೊಂದಿರುವ Mi ಪವರ್ ಬ್ಯಾಂಕ್ 3i ಮೂರು output ಪೋರ್ಟ್‌ಗಳನ್ನು ಹೊಂದಿದ್ದರೆ, 10,000mAh ಆಯ್ಕೆಯು ಎರಡು output ಪೋರ್ಟ್‌ಗಳನ್ನು ಒಳಗೊಂಡಿದೆ.

ಮಿ ಪವರ್‌ ಬ್ಯಾಂಕ್‌ 3i

ಇನ್ನು ಮಿ ಪವರ್‌ ಬ್ಯಾಂಕ್‌ 3i ಮೂಲಕ ಬಳಕೆದಾರರು ಟು-ವೇ ಫಾಸ್ಟ್‌ ಚಾರ್ಜಿಂಗ್ ಫೀಚರ್ಸ್‌ ಅನ್ನು ಪಡೆಯಬಹುದಾಗಿದೆ. ಇದು ಮಿ ಪವರ್ ಬ್ಯಾಂಕ್ 3i ಅನ್ನು ಚಾರ್ಜ್ ಮಾಡಲು ಮತ್ತು ಮತ್ತೊಂದು ಡಿವೈಸ್‌ ಅನ್ನು ಏಕಕಾಲದಲ್ಲಿ ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಇನ್ನು ಈ ಪವರ್ ಬ್ಯಾಂಕಿನ ಅಲ್ಯೂಮಿನಿಯಂ ಮಿಶ್ರಲೋಹ ಕೇಸ್‌ ಹೆಚ್ಚಿನ ರಚನಾತ್ಮಕ ಶಕ್ತಿಯನ್ನು ಹೊಂದಿದೆ, ಅದು ಘರ್ಷಣೆ ಮತ್ತು ಪ್ರಭಾವವನ್ನು ತಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಆನೊಡೈಸ್ಡ್ ಫಿನಿಶ್ ಹೊಂದಿದ್ದು, ಬೆವರು ಮತ್ತು ತುಕ್ಕು ನಿರೋಧಕ ವ್ಯವಸ್ಥೆಯನ್ನು ಹೊಂದಿದೆ.

ಮಿ ಪವರ್ ಬ್ಯಾಂಕ್ 3i

ಮಿ ಪವರ್ ಬ್ಯಾಂಕ್ 3i 12-ಲೇಯರ್ ಸರ್ಕ್ಯೂಟ್ ಪ್ರೊಟೆಕ್ಷನ್ ಹಾರ್ಡ್‌ವೇರ್ ಅನ್ನು ಹೊಂದಿದ್ದು, ಇದು ಲಿಥಿಯಂ ಪಾಲಿಮರ್ ಬ್ಯಾಟರಿಗಳನ್ನು ಹೊಂದಿದೆ. ಇದನ್ನು ಲಿ-ಅಯಾನ್ ಬ್ಯಾಟರಿಗಳಿಗೆ ಹೋಲಿಸಿದರೆ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಇದರಲ್ಲಿ ಬ್ಲೂಟೂತ್ ಇಯರ್‌ಫೋನ್‌ಗಳು ಅಥವಾ ಫಿಟ್‌ನೆಸ್ ಬ್ಯಾಂಡ್‌ಗಳಂತಹ ಡಿವೈಸ್‌ಗಳನ್ನು ಚಾರ್ಜ್ ಮಾಡಲು ಪವರ್ ಬಟನ್ ಅನ್ನು ಡಬಲ್-ಟ್ಯಾಪ್ ಮಾಡುವ ಮೂಲಕ ಸಕ್ರಿಯಗೊಳಿಸಬಹುದಾದ ಕಡಿಮೆ-ಪವರ್ ಮೋಡ್ ಸಹ ಒಳಗೊಂಡಿದೆ. ಇದಲ್ಲದೆ 10,000mAh ಸಾಮರ್ಥ್ಯ ಹೊಂದಿರುವ ಪವರ್ ಬ್ಯಾಂಕ್ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹಾಗೇಯೇ 20,000mAh ಸಾಮರ್ಥ್ಯ ಹೊಂದಿರುವ ಪವರ್‌ ಬ್ಯಾಂಕ್‌ ಅನ್ನು ಏಳು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ಮಿ ಪವರ್ ಬ್ಯಾಂಕ್ 3i

ಇನ್ನು 10,000mAh ಸಾಮರ್ಥ್ಯ ಹೊಂದಿರುವ ಮಿ ಪವರ್ ಬ್ಯಾಂಕ್ 3i ಬೆಲೆ ರೂ. 899 ಆಗಿದ್ದು, ಇದು ಮಿ.ಕಾಮ್ ಮತ್ತು ಅಮೆಜಾನ್ ಮೂಲಕ ಲಭ್ಯವಿದೆ. ಇದನ್ನು ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಹಾಗೇಯೇ 20,000mAh ಸಾಮರ್ಥ್ಯ ಹೊಂದಿರುವ ಪವರ್ ಬ್ಯಾಂಕ್ ಬೆಲೆ ರೂ. 1,499. ಆಗಿದೆ. ಇದು ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದ್ದು, ಇದನ್ನು ಮಿ.ಕಾಮ್ ಮತ್ತು ಅಮೆಜಾನ್‌ನಿಂದ ಖರೀದಿಸಬಹುದಾಗಿದೆ.

Best Mobiles in India

English summary
Mi Power Bank 3i with 10,000mAh and 20,000mAh capacities has been launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X